ಹೊಸಕೆರೆ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ

ಎಂ ಎನ್ ಕೋಟೆ

           ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಸ್.ರಾಜ್‍ಕುಮಾರ್, ಉಪಾಧ್ಯಕ್ಷೆಯಾಗಿ ಸುಶೀಲಮ್ಮ ಇಬ್ಬರು ಒಂದು ಮತದ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.

          ಈ ಹಿಂದೆ ಅಧ್ಯಕ್ಷರಾಗಿದ್ದ ಗುಬ್ಬಣ್ಣ ಮತ್ತು ಉಪಾಧ್ಯಕ್ಷೆಯಾಗಿದ್ದ ಹೇಮಲತಾ ಅವರು ಸಲ್ಲಿಸಿದ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿದ್ದ ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನ ಮತ್ತು ಹಿಂದುಳಿದವರ್ಗ(ಬ) ಮೀಸಲಿನ ಉಪಾಧ್ಯಕ್ಷೆ ಸ್ಥಾನಕ್ಕೆ ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ರಾಜ್‍ಕುಮಾರ್ ಹಾಗೂ ಎಚ್.ಎಸ್.ಸುನಂದ ನಡುವೆ ಪೈಪೋಟಿ ಕಂಡು ಬಂದಿತ್ತು. ಇದೇ ರೀತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸುಶೀಲಮ್ಮ ಹಾಗೂ ಹಿತವಾಣಿ ನಡುವೆ ಕುತೂಹಲ ಮೂಡಿಸಿತ್ತು.

          ಒಟ್ಟು 18 ಮಂದಿ ಸದಸ್ಯರ ಪೈಕಿ ತೆವಡೆಹಳ್ಳಿ ಸದಸ್ಯ ಈಶಣ್ಣ ಗೈರು ಹಾಜರಾತಿಯಲ್ಲಿ 17 ಮಂದಿ ಮತ ಚಲಾವಣೆ ಮಾಡಿದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡು ಮತಗಳು ತಿರಸ್ಕøತಗೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. 15 ಮತಗಳಲ್ಲಿ ರಾಜ್‍ಕುಮಾರ್ 8 ಮತಗಳು ಪಡೆದು ಒಂದೆ ಮತದ ಅಂತರದಲ್ಲಿ ಜಯಶೀಲರಾದರು. ಉಪಾಧ್ಯಕ್ಷ ಸ್ಥಾನಕ್ಕೆ 17 ಮತಗಳು ಚಲಾವಣೆಗೊಂಡು ಸುಶೀಲಮ್ಮ 9 ಮತಗಳನ್ನು ಪಡೆದು ರೋಚಕ ಗೆಲುವು ಸಾಧಿಸಿದರು.

         ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಎಂ.ಎಸ್.ರಾಜ್‍ಕುಮಾರ್, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದಲ್ಲಿ ಅವಶ್ಯವಿರುವ ಮೂಲಭೂತ ಸೌಕರ್ಯವನ್ನು ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಕುಡಿಯುವ ನೀರು, ರಸ್ತೆ, ಬೀದಿದೀಪ ಅಳವಡಿಕೆಯ ಜೊತೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ತಾಲ್ಲೂಕಿನಲ್ಲಿ ಮಾದರಿ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಗುರಿಯಾಗಿಸಲು ದುಡಿಯುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದರು.

       ಚುನಾವಣೆಯ ಪ್ರಕ್ರಿಯೆಯನ್ನು ತಹಸೀಲ್ದಾರ್ ಎಂ.ಮಮತಾ ನಡೆಸಿದರು. ಚುನಾವಣಾ ಶಿರಸ್ತೇದಾರ್ ಗೋವಿಂದರೆಡ್ಡಿ, ಸಿಬ್ಬಂದಿ ಕೆ.ವಿ.ನಾರಾಯಣ್, ಪಿಡಿಒ ಗಂಗಣ್ಣ ಇತರರು ಇದ್ದರು. ರೋಚಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap