ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ಪರೀಕ್ಷರಣೆ

 ಚಳ್ಳಕೆರೆ

       ರಾಜ್ಯ ಚುನಾವಣಾ ಆಯೋಗ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಸಂಕ್ಷಿಪ್ತ ಪರೀಕ್ಷರಣೆ ಹಾಗೂ 19 ವರ್ಷ ವಯಸ್ಸಿನ ಮತದಾರರ ನೂತನ ಸೇರ್ಪಡೆಯ ಬಗ್ಗೆ ತರಬೇತಿ ಕಾರ್ಯಗಾರವನ್ನು ಏರ್ಪಡಿಸಿದ್ದು, ಚುನಾವಣಾ ಕಾರ್ಯವಾದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ ಹಾಗೂ ಸಿಬ್ಬಂದಿ ವರ್ಗ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಪ್ರೊಬೇಷನರಿ ಜಿಲ್ಲಾಧಿಕಾರಿ ಕೆ.ನಂದಿನಿದೇವಿ ಸೂಚಿಸಿದರು.

       ಅವರು, ಸೋಮವಾರ ಇಲ್ಲಿನ ಬಾಲಾಜಿ ಚಿತ್ರಮಂದಿರದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿ ಪರೀಕ್ಷರಣೆ ಸಂಬಂಧಪಟ್ಟಂತೆ ಮತಗಟ್ಟೆ ಅಧಿಕಾರಿ, ಸೂಪರ್‍ವೈಜರ್ ಹಾಗೂ ಚುನಾವಣಾ ಸಿಬ್ಬಂದಿಗೆ ಏರ್ಪಡಿಸಿದ್ದ ಮಾಹಿತಿ ಸಂಗ್ರಹ ಕುರಿತ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಂದು ಚುನಾವಣಾ ಸಂದರ್ಭದಲ್ಲೂ ಮತದಾನ ಸಂದರ್ಭದಲ್ಲಿ ಮಾತ್ರ ಸಿಬ್ಬಂದಿಗಳ ಲೋಪ ಕಂಡು ಬರುತ್ತಿದೆ. ಇದರಿಂದ ಕೆಲವು ವ್ಯಕ್ತಿಗಳು ಚುನಾವಣೆ ಆಯೋಗದ ವಿರುದ್ದವೇ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತನಕ ಪ್ರಕರಣ ದಾಖಲಿಸಿ ಚುನಾವಣಾ ಆಯೋಗದ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಕಳವಳ ಉಂಟು ಮಾಡುತ್ತಿದ್ದಾರೆ.

         ಚುನಾವಣಾ ಕಾರ್ಯವನ್ನು ನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿಯೂ ಪ್ರಾರಂಭದ ಹಂತದಲ್ಲೇ ಚುನಾವಣಾ ಆಯೋಈಗದ ನಿಯಮಗಳು, ಸಂಬಂಧಪಟ್ಟ ದಾಖಲಾತಿಗಳನ್ನು ಕರಾರೂ ಒಕ್ಕಾಗಿ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮತದಾರರ ಪಟ್ಟಿ ಸೇರ್ಪಡೆ ಮಾಡಬೇಕು. ಮನೆ ಮನೆಗೂ ಹೋಗಿ ಮಾಹಿತಿ ಸಂಗ್ರಹಿಸಬೇಕು. ಸಾರ್ವಜನಿಕರು ನೀಡುವ ಮಾಹಿತಿಯನ್ನು ಅನುಸರಿಸಿ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು. ಯಾವುದೇ ಅಧಿಕಾರಿ ಚುನಾವಣಾ ಕಾರ್ಯದಲ್ಲಿ ಅಲಕ್ಷ್ಯೆ ತೋರಿದಲ್ಲಿ ಅದು ಇಡೀ ವ್ಯವಸ್ಥೆ ಮೇಲೆಯೇ ದುಪ್ಷರಿಣಾಮ ಬೀರುತ್ತದೆ. ನಿಮ್ಮ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಜಾಗೃತಿ ವಹಿಸುವ ಮೂಲಕ ಯಾವುದೇ ಸಮಸ್ಯೆ ಉಂಟಾಗದಂತೆ ಜಾಗೃತೆ ವಹಿಸುವಂತೆ ಮನವಿ ಮಾಡಿದರು.

       ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ, ಪ್ರಸ್ತುತ ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಮತದಾರರ ಪಟ್ಟಿಗೆ ಸಂಬಂಧಪಟ್ಟಂತೆ ಫಾರಂ ನಂ. 6,7,8 ಹಾಗೂ 8ಎ ಗಳನ್ನು ಭರ್ತಿ ಮಾಡುವ ಕುರಿತು ಹಾಗೂ ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಪಡೆಯುವ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. ಪ್ರಸ್ತುತ ನ.10ರಿಂದ ನ.20ರ ತನಕ 1 ಜನವರಿ 2019ಕ್ಕೆ 18 ವರ್ಷ ತುಂಬುವ ಯುವ ಮತದಾರರನ್ನು ಮಾತ್ರ ಸೇರ್ಪಡೆ ಮಾಡಲು ಅವಕಾಶವಿದೆ. ಆದರೆ, ಕೆಲವು ಮತಗಟ್ಟೆ ಅಧಿಕಾರಿಗಳು ವಯಸ್ಸಿನ ಅಂತರ ಕಡಿಮೆ ಇದ್ದರೂ ದಾಖಲಾತಿಯನ್ನು ನೀಡುತ್ತಿದ್ಧಾರೆ. ಇದು ಸರಿಯಾದ ಕ್ರಮವಲ್ಲ. ಸೂಚನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಸ್ವಷ್ಟೀಕರಣ ಬೇಕಾದಲ್ಲಿ ನನ್ನಾಗಲಿ ಅಥವಾ ಚುನಾವಣೆ ಶಾಖೆಯನ್ನಾಗಿ ಸಂಪರ್ಕಿಸುವಂತೆ ಮನವಿ ಮಾಡಿದರು.

          ತರಬೇತುದಾರ, ಅರ್ಥಶಾಸ್ತ್ರ ಪ್ರಾಧ್ಯಾಪಕ ಶಿವಪ್ರಸಾದ್ ಮಾತನಾಡಿ, ಚುನಾವಣಾ ಆಯೋಗ ನಿಗಧಿ ಪಡಿಸಿದ ಫಾರಂ-06ರಲ್ಲಿ ಸೇರ್ಪಡೆ, 07ರಲ್ಲಿ ಹೆಸರು ಡಿಲೀಟ್ ಮಾಡುವುದು, ಫಾರಂ-8ರಲ್ಲಿ ತಪ್ಪುಗಳನ್ನು ಸರಿ ಪಡಿಸುವುದು, 8ಎ ನಲ್ಲಿ ವರ್ಗಾವಣೆಗೆ ಸಂಬಂಧಪಟ್ಟ ಮಾಹಿತಿಯನ್ನು ಭರ್ತಿ ಮಾಡಬೇಕು. ಯಾರಾದರೂ ಸೈನಿಕರು ಕಾರ್ಯನಿರ್ವಹಿಸುತ್ತಿದ್ದ, ಈ ಕ್ಷೇತ್ರ ವ್ಯಾಪ್ತಿಯ ಮತದಾರರಾಗಿದ್ದರೆ. ಅವರಿಗೆ ಫಾರಂ 6ಎ ನಲ್ಲಿ ವಿವರವನ್ನು ಭರ್ತಿ ಮಾಡಿಕೊಡಬೇಕು. ಮತದಾರರ ಪಟ್ಟಿ ಸೇರ್ಪಡೆಗೆ ನಿಗಧಿ ಪಡಿಸಿದ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಪಡೆಯಬೇಕು. ಫಾರಂ-7ರಲ್ಲಿ ಹೆಸರು ಕೈಬಿಡಲು ದಾಖಲಾತಿಯನ್ನು ಪಡೆದೇ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

          ಕಂದಾಯಾಧಿಕಾರಿ ವಿ.ಈರಮ್ಮ ಮಾತನಾಡಿ, ನಗರಸಭಾ ವ್ಯಾಪ್ತಿಯ 31 ವಾರ್ಡ್‍ಗಳಲ್ಲಿ ಯಾರಾದರೂ ಮೃತಪಟ್ಟಿದ್ದಲ್ಲಿ ಅ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಗೆ ನೀಡಲಾಗುವುದು. ನಗರದ ವಿವಿಧ ಮತಗಟ್ಟೆ ಅಧಿಕಾರಿಗಳು ಸಂಪರ್ಕಿಸಿದರೂ ಅವರಿಗೆ ಅವಶ್ಯವಿರು ಮಾಹಿತಿಯನ್ನು ಲಿಖಿತ ಮೂಲಕ ನೀಡಲಾಗುವುದು ಎಂದರು.

          ಸಭೆಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 258 ಮತಗಟ್ಟೆ ಕೇಂದ್ರದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಹಾಜರಿದ್ದರು. ಚುನಾವಣಾ ಶಿರಸ್ತೇದಾರ್ ಮಂಜುನಾಥಸ್ವಾಮಿ, ಪ್ರಕಾಶ್, ನಾಗರಾಜು, ಓಬಳೇಶ್, ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap