ಗಾಂಜಾ ಮಾರುತ್ತಿದ್ದ ಎಂಬಿಎ ಪದವೀಧರನ ಬಂಧನ

0
7

ಬೆಂಗಳೂರು

          ಆಂಧ್ರಪ್ರದೇಶದ ವೈಜಾಕ್‍ನಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಮೋಜು ಮಾಡುತ್ತಿದ್ದ  ಎಂಬಿಎ ಪದವೀಧರ ಸೇರಿ ಇಬ್ಬರನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿ 9 ಕೆಜಿ 650 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

           ತೆಲಂಗಾಣದ ಕಮ್ಮಂ ನಗರದ ಬಾನುತೇಜ ರೆಡ್ಡಿ (19), ಮತ್ತಿಕೆರೆಯ ಸಂಜಯ್ ಕುಮಾರ್ (25) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 9 ಕೆಜಿ 650 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

           ಡಿಪ್ಲೋಮಾ ಪದವೀಧರನಾಗಿದ್ದ ಬಾನುತೇಜ ರೆಡ್ಡಿ ಆಂಧ್ರದ ವೈಜಾಕ್‍ನಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಎಂಬಿಎ ಪದವೀಧರನಾಗಿದ್ದ ಸಂಜಯ್ ಕುಮಾರ್ ಜೊತೆ ಸೇರಿ ಬಿಟಿಎಂ ಲೇಔಟ್, ಬನ್ನೇರುಘಟ್ಟ ಸೇರಿದಂತೆ, ಇನ್ನಿತರ ಕಡೆಗಳಲ್ಲಿ ಸಾಫ್ಟ್‍ವೇರ್ ಇಂಜಿನಿಯರ್‍ಗಳು, ವೃತ್ತಿಪರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು.

            ಗಾಂಜಾ ಮಾರಾಟದಿಂದ ಹೆಚ್ಚಿನ ಹಣ ಗಳಿಸುತ್ತಿದ್ದ ಆರೋಪಿಗಳು ಪದವೀಧರರಾದರೂ ಉದ್ಯೋಗಕ್ಕೆ ಹೋಗದೆ, ಇದೇ ವೃತ್ತಿಯನ್ನಾಗಿಸಿಕೊಂಡು ಮೋಜಿನ ಜೀವನ ನಡೆಸುತ್ತಿದ್ದರು. ಮೈಕೋ ಲೇಔಟ್ ಬಳಿ ಗಿರಾಕಿಯೊಬ್ಬನಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಇನ್ಸ್‍ಪೆಕ್ಟರ್ ರವಿಪ್ರಕಾಶ್ ಮತ್ತು ಅವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here