ಮೋದಿ ವಿರುದ್ಧ ಟಿ.ಬಿ.ಜಯಚಂದ್ರ ಕೀಳುಮಟ್ಟದ ಹೇಳಿಕೆ :ಬಿ ಎಸ್ ವೈ

ಬೆಂಗಳೂರು

          ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟಿ.ಬಿ.ಜಯಚಂದ್ರ ಅವರು ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

        ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಕಾನೂನು ಮಂತ್ರಿಂ ಟಿ.ಬಿ.ಜಯಚಂದ್ರ ಅವರು ಪ್ರಧಾನಮಂತ್ರಿ ಬಗ್ಗೆ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ. “ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಜೀವಂತ ಸುಡುವ ಸಮಯ ಬಂದಿದೆ” ಎಂದು ಹೇಳಿ ಜಯಚಂದ್ರ ಅವರು ಪ್ರಧಾನಮಂತ್ರಿಗಳಿಗೆ ಅಗೌರವ ಮಾಡಿ ತಮ್ಮ ಕೀಳುತನವನ್ನು ಪ್ರದರ್ಶಿಸಿದ್ದಾರೆ. ಯಾಕೋ ಏನೋ ಕಾಂಗ್ರೆಸ್ ನಾಯಕರುಗಳು ಮೋದಿಯವರ ಜನಪ್ರಿಯತೆಯವನ್ನು ಸಹಿಸದೆ ಬುದ್ದಿ ಸ್ಥಿಮಿತ ಕಳೆದಕೊಂಡವರಂತೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

        ಈ ಕುರಿತು ಹೇಳಿಕೆ ನೀಡಿರುವ ಅವರು, ಟಿ.ಬಿ.ಜಯಚಂದ್ರರವರು ತಾವು ನೀಡಿರುವ ಕೀಳುಮಟ್ಟ ಹಾಗೂ ಆಕ್ಷೇಪಾರ್ಹ ಹೇಳಿಕೆಗೆ ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬಿಜೆಪಿ ಅವರ ವಿರುದ್ಧ ಮಾನನಷ್ಟ ಮೊಕ್ಕದ್ದಮ್ಮೆ ಹೂಡುವುದಲ್ಲದೇ ಪ್ರಧಾನಮಂತ್ರಿಯವರಿಗೆ ಅವಹೇಳನ ಮಾಡಿ, ಜೀವ ಬೆದರಿಕೆ ಹಾಕಿದ್ದರಿಂದ ಪಕ್ಷ ಕಾನೂನು ರೀತಿ ಕ್ರಮಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

         ಟಿ.ಬಿ.ಜಯಚಂದ್ರ ಸ್ವತಃ ಕಾನೂನು ಪದವೀಧರ ಮತ್ತು ಕಾನೂನು ಮಂತ್ರಿಯಾಗಿದ್ದವರು ಈ ರೀತಿ ಮಾತನಾಡಿದರೆ ಏನು ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಅರಿವು ಅವರಿಗೆ ಇರಬೇಕಾಗಿತ್ತು. ಕೇಂದ್ರ ಸರ್ಕಾರ 16 ಬೆಳೆಗಳಿಗೆ ಲಾಭಾದಾಯಕ ಬೆಂಬಲ ಬೆಲೆ ಘೋಷಿಸಿದ್ದರೂ, ರೈತರಿಂದ ದಾನ್ಯ ಖರೀದಿ ಮಾಡದೆ ರೈತರನ್ನು ರಾಜ್ಯ ಸರ್ಕಾರ ಸಂಕಷ್ಟಕ್ಕೆ ದೂಡಿದೆ ಎಂದು ಆಪಾದಿಸಿದ್ದಾರೆ.

         ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಮಾತನಾಡದೆ, ಕಾಂಗ್ರೆಸ್ ನಾಯಕರುಗಳು ಮೋದಿಯವರ ಆರ್ಥಿಕ ನೀತಿಯನ್ನು ಟೀಕಿಸುವುದು ಎಷ್ಟು ಸಮಂಜಸ. ಈ ಕಾಂಗ್ರೆಸ್ ನಾಯಕರುಗಳು ಐ.ಎಮ.ಎಪ್ ಮತ್ತು ವಲ್ರ್ಡ್ ಬ್ಯಾಂಕ್‍ನ ಆರ್ಥಿಕ ಪರಿಣಿತಿಗಿಂತ ದೊಡ್ಡವರೆಂಬ ಭ್ರಮೆಯಲ್ಲಿದ್ದಾರೆ. ಅಮೇರಿಕಾ ಮತು ್ತ ಕೊರಿಯ ಭಾರತದ ಅಭಿವೃದ್ಧಿಯ ಆರ್ಥಿಕತೆಗೆ “ಮೋದಿನಾಮಿಕ್ಸ್” ಎಂಬ ಬಿರುದು ಕೊಟ್ಟು ಸನ್ಮಾನಿಸಿದ್ದಾರೆ. ಈ ಬಿರುದಿಗೆ ಕಾಂಗ್ರೆಸ್ ನಾಯಕರುಗಳು ಉತ್ತರ ಕೊಡಬೇಕು? ಮೋದಿ ಆರ್ಥಿಕ ನೀತಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರುಗಳಿಗೆ ಈ ಬಿರುದೇ ಉತ್ತರ ಕೊಡುತ್ತದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap