ಟಿಪ್ಪು ಸುಲ್ತಾನ್ ರಾಜ್ಯ ರಕ್ಷಣೆಗಾಗಿ ಬ್ರಿಟೀಷರ ಗುಂಡಿಗೆ ಬಲಿಯಾದ ಮಹಾನ್ ದೇಶಭಕ್ತ: ವೈ.ತಿಪ್ಪೇಸ್ವಾಮಿ

ಹೊಳಲ್ಕೆರೆ:

        ಟಿಪ್ಪು ಸುಲ್ತಾನ್ ಮೈಸೂರು ರಾಜ್ಯ ರಕ್ಷಣೆಗಾಗಿ ಬ್ರಿಟೀಷರ ವಿರುಧ್ದ ಹಲವಾರು ಬಾರಿ ಯುದ್ದವನ್ನು ಮಾಡಿ ನಂತರ ಬ್ರಿಟಿಷರ ರಾಜಿಗೆ ಒಪ್ಪದಿದ್ದಾಗ ಅವರ ಗುಂಡಿಗೆ ಬಲಿಯಾದ ಮಹಾನ್ ದೇಶಭಕ್ತ ಎಂದು ಇಂದಿಗೂ ಅವರ ಹೆಸರು ಚಿರಸ್ಥಾಯಿಯಾಗಿ ಇತಿಹಾಸದಲ್ಲಿ ಉಳಿದಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾಗಿರುವ ತಹಶೀಲ್ದಾರ್ ವೈ.ತಿಪ್ಪೇಸ್ವಾಮಿ ಪ್ರತಿಪಾದಿಸಿದರು.

        ತಾಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪ.ಪಂಚಾಯಿತಿ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ನಂತರ ಮಾತನಾಡಿದರು.

        ಟಿಪ್ಪು ಸುಲ್ತಾನ್ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ದೇವನಹಳ್ಳಿ ಪಟ್ಟಣದ ಹೈದರಾಲಿ ಮತ್ತು ಫಾತಿಮಾ ಮಗನಾಗಿ 1750 ನ.10ರಂದು ಜನಿಸಿದರು. ಟಿಪ್ಪು ಸುಲ್ತಾನ್ ಸುಮಾರು 46 ವರ್ಷಗಳ ಕಾಲ ಬ್ರಿಟೀಷರ ವಿರುಧ್ದ ಹೋರಾಡಿದ ಮಹಾ ವೀರಾಗ್ರಣಿ. ಟಿಪ್ಪು ಸುಲ್ತಾನ್ ಕೇವಲ ಮುಸಲ್ಮಾನ್ ಧರ್ಮಕ್ಕೆ ಮಾತ್ರ ಪ್ರೋತ್ಸಾಹ ಸಹಕಾರ ನೀಡುತ್ತಿರಲಿಲ್ಲ. ಹಿಂದೂ ಧರ್ಮದವರಿಗೆ ಅನೇಕ ಸಹಾಯ ಸಹಕಾರಗಳನ್ನು ಯಾವುದೇ ಮತೀಯ ಭೇದ ಭಾವ ಇಲ್ಲದೆ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದ ಮಹಾವೀರ.

       ಬ್ರಿಟಿಷರ ವಿರುಧ್ದ 5 ಘಟನೆಗಳಲ್ಲಿ ಯುಧ್ದ ನಡೆದಾಗ ನೆಪೋಲಿಯನ್ ಸಹಾಯ ಪಡೆಯಬೇಕೆಂಬ ಇರಾದೆ ಇದ್ದರು ಆತನಿಗೆ ಸಾಧ್ಯವಾಗಲಿಲ್ಲ. ಟಿಪ್ಪು ಸುಲ್ತಾನ್ ಪ್ರಥಮ ಬಾರಿಗೆ ರಾಕೇಟ್ ನಿರ್ಮಾಣ ಮಾಡಿದ ರುವಾರಿಯಾಗಿದ್ದಾರೆ. ಈ ತಂತ್ರಜ್ಞಾನವನ್ನು ಬ್ರಿಟೀಷರು ಬಳಸಿಕೊಂಡು ಟಿಪ್ಪು ಮೇಲೆ ರಾಕೇಟ್ ಸಮರವನ್ನು ಯುದ್ದದಲ್ಲಿ ಮಾಡಿದ ಬಗ್ಗೆ ಉದಾಹರಣೆಗಳಿವೆ. ಮೈಸೂರು ರಾಜ್ಯವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು 5 ಬಾರಿ ಯುಧ್ದವನ್ನು ನಡೆಸಿ ಕೊನೆಗೆ ಬ್ರಿ.ಟಿಷರ ಮೋಸಕ್ಕೆ ತನ್ನ ಜೀವವನ್ನೆ ಬಲಿಕೊಟ್ಟ ಮಹಾನ್ ದೇಶಭಕ್ತ ಎಂದು ತಹಶೀಲ್ದಾರ್ ಬಣ್ಣಿಸಿದರು.

      ಉಪನ್ಯಾಸವನ್ನು ಅಕ್ಸಾ ಮಸೀದಿಯ ಅಧ್ಯಕ್ಷ ಇಲಿಯಾಸ್ ಖಾನ್ ಮಾತನಾಡಿ ಟಿಪ್ಪು ಸುಲ್ತಾನ್ ಒಬ್ಬ ಮಹಾನ್ ಮಾನವತವಾದಿ ಮಹಿಳೆಯರು, ಹೆಣ್ಣುಮಕ್ಕಳು ಮತ್ತು ಹಿರಿಯರಿಗೆ ಅಪಾರವಾದ ಗೌರವವನ್ನು ನೀಡುತ್ತಿದ್ದರು. ಟಿಪ್ಪು ಸುಲ್ತಾನ್ ಒಬ್ಬ ಅಪ್ಪಟ್ಟ ಕನ್ನಡಿಗ. ಇವರು ಯಾವುದೇ ಜಾತಿ ಧರ್ಮವನ್ನು ಬೇರ್ಪಡಿಸಲಿಲ್ಲ. ಟಿಪ್ಪುಸುಲ್ತಾನ್ ಹಿಂದೂ ಧರ್ಮಕ್ಕೆ ಸೇರಿದ ಗೋವರ್ಧನ್ ಪಾಂಡ್ಯನ್ ಅವರಿಂದ 7 ವರ್ಷಗಳ ಕಾಲ ಹಿಂದೂಧರ್ಮದ ಬಗ್ಗೆ ಮತ್ತು ಮುಸ್ಲಿಂ ಧರ್ಮದ ಬಗ್ಗೆ ಓಬೇದುಲ್ಲಾ ಖಾನ್ ಅವರಿಂದ ತರಬೇತಿಯನ್ನು ಪಡೆದಿದ್ದರು.

       ಸಂವಿಧಾನದಲ್ಲಿ ಟಿಪ್ಪು ಅವರ ಕೊಡುಗೆ ಅಪಾರವಿದೆ. ಇವರೊಬ್ಬ ಕರ್ನಾಟಕದ ಹೆಮ್ಮೆಯ ಪುತ್ರ ಎಂದು ಇತಿಹಾಸದಲ್ಲಿ ಇಂದಿಗೂ ಇದೆ. ಟಿಪ್ಪು ಸುಲ್ತಾನ್ ಅವರ ಮುಖ್ಯ ಗುರಿ ಮೈಸೂರು ರಾಜ್ಯವನ್ನು ಬ್ರಿಟೀಷರಿಂದ ರಕ್ಷಣೆ ಮಾಡುವುದೆ ಆಗಿತ್ತು. ಟಿಪ್ಪು ಸುಲ್ತಾನ್ ತನ್ನ ಆಡಳಿತದಲ್ಲಿ ಮಧ್ಯಪಾನ ನಿಷೇಧ ಉಳಗಮಾನ ಪದ್ದತಿ, ರೈತರಿಗೆ ಉಚಿತ ಬೀಜ, ಆರ್ಥಿಕ ಧನಸಹಾಯವನ್ನು ಮಾಡುತ್ತಿದ್ದರು. ಟಿಪ್ಪು ಸುಲ್ತಾನ್ ಪರಧರ್ಮ ಸಹಿಷ್ಣತೆಗೆ ಹೆಚ್ಚು ಒತ್ತು ನೀಡಿದ್ದರು. ಇವರು ವಿದೇಶದಿಂದ ರೇಷ್ಮೆ ಬೆಳೆಯನ್ನು ರಾಜ್ಯದಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದ ಮೊದಲಿಗರು. ಹಂಪೆ ಮೈಸೂರು ರಾಜ್ಯದಲ್ಲಿ ಉಳಿಯಲು ಅವರೇ ಕಾರಣ ಈ ಕೀರ್ತಿ ಅವರಿಗೆ ಸಲ್ಲುತ್ತದೆ. ಟಿಪ್ಪು ಮತ್ತು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಇವರನ್ನು ಕಂಡರೆ ಬ್ರಿಟೀಷರ ಎದೆ ನಡುಗುತ್ತಿತ್ತು ಎಂದು ತಿಳಿಸಿದರು.

         ಸಭೆಯಲ್ಲಿ ಟಿಪ್ಪು ಸುಲ್ತಾನ್ ಮಹಾ ವೇದಿಕೆಯ ಅಧ್ಯಕ್ಷ ಅಲೀಮುಲಾ ಷರೀಫ್, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಟಿಪ್ಪು ಜಯಂತಿ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿರಿಸಿದರು.ಮುಖ್ಯ ಅತಿಥಿಗಳಾಗಿ ಪ.ಪಂ ಅಧ್ಯಕ್ಷೆ ಸವಿತಾ ಬಸವರಾಜ್, ಜಾಮೀಯಾ ಮಸೀದಿಯ ಮುತವಲ್ಲಿ ಅಲ್ತಾಫ್ ಹುಸೇನ್, ಮುಖಂಡರಾದ ದಾವುದ್ ಆಸೀಫ್, ಸಯ್ಯದ್, ನುಸರತ್ ಅಲಿಖಾನ್, ಹಬೀಬುಲ್ಲಾ ರಹೆಮಾನ್, ಇಂದೂಧರ ಮೂರ್ತಿ, ಹಿರಿಯ ವಕೀಲ ಬಿ.ಎಸ್.ಪ್ರಭಾಕರ್, ತಾ.ಪಂ ಇಓ ಮಹಾಂತೇಶ್ ಮುಂತಾದವರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ವರ್ ಸ್ವಾಗತಿಸಿದರು. ಹಿಂದುಳಿದ ವರ್ಗದ ಸಹಾಯಕ ನಿರ್ದೇಶಕ ಎನ್.ಶಿವಮೂರ್ತಿ ನಿರೂಪಿಸಿದರು. ಆರ್.ಐ. ತಿಪ್ಪೇಸ್ವಾಮಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap