ಪರಿವರ್ತನಾ ಜನಾಂದೋಲನ ಜಿಲ್ಲಾ ಸಮಿತಿಯಿಂದ ಶಿವಕುಮಾರ ಉದಾಸಿ ಅವರಿಗೆ ಮನವಿ…!!!

ಹಾವೇರಿ :

       ಮಕ್ಕಳ ಹಕ್ಕುಗಳ ಬಗ್ಗೆ ಮುಂಬರುವ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಹೆಚ್ಚು ಒತ್ತು ಕೊಡಬೇಕೆಂದು ಸಾಮಾಜಿಕ ಪರಿವರ್ತನಾ ಜನಾಂದೋಲನ ಜಿಲ್ಲಾ ಸಮಿತಿ ವತಿಯಿಂದ ಬಿಜೆಪಿ ಪಕ್ಷದ ಲೋಕಸಭೆ ಅಭ್ಯರ್ಥಿ ಶಿವಕುಮಾರ ಉದಾಸಿಯವರಿಗೆ ಮನವಿ ಸಲ್ಲಿಸಲಾಯಿತು.

       ಉತ್ತಮ ಗುಣಮಟ್ಟದ ಸರ್ಕಾರಿ ಆರೋಗ್ಯ ಸೌಲಭ್ಯ ಎಲ್ಲರಿಗೂ ಲಭ್ಯವಾಗಬೇಕು. ಪ್ರತಿಯೊಬ್ಬರಿಗೂ ಸುರಕ್ಷಿತ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವುದು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಲಭ್ಯವಾಗುವಂತೆ
ಮಾಡುವುದು. ಯಾವ ಸ್ಥಳಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲವೋ ಅಂಥ ಕಡೆಗಳಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಮತ್ತು ಪ್ರಸ್ತುತ ಒಳಚರಂಡಿ ಇರುವ ಪ್ರದೇಶದಲ್ಲಿ ಎಲ್ಲೆಲ್ಲಿ ಹಾಳಾಗಿದೆಯೋ ಅಲ್ಲಿ ದುರಸ್ತಿಪಡಿಸುವುದು. ಎಲ್ಲಾ ಮಕ್ಕಳಿಗೆ 12ನೇ ತರಗತಿವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು.

        ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅಗತ್ಯವಿರುವಷ್ಟು ವಿಷಯವಾರು ಶಿಕ್ಷಕರನ್ನು ನೇಮಕ ಮಾಡುವುದು. ಎಲ್ಲಾ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಅಂದರೆ ಪೀಠೋಪಕರಣ, ಗ್ರಂಥಾಲಯ ಮತ್ತು ಆಟದ ಮೈದಾನ ವ್ಯವಸ್ಥೆ ಮಾಡುವುದು.ಶಾಲೆಗಳು ಬೋಧನೆಗೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸುವಂತೆ ಮಾಡುವುದು. ಎಲ್ಲಾ ಶಾಲೆಗಳಲ್ಲಿ ಹುಡುಗರು ಹಾಗೂ ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡುವುದು ಮತ್ತು ಅವರು ಬಳಸುವ ಸ್ಥಿತಿಯಲ್ಲಿರುವಂತೆ ಸೂಕ್ತವಾಗಿ ನಿರ್ವಹಿಸುವುದು.

       ಉತ್ತಮ ಗುಣಮಟ್ಟದ ಮಧ್ಯಾಹ್ನದ ಬಿಸಿಯೂಟವನ್ನು ಎಲ್ಲಾ ಶಾಲೆಗಳಿಗೆ ಪೂರೈಸುವುದು; ಮಧ್ಯಾಹ್ನದ ಬಿಸಿಊಟ ಸೌಲಭ್ಯವನ್ನು ಎಲ್ಲಾ ಮಕ್ಕಳಿಗೆ ಒದಗಿಸುವುದು.ಮಕ್ಕಳಿಗೆ ಶಾಲೆಗೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದು.ಎಲ್ಲಾ ಗ್ರಾಮಗಳನ್ನು ಮತ್ತು ಪಟ್ಟಣಗಳನ್ನು ಸಂಪರ್ಕಿಸಲು ಅಗತ್ಯ ಸಾರ್ವಜನಿಕ ಸಾರಿಗೆ ಸೇವೆಯನ್ನು ಒದಗಿಸುವುದು ಹಾಗೂ ಈ ಮೂಲಕ ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದು. ದಲಿತರು ಮೃತಪಟ್ಟಾಗ ಅವರು ಹತ್ತಿರದ ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಸೌಲಭ್ಯ ಮಾಡಿಕೊಡುವುದು (ಮಾಡಿಕೊಡಬೇಕು) ಶಾಲೆ, ಮನೆ ಹಾಗೂ ಸಾರ್ವಜನಿಕ ಸ್ಥಳ ಸೇರಿದಂತೆ ಎಲ್ಲೆಡೆ ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವುದು.

        ದೈಹಿಕ ಶಿಕ್ಷೆ ತಡೆಗಟ್ಟುವುದು- ಮಕ್ಕಳನ್ನು ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ದಂಡಿಸುವ ಶಿಕ್ಷಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು. ದೇವದಾಸಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು. ಬಾಲ್ಯ ವಿವಾಹವನ್ನು ನಿಷೇಧಿಸುವ ಕಾನೂನನ್ನು ಉತ್ತಮ ವಿಧಾನದಲ್ಲಿ ಬಲಿಷ್ಠಗೊಳಿಸುವುದು ಹಾಗೂ ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು. ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ದಲಿತರಿಗೆ ಮೀಸಲಾತಿ ನೀಡುವ ಕಾನೂನನ್ನು ಜಾರಿಗೆ ತರುವುದು.

     ಜೀತಪದ್ಧತಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಬಲಿಷ್ಠಗೊಳಿಸುವುದು ಹಾಗೂ ಮೇಲ್ವಿಚಾರಣೆ ನಡೆಸುವುದು. ಪೋಷಕರಿಗೆ ಸ್ಥಳೀಯವಾಗಿ ಉದ್ಯೋಗ ಅವಕಾಶಗಳು ಲಭಿಸುವಂತೆ ಮಾಡುವುದರ ಮೂಲಕ, ಅವರು ವಲಸೆಹೋಗುವುದನ್ನು ತಡೆದು, ಮಕ್ಕಳು ಪೋಷಕರಿಂದ ದೂರವಾಗದಂತೆ ಕ್ರಮ ಕೈಗೊಳ್ಳುವುದು. ಪ್ರತಿಯೊಬ್ಬರನ್ನೂ ಸಮಾನವಾಗಿ ಪರಿಗಣಿಸುವುದು ಜಾತಿ, ಧರ್ಮ, ಲಿಂಗ ಮತ್ತು ಲೈಂಗಿಕ ತಾರತಮ್ಯ ಇಲ್ಲದಂತೆ ಖಾತ್ರಿಪಡಿಸುವ ಕ್ರಮ ಕೈಗೊಳ್ಳುವುದು. ಧೀರ್ಘಾವಧಿ ತರಗತಿ ಮಟ್ಟದಲ್ಲಿ ಕಲಿಕೆ ಮತ್ತು ಬೋಧನೆಯಲ್ಲಿ ತಾಂತ್ರಿಕ ಸುಧಾರಣೆಯನ್ನು ತರುವುದು.

     ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಈ ಮೂಲಕ ಗ್ರಾಮಸ್ಥರು ಸರ್ಕಾರದ ಯೋಜನೆಗಳಿಗೆ ಹಾಗೂ ಸೌಲಭ್ಯಗಳಿಗೆ ಸುಲಭವಾಗಿ ತೆರೆದುಕೊಳ್ಳುವಂತೆ ಕ್ರಮ ಕೈಗೊಳ್ಳುವುದು ಸೇರಿದಂತೆ ಅನೇಕ ಕ್ರಮಗಳನ್ನು ತಮ್ಮ ಪ್ರನಾಳಿಕೆಯಲ್ಲಿ ಸೂಚಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಎಸ್ ಪಿ ಜೆ ಜಿಲ್ಲಾ ಸಂಚಾಲಕರಾದ ಹಸೀನಾ ಹೆಡಿಯಾಲ , ಬುಡಕಟ್ಟು ಜನಾಂಗದ ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ಬದಾಗಿ, ಪುಟ್ಟಪ್ಪ ಹರವಿ, ಸಿಬ್ಬಂದಿಯಾದ ಮಂಗಳಾ ಹೀರೆಮಠ, ಎಸ್ ಎಫ್ ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಸೇರಿದಂತೆ ತೆರದಾತಂಗುದಾಣದ ಮಕ್ಕಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap