ವಸುಂಧರಾ ದಾಸ್ ಗೆ ಕಿರುಕುಳ

0
14

ಬೆಂಗಳೂರು

       ಕಾರಿನಲ್ಲಿ ಮನೆಗೆ ಬರುತ್ತಿದ್ದ ಖ್ಯಾತ ಗಾಯಕಿ ವಸುಂಧರಾ ದಾಸ್ ಅವರನ್ನು ಹಿಂಬಾಲಿಸಿ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿರುವ ಕೃತ್ಯ ಮಲ್ಲೇಶ್ವರಂ ತಡವಾಗಿ ಬೆಳಕಿಗೆ ಬಂದಿದೆ.

         ಕಳೆದ ಸೋಮವಾರ ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿ ಸಂಜೆ 4.30ರ ವೇಳೆ ವಸುಂಧರಾ ದಾಸ್ ಅವರು ಮಲ್ಲೇಶ್ವರಂ ಕಡೆಗೆ ಇಟಿಯಸ್ ಕಾರಿನಲ್ಲಿ ಹೋಗುತ್ತಿದ್ದಾಗ ವಸುಂಧರಾ ದಾಸ್ ಅವರಿಗೆ ಕಿರುಕುಳ ನೀಡಿರುವ ಕ್ಯಾಬ್ ಚಾಲಕನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ

         ಭಾಷ್ಯಂವೃತ್ತದ ಸಿಗ್ನಲ್‍ನಿಂದ ಹಿಂಭಾಲಿಸಿಕೊಂಡು ಬಂದ ಕಾರ್ ನಂಬರ್ ಏಂ-05.ಇ-3933 ನ ಕ್ಯಾಬ್ ಚಾಲಕ ಸ್ಯಾಂಕಿ ರಸ್ತೆ ಕೊನೆಯಾಗುವ ಸಿಗ್ನಲ್ ಬಳಿ ಹಿಂದಿಕ್ಕಲು ಪಕ್ಕದಲ್ಲಿಯೇ ಬಂದು ಯತ್ನಿಸಿದ್ದಾನೆ ಆದರೆ ಕಾರು ಹಿಂದಿಕ್ಕಲು ಬಿಡದೇ ದಾಸ್ ಅವರು ಮುಂದೆ ವೇಗವಾಗಿ ಹೋಗಿದ್ದಾರೆ.

         ಆದರೂ ದಾಸ್ ಅವರ ಕಾರನ್ನು ಹಿಂಬಾಲಿಸಿ ಮಲ್ಲೇಶ್ವರಂ 18ನೇ ಕ್ರಾಸ್ ಬಳಿಯ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಕಾರಿನಿಂದ ಇಳಿದು ವಸುಂಧರಾ ದಾಸ್ ಕಾರಿನ ಬಾಗಿಲು ತೆರೆಯುವ ಯತ್ನ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.ಆದರೂ ಕಾರಿನ ಬಾಗಿಲು ತೆಗೆಯದ ದಾಸ್ ಅವರು ಸಂಚಾರ ದಟ್ಟಣೆಯ ಗಲಾಟೆಯಲ್ಲಿ ರಕ್ಷಣೆಗಾಗಿ ಕೂಗಿಕೊಂಡಾಗ ಹೆದರಿದ ಆರೋಪಿ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ.

          ಈ ಸಂಬಂಧ ವಸುಂಧರಾ ದಾಸ್ ಮಲ್ಲೇಶ್ವರಂ ಠಾಣೆಗೆ ನೀಡಿರುವ ದೂರಿನಲ್ಲಿ ಆ.29 ರಂದು ನಗರದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ಘಟನೆ ನಡೆದಿದ್ದು, ಸಂಜೆ 4.30 ರ ಸಮಯದಲ್ಲಿ ವಸುಂದರಾ ದಾಸ್ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಇಟಿಯೋಸ್ ಕಾರಿನ ಚಾಲಕ ಸಿಗ್ನಲ್ ನಲ್ಲಿ ನಿರಂತರ ಹಾರ್ನ್ ಮಾಡಿದ್ದಾನೆ. ಭಾಷ್ಯಂ ಸರ್ಕಲ್ ಸಿಗ್ನಲ್‍ನಿಂದ ಹಿಂಬಾಲಿಸಿ ಬಳಿಕ ಅವರ ಕಾರನ್ನು ಅಡ್ಡಗಟ್ಟಿ ನಿಂದನೆ ಮಾಡಿದ್ದಾನೆ. ಈ ವೇಳೆ ಕಾರಿನ ಡೋರ್ ತೆಗೆಯಲು ಯತ್ನಿಸಿ ಕಿರುಕುಳ ನೀಡಿದ್ದಾನೆ ಎಂದು ತಿಳಿಸಿದ್ದಾರೆ.

         ಕಾರ್ ನಂಬರ್ ಕೆಎ-05 ಇ-3933 ನ ಕ್ಯಾಬ್ ಚಾಲಕನಿಂದ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಕ್ಯಾಬ್ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 509, 341, 354 ಮತ್ತು 504ರ ಅಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೆÇಲೀಸರು ವಾಹನ ಸಂಖ್ಯೆಯನ್ನು ಪರಿಶೀಲನೆ ನಡೆಸಿದ ವೇಳೆ ಕಾರು ಅಮ್ಜದ್ ಪಾಷಾ ಎಂಬವರ ಹೆಸರಲ್ಲಿ ನೋಂದಣಿಯಾಗಿದ್ದು ಆತನಿಗಾಗಿ ಶೋಧ ನಡೆಸಲಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here