ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

0
12

ಶಿಗ್ಗಾವಿ 

      ಇತಿಹಾಸ ಗೊತ್ತಿದ್ದರೆ ನಮ್ಮ ಭವಿಷ್ಯವನ್ನು ನಾವು ಬರೆಯಬಹುದಾಗಿದೆ, ವಿಜ್ಞಾನ, ಶಿಕ್ಷಣ ಮತ್ತು ಕೃಷಿಯಲ್ಲಿ ನಾವು ಮುಂದೆ ಇದ್ದು ಆ ಮುಂದು ವರೆದ ಸಾಧನೆಯ ಹಾದಿಯಲ್ಲಿ ಕೆಲವು ತಪ್ಪುಗಳು ನಡೆದಿರುವದು ಕಂಡು ಬಂದಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

          ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ಶಿಗ್ಗಾವಿ ವತಿಯಿಂದ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಂಜುಡಂಪ ವರದಿ ಬಂದು ದೂಳು ತಿನ್ನುತ್ತಿದೆ ವರದಿಗೆ ಬಂದ ಹಣ ಸರಿಯಾಗಿ ಬಳಕೆಯಾಗಿಲ್ಲ ಜೊತೆಗೆ ಹೆಚಿನ ಅನುಧಾನವನ್ನು ನೀಡಲು ವಿಫಲರಾಗಿದ್ದಾರೆ, ಇದರ ವಿರುದ್ದ ಕನ್ನಡ ಪರ ಸಂಘಟನೆಗಳ ಹೋರಾಟ ನಡೆದಿದೆ ಎಂದ ಅವರು ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳುವಿಗಾಗಿ ಒಂದಾಗುವ ಅವಶ್ಯಕತೆ ಇದೆ ಇತ್ತೀಚಿನ ದಿನಗಳಲ್ಲಿಯ ಪ್ರಗತಿಯನ್ನು ನೊಡಿದಾಗ ಪ್ರತ್ಯೆಕತೆಯ ಕೂಗು ಕೆಳುವ ಸ್ಥಿತಿ ನಿರ್ಮಾಣವಾಗಿದೆ ಎಸ್‍ಡಿಪಿ ಯೋಜನೆ ಮತ್ತು ನಂಜುಡಪ್ಪ ವರದಿಗೆ ಪ್ರಾಮುಖ್ಯತೆ ನೀಡಬೇಕಿದೆ, ದೇಶದ ಶೇ 70 ರಷ್ಟು ಪ್ರಗತಿಯ ಉತ್ಪತ್ತಿ ಕೃಷಿಯಿಂದ ಆಗುತ್ತದೆ, ಶಿಕ್ಷಣದ ಪ್ರಗತಿ ಸುಧಾರಿಸಬೇಕಿದೆ ಇಂದು ಕೌಶಲ್ಯ ಭರಿತ ಲಶಿಕ್ಷಣ ಕ್ಕೆ ಒತ್ತು ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ದಿಗೆ ಕಂಕಣ ಬದ್ದವಾಗಿ ನೀಲ್ಲಬೇಕಿದೆ ಕನ್ನಡ ನಾಡು ಶಾಶ್ವತ ನಾವೇಲ್ಲ ನಿಮಿತ್ಯ ಮಾತ್ರ ಹೆಣ್ಣು ಮಕ್ಕಳನ್ನು ಉಳಿಸಿ ಹೆಣ್ಣು ಮಕ್ಕಳನ್ನು ಓದಿಸಿ ಎಂಬಂತೆ ಭಾರತಾಂಭೆಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

       ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಪ್ರೋ. ರಂಜಾನ್ ಕಿಲ್ಲೆದಾರ ಉಪನ್ಯಾಸ ನೀಡಿದರು, ತಹಶೀಲ್ದಾರ ಶಿವಾನಂದ ರಾಣೆ ಧ್ವಜಾರೋಹಣ ನೇರೆವೆರಿಸಿದರು,

       ಕಾರ್ಯಕ್ರಮದಲ್ಲಿ ತಾಲೂಕಿನ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ಇದಕ್ಕೂ ಮೊದಲು ಪಟ್ಟಣದ ಸಂತೆ ಮೈಧಾನದಿಂದ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಸಾರೋಟದಲ್ಲಿ ಭಾವಚಿತ್ರದ ಭವ್ಯ ಮೇರವಣಿಗೆ ಮತ್ತು ರೂಪಕಗಳ ಪ್ರದರ್ಶನದೊಂದಿಗೆ ಪ್ರಮೂಖ ಬೀದಿಗಳಲ್ಲಿ ಸಂಚರಿಸಿ ತಾಲೂಕಾ ಕ್ರೀಡಾಂಗಣ ಸೇರಿತು.

         ಇದೇ ಸಂದರ್ಭದಲ್ಲಿ ವಿವಿದ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಭಾಷಾಭಿಮಾನಗಳುಳ್ಳ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.

         ಕಾರ್ಯಕ್ರಮದಲ್ಲಿ ತಾಪಂ ಅದ್ಯಕ್ಷೆ ಪಾರವ್ವ ಆರೇರ್, ಪುರಸಭೆ ಅದ್ಯಕ್ಷ ಶಿವಪ್ರಸಾದ ಸುರಗಿಮಠ, ಎ.ಪಿ.ಎಮ್.ಸಿ ಅಧ್ಯಕ್ಷೆ ಪ್ರೇಮಾ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಹೇಳವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವೈ.ಹೊಸಮನಿ, ಕನ್ನಡಪರ ಹೋರಾಟಗಾರರಾದ ಸಂತೋಷಗೌಡ ಪಾಟೀಲ್, ನಿಂಗಪ್ಪ ಬೆಂಚಳ್ಳಿ, ದುರಗಪ್ಪ ವಡ್ಡರ, ಬಸವರಾಜ ಜೆಕ್ಕಿನಕಟ್ಟಿ, ಬಸಲಿಂಗಪ್ಪ ನರಗುಂದ, ಬಸವರಾಜ ಮಲ್ಲೂರ, ಪವನ ಬಾರಕೆರ, ವಿಜಯಲಕ್ಷ್ಮೀ ಗುಡಮಿ, ಸೇರಿದಂತೆ ತಾಲೂಕಿನ ಜನಪ್ರತಿನಿದಿಗಳು ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here