`ಕಾಂಪೌಂಡ್ ಗೋಡೆ ತೆರವು ಕಾರ್ಯಾಚರಣೆ ಚುರುಕು’

0
36

ಮಿಡಿಗೇಶಿ

        ಖಾಸಗಿ ಕಂಪನಿಯಿಂದ ಸಕಾರಿ ಭೂಮಿ ಒತ್ತುವರಿ ರೆವೆನ್ಯೂ ಇಲಾಖೆ ಮೌನವಾಗಿರುವ ಒಳ ವರ್ಮವಾದರೂ ಏನು? ಪ್ರಜಾಪ್ರಗತಿ ಫಲಶೃತಿ “ಕಾಂಪೌಂಡ್ ಗೋಡೆ ತೆರವು ಕಾರ್ಯಾಚರಣೆ ಚುರುಕು’’.

       ನಂ.7 ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯಿಂದ ಇಟಕದಿಬ್ಬನಹಳ್ಳಿ ಗ್ರಾಮಕ್ಕೆ ಹಾದು ಹೋಗುವ ಪಿ.ಡಬ್ಲ್ಯೂ.ಡಿ ರಸ್ತೆಯ ಪುಲಮಾಚಿ ಗ್ರಾಮಕ್ಕೆ ಸರಿದ ಸರ್ವೆ ನಂಬರು ಹನ್ನೆರಡು ಎಕರೆ ಹಾಗೂ ಮಾಲಗೊಂಡನಹಳ್ಳಿಗೆ ಸರಿದ ಸರ್ವೆ ನಂಬರಿನ ಒಂದು ನೂರ ಒಂದು ಎಕರೆ ಜಮೀನು ಹನುಮಂತಪುರ ಗ್ರಾಮಕ್ಕೆ ಸೇರಿದ ಜಮೀನುದಾರಾಗಿರುತ್ತದೆ. ಸದರಿ ಈ ಕಂಪನಿಯವರು ಈ ಮೇಲ್ಕಂಡವರಿಂದ ಜನರ್ ಪವರ್ ಆಫ್ ಅಟಾರ್ನಿ(ಜ.ಪಿ.ಎ) ಮೂಲಕ ಸೋಲಾರ್ ಕಂಪನಿಯ ಪವರ್ ಪ್ಲಾಟ್ ನವರು ಖರೀದಿಸಿದ್ದು ಜಿ.ಪಿ.ಎ ಎಂದರೆ ಜಮೀನು ಖರಿದಿಗಲ್ಲ ಎಂಬುದಾಗಿರುತ್ತದೆ.

           ಅಗ್ರಿಮೆಂಟ್ ಮಾತ್ರ ತಿಳಿದುಕೊಳ್ಳಬೇಕಾಗುತ್ತದೆ. ಸದರಿ ಸೋಲಾರ್ ಕಂಪನಿಯವರ ಅಗ್ರಿಮೆಂಟ್ ಮಾಡಿಕೊಂಡಿರುವ ಜಮೀನಿನ ಪಕ್ಕದಲ್ಲಿಯೇ ಸರ್ಕಾರಕ್ಕೆ ಸಂಭಂಧಿಸಿದ ಗೋಮಾಳದ ಜಮೀನು ಸುಮಾರು ನಾಲ್ಕು ಎಕರೆಯಷ್ಟು ಭೂಮಿನಿದ್ದು ಈ ಭೂಮಿಯ ವ್ಯಾಪ್ತಿಯಲ್ಲಿಯೇ ದನಕರು, ಕುರಿ, ಮೇಕೆ, ಹಸುಗಳು, ಚಿರತೆ, ಕಾಡು ಹಂದಿ, ಕರಡಿ, ತೋಳ, ಹಕ್ಕಿ, ಪಕ್ಷಿಗಳು, ನವಿಲುಗಳು ಹಾಗೂ ಅತಿ ಮುಖ್ಯವಾಗಿ ಈ ಭಾಗದಲ್ಲಿನ ಸುಮಾರು ಇನ್ನೂರಕ್ಕೂ ಅತ್ಯಧಿಕ ಜಿಂಕೆಗಳಿಗೆ ಕುಡಿಯಲು ಅತ್ಯಾನುಕೂಲಕರವಾಗಿದ್ದಂತಹ ಬಿಂದಪ್ಪನ ಕಟ್ಟೆ ಅಥವಾ ವಡಕ ಕಟ್ಟೆಯಿದ್ದು ಸದರಿ ಕಟ್ಟೆಯಲ್ಲಿನ ನೀರನ್ನು ಕುಡಿದು ಈ ಮೇಲ್ಕಂಡ ಎಲ್ಲಾ ಜಿವಂತ ಪ್ರಾಣಿಗಳು ತಮ್ಮ ನೀರಿನ ಆಹಾರವನ್ನು ನೀಗಿಸಿಕೊಳ್ಳುತ್ತಿದ್ದವು.

         ಇಂತಹ ಉಪಯುಕ್ತ ಗೋಮಾಳದ ಭೂಮಿಯನ್ನು ಈ ಮೇಲ್ಕಂಡ ಸೋಲಾರ್ ಕಂಪನಿಯವರು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದರ ಮುಖೇನ ಕಾಂಪೌಂಡ್‍ನ ಕಾಮಗಾರಿ ನಿರ್ಮಿಸಿರುವ ಬಗ್ಗೆ ಪ್ರಜಾಪ್ರಗತಿ ಕನ್ನಡ ದಿನ ಪತ್ರಿಕೆಯಲ್ಲಿ ತಾ 16-10-2018 ರಂದು “ಖಾಸಗೀ ಕಂಪನಿಯಿಂದ ಸರ್ಕಾರಿ ಭೂಮಿ ಒತ್ತುವರಿ ರೆವೆನ್ಯೂ ಇಲಾಖೆ ಮೌನವಾಗಿರುವ ಒಳ ಮರ್ಮವಾದರೂ ಏನು?’’ ಎಂಬ ತಲೆ ಬರಹದ ಶೀರ್ಷಿಕೆಯಡಿಯ ಸುದ್ದಿ ಪ್ರಸಾರಗೊಂಡಿದ್ದು ಮಧುಗಿರಿ ಉಪವಿಭಾಗಾಧಿಕಾರಿಗಳಾದ ಚಂದ್ರಶೇಖರಯ್ಯ ಪ್ರಭಾರ ತಹಶಿಲ್ದಾರ್ ತಿಪ್ಪೇಸ್ವಾಮಿರವರು ಎಚ್ಚೆತ್ತುಕೊಂಡಿದ್ದು ಐ.ಡಿ.ಹಳ್ಳಿ ಹೋಬಳಿ ರೆವೆನ್ಯೂ ಕಂದಾಯಾಧಿಕಾರಿ ಹಾಗೂ ಗ್ರಾಮ ಲೆಕ್ಕಿಗ ರವಿರವರಿಗೆ ಒತ್ತುವರಿ ಮಾಡಿಕೊಳ್ಳುತ್ತಿರುವ ಭೂಮಿಯ ಕಾಂಪೌಂಡ್ ಗೋಡೆ ತೆರವುಗೊಳಿಸುವಂತೆ ಆದೇಶಮಾಡಿದರನ್ವಯ ಸದರಿ ಗ್ರಾಮ ಲೆಕ್ಕಿಗರು ಹತ್ತಾರು ದಿನಗಳ ಒಳಗಡೆಯೇ ಜೆ.ಸಿ.ಬಿ ಯಂತ್ರದಿಂದ ಸೋಲಾರ್ ಕಂಪನಿಯವರು ನಿರ್ಮಿಸಿಕೊಂಡಂತಹ ಕಾಂಪೌಂಡ್ ಗೋಡೆಯನ್ನು ತೆರವುಗೊಳಸಿರುತ್ತಾರೆ. ಇನ್ನು ಸ್ವಲ್ಪ ಮಟ್ಟಿನ ಕಾಂಪೌಂಡ್ ಗೋಡೆ ತೆರವಾಗಬೇಕಾಗಿದೆ.

         ಬಿಂದಪ್ಪನ ಕಟ್ಟೆಯಲ್ಲಿ ಮಣ್ಣು ತುಂಬಿರುವ ಮಣ್ಣನ್ನು ತೆಗಯದೆ ಇಲ್ಲಿನ ಸದರಿ ಕಟ್ಟೆಯಲ್ಲಿ ಮಳೆ ಬಂದಾಗ ನೀರು ಸಂಗ್ರಹವಾಗುವುದಿಲ್ಲ, ನೀರು ದೊರಕದಂತಾಗುತ್ತದೆ. ಆದ್ದರಿಂದ ಸದರಿ ರೆವೆನ್ಯೂ ಇಲಾಖಾಧಿಕಾರಿಗಳವರು ಬಾಕಿಯಿರುವ ಕಾಂಪೌಂಡ್ ಗೋಡೆ ತೆರವು, ಕಟ್ಟೆಯಲ್ಲಿನ ಮಣ್ಣು ತೆಗೆಸುವಂತೆ ಈ ಭಾಗದ ರೈತಾಪಿ ವರ್ಗ, ಪ್ರಜ್ಞಾವಂತ ನಾಗರೀಕರ ಮನವಿಯಾಗಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here