ಕೊರಟಗೆರೆ ಯಲ್ಲಿ ಶಾಸಕರ ಅಣ್ಣ ಮಗಳನ್ನು  ಪ್ರೀತಿಸಿದಕ್ಕೆ ಡ್ರೈವರ್ ಕೊಲೆ…!!

ಕೊರಟಗೆರೆ
           ಕಾರು ಚಾಲಕನೋರ್ವ ಬೆಂಗಳೂರಿನ ಪ್ರಭಾವಿ ಶಾಸಕರೊಬ್ಬರ ತಮ್ಮನ ಮಗಳನ್ನು ಪ್ರೀತಿಸಿ ಕದ್ದು ಮದುವೆಯಾದ ಎಂಬ ದ್ವೇಷಕ್ಕೆ 8 ಜನರ ತಂಡವೊಂದು ಪ್ರೇಮಿಯನ್ನು ಪುಸಲಾಯಿಸಿ ಕರೆತಂದು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಗಳವಾರದಂದು ಕೊರಟಗೆರೆ ತಾಲ್ಲೂಕಿನ ಅಗ್ರಹಾರ ಬಳಿ ಜರುಗಿದೆ.
 
           ತಾಲ್ಲೂಕಿನ ಜೆಟ್ಟಿಅಗ್ರಹಾರದ ಬಳಿ ಈ ದುರ್ಘಟನೆ ಜರುಗಿದೆ.  ಜೆಟ್ಟಿಅಗ್ರಹಾರದ ಕಲ್ಲಿನ ಗಣಿಗಾರಿಕೆಗೆ ಹಾದು ಹೋಗುವ ರಸ್ತೆಯಲ್ಲಿ ಈ ಘಟನೆ ಜರುಗಿದ್ದು, ಮೃತ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಬೆಳಗೆರೆ ಗ್ರಾಮದ ರಂಗಶಾಮಯ್ಯನವರ  ಮಗ ಮನು(32 ವರ್ಷ) ಎಂದು ಗುರುತಿಸಲಾಗಿದೆ.  ಈತ ಪ್ರಸಕ್ತ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದರು ಎನ್ನಲಾಗಿದೆ.
 
             ಮೃತ ದುರ್ದೈವಿ ಮನು, ಬೆಂಗಳೂರು ನಗರ ಶಾಸಕರೊಬ್ಬರ ತಮ್ಮನ ಮಗಳನ್ನು ಪ್ರೀತಿಸಿ ಕಳೆದ 40 ದಿನದ ಹಿಂದೆ ಬೆಂಗಳೂರಿನಿಂದ ಪರಾರಿಯಾದ ನಂತರ ಮದುವೆಯಾಗಿ ತುಮಕೂರು ನಗರದಲ್ಲಿ ವಾಸವಿದ್ದರು ಎನ್ನಲಾಗಿದೆ. ಆರೋಪಿಗಳು ಮನು ವಾಸವಿದ್ದ ತುಮಕೂರಿನ ಬಿಳಗೆರೆಯ ಮನೆಗೆ ಬಂದು ನಂಬಿಸಿ ಬೇರೆಡೆ ಕರೆದುಕೊಂಡು ಹೋಗಿ ಅತಿಯಾಗಿ ಮದ್ಯಪಾನ ಮಾಡಿಸಿ, ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆಎನ್ನಲಾಗಿದೆ.
           ಮದುವೆಯಾದ ಪ್ರಿಯತಮೆಯ ಮನೆಯಲ್ಲಿ ಕಳೆದ 8ವರ್ಷದಿಂದ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನು, ಕಳೆದ 40ದಿನದ ಹಿಂದೆ ಮಾಲೀಕನ ಮಗಳೊಂದಿಗೆ ಪರಾರಿಯಾಗಿ ಮದುವೆ ಆಗಿರುವುದಾಗಿ ಫೇಸ್‍ಬುಕ್‍ನಲ್ಲಿ ಲೈವ್ ವಿಡೀಯೋ ಹಾಕಿಕೊಂಡಿದ್ದಾನೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮನು ರೌಡಿ ಶೀಟರ್ ಆರೋಪಿಯೂ ಆಗಿದ್ದಾನೆ. ಮದುವೆಆದ ನಂತರ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.
           ಬೆಂಗಳೂರು ನಗರದಿಂದ ಸೋಮವಾರ ಸಂಜೆ ಆಗಮಿಸಿರುವ ಆರೋಪಿಗಳ ತಂಡ, ರಾತ್ರಿ 12ಗಂಟೆ ವೇಳೆಯಲ್ಲಿ ಜೆಟ್ಟಿಅಗ್ರಹಾರ ಗ್ರಾಮದ ಸಮೀಪ ಮನುಗೆ ಮದ್ಯಪಾನ ಮಾಡಿಸಿದೆ.  ಎಗ್ ರೈಸ್ ಊಟ ತಿನ್ನಿಸಿದ ನಂತರ, ಎಣ್ಣೆಯ ಮತ್ತಿನಲ್ಲಿದ್ದ ಮನುವಿನ ಕೈ ಮತ್ತು ಕಾಲಿಗೆ ಹಗ್ಗದಿಂದ ಭದ್ರವಾಗಿ ಕಟ್ಟಿದೆ.  ಲಾಂಗಿನಿಂದ ತಲೆಯ ಹಿಂದೆ ಮತ್ತು ಬೆನ್ನಿಗೆ 6 ಬಾರಿ ಹಿರಿದು, ನಂತರ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ 8 ಬಾರಿ ಕತ್ತರಿಸಿ 8 ಜನ ಸ್ನೇಹಿತರ ತಂಡ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. 
            ಕೊಲೆಯಾದ ಸ್ಥಳಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಶೋಭರಾಣಿ, ಮಧುಗಿರಿ ಡಿವೈಎಸ್ಪಿ ಧರಣೀಶ್, ಕೊರಟಗೆರೆ ಸಿಪಿಐ ನದಾಪ್, ಪಿಎಸೈ ಮಂಜುನಾಥ, ಸಂತೋಷ್ ನೇತೃತ್ವದ ಪೊಲೀಸರತಂಡ ಬೇಟಿ ನೀಡಿ ಪರಿಶೀಲನೆ ನಡೆಸಿ ಬೇಲಿಯೊಳಗಿದ್ದ ಎರಡು ಲಾಂಗು ಮತ್ತುಒಂದು ಚಾಕು ವಶಕ್ಕೆ ಪಡೆದಿದ್ದಾರೆ.ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರತಂಡ ಬೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.
 
             ಕೊರಟಗೆರೆ ಸಿಪಿಐ ನದಾಪ್ ಮತ್ತು ಪಿಎಸೈ ಮಂಜುನಾಥ ನೇತೃತ್ವದ ಪೊಲೀಸರತಂಡ ಮೊಬೈಲ್‍ತಂತ್ರಜ್ಞಾನದ ಮೂಲಕ ಕೊಲೆ ಮಾಡಿ ಪರಾರಿಆಗಿದ್ದ 5ಜನ ಆರೋಪಿಗಳ ಸುಳಿವು ಪಡೆದುದೇವರಾಯನದುರ್ಗಅರಣ್ಯ ಪ್ರದೇಶಕ್ಕೆ ಹೋಗುವ ದಾರಿಯ ಸಮೀಪದಕೆರೆಯ ಬಳಿ ಟೊಯೋಟೊಕಾರಿನಲ್ಲಿ ಮಧ್ಯಪಾನ ಮಾಡುತ್ತೀದ್ದಐದುಜನ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಹೆಚ್ಚಿನತನಿಖೆ ನಡೆಸುತ್ತೀದ್ದಾರೆ.
              ಕೊರಟಗೆರೆ ಪೊಲೀಸ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ.ತನಿಖೆ ನಡೆಸುತ್ತೀರುವ ಪೊಲೀಸರತಂಡ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ. ಕೊಲೆಯಾದಘಟನೆ ಬೆಳಕಿಗೆ ಬಂದ 8ಗಂಟೆಯೊಳಗೆ ಕೊಲೆ ಮಾಡಿರುವ ಆರೋಪಿಗಳನ್ನು ವಶಕ್ಕೆ ಪಡೆದು ಬಂದಿಸಿರುವ ಕೊರಟಗೆರೆ ಪೊಲೀಸರ ಪರವಾಗಿ ಸ್ಥಳೀಯ ನಾಗರೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap