ಚಿದಾನಂದಮೂರ್ತಿ ಸಾಹಿತ್ಯ ಪ್ರತಿಷ್ಠಾನಕ್ಕೆ 7 ಲಕ್ಷ ಅನುದಾನ

ಹಿರೇಕೋಗಲೂರು:

          ಗ್ರಾಮದ ಖ್ಯಾತ ಸಂಶೋಧಕರು, ಚಿಂತಕರು, ಹಿರಿಯ ಸಾಹಿತಿಗಳಾದ ರಾಜ್ಯ ಕನ್ನಡ ಶಕ್ತಿ ಕೇಂದ್ರದ ಕಾರ್ಯಾಧ್ಯಕ್ಷರೂ, ಕನ್ನಡ ನಾಡಿನ ಜಲ-ನೆಲ- ಭಾಷೆಗೆ ಕುತ್ತುಬಂದಾಗ ಪ್ರಪ್ರಥಮವಾಗಿ ಧ್ವನಿ ಎತ್ತಿ ಹೋರಾಟನಡೆಸುವ ಧೀಮಂತವ್ಯಕ್ತಿಯಾದ ನಾಡೋಜ ಡಾ, ಎಂ. ಚಿದಾನಂದ ಮೂರ್ತಿ ಅವರ ಹೆಸರನ್ನು ಗ್ರಾಮದಲ್ಲಿ ಶಾಶ್ವತವಾಗಿ ಉಳಿಸುವ ಹಿನ್ನೆಲೆಯಲ್ಲಿ ಸ್ಥಾಪನೆಗೊಂಡ ಸಾಹಿತ್ಯ ಪ್ರತಿಷ್ಠಾನವು ಸ್ಥಳೀಯ ಗ್ರಾಮ ಪಂಚಾಯಿತಿಗೆ ನಿವೇಶನಕ್ಕಾಗಿ ಆರ್ಜಿ ಸಲ್ಲಿಸಿದ್ದರ ಮೇರೆಗೆ ಗ್ರಾಮದ ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿ 50 ಅಡಿ,ಅಗಲ ಮತ್ತು 70 ಅಡಿ ಉದ್ದಳತೆಯನ್ನುಳ್ಳ ನಿವೇಶನವನ್ನು ಒದಗಿಸಿದ್ದರ ಪ್ರಯುಕ್ತ ಜಿಲ್ಲಾ ಕನ್ನಡ, ಸಂಸ್ಖತಿ ಇಲಾಖೆಯ ಮೂಲಕ ಸರ್ಕಾರಕ್ಕೆ 32 ಲಕ್ಷ ರೂ ಗಳ ಅನುದಾನ ಬಿಡುಗಡೆ ಮಾಡುವಂತೆ ಪ್ರತಿಷ್ಠಾನ ಮನವಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ ಘನ ಸರ್ಕಾರ ಆಗ 25 ಲಕ್ಷ ರೂಗಳ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು,

           ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸಂಭಂದ ಪಟ್ಟ ಕಾಮಗಾರಿಗೆ 7, ಲಕ್ಷ ರೂಗಳ ಎಸ್ಟಿಮೇಟ್ ಜೊತೆಯಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪಿ ಎಸ್ ಮಾಲತಿ. ಕನ್ನಡ,ಸಂಸ್ಕತಿ,ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅನುದಾನ ಬಿಡುಗಡೆ ಮಾಡಿದ ಆದೇಶ ಕಳಿಸಿಕೊಟ್ಟಿದ್ದಾರೆ.

             ರಾಜ್ಯಪಾಲರಿಗೂ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೂ, ಕನ್ನಡ, ಸಂಸ್ಕತಿ, ಸಚಿವೆಯರಾದ ಜಯಮಾಲಾ ಅವರಿಗೂ, ಕನ್ನಡ, ಸಂಸ್ಕತಿ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್ ಅವರಿಗೂ ಪ್ರತಿಷ್ಠಾನದ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಉಪಾಧ್ಯಕ್ಷ ಎಂ, ಪಂಚಾಕ್ಷರಯ್ಯ, ಸದಸ್ಯ ರುಗಳಾದ ಎ ಗಣೆಶಪ್ಪ, ಎಂ, ಸಿದ್ದಪ್ಪ, ಎಸ್ ರಾಜಶೇಖರಪ್ಪ, ಹೆಚ್ ಆರ್ ವೀರಭದ್ರಪ್ಪ, ಹೆಚ್ ಯು, ಮಲ್ಲಿಕಾರ್ಜುನ್, ಟಿ ಆರ್ ತಿರುಮಲ.ಮತ್ತು ಕೆ ಜಿ ಜಗದೀಶ್ ಅವರುಗಳು ಪತ್ರಿಕಾ ಹೇಳಿಕೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap