ಕೆರೆಗಳ ಹೂಳೆತ್ತುವ ಕೆಲಸಕ್ಕೆ ಅನುಮತಿ ಕೊಡಿ

ಚಿತ್ರದುರ್ಗ

      ಕೆರೆಕಟ್ಟೆಗಳು ದೇಶದ ಶಾಶ್ವತ ಆಸ್ತಿಯಾಗಿದ್ದು, ರೈತರ ಬದುಕಿಗೆ ಇವು ಆಶ್ರಯವಾಗಿವೆ. ಪ್ರಸ್ತತ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಕೈಗೊಂಡರೆ ಭವಿಷ್ಯದ ದಿನಗಳಲ್ಲಿ ನೀರಿನ ಸಂಗ್ರಹಣೆ ಹೆಚ್ಚಾಗಲಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಆಗ್ರಹಿಸಿದ್ದಾರೆ

      ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಅನುಮತಿ ನೀಡಿದರೆ, ಇಡೀ ಕೆರೆಗಳು ಬರುವ ದಿನಗಳಲ್ಲಿ ನೀರಿನ ಸಂಗ್ರಹಣೆಯ ಸಾಮಥ್ರ್ಯ ಹೆಚ್ಚಾಗಿ ಅಂತರ್ಜಲವೂ ವೃದ್ದಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು

         ಇದು ಕೇವಲ ಜಿಲ್ಲೆಗೆ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಇಂತಹ ಕಾಮಗಾರಿಗಳಿಗೆ ಉದ್ಯೋಗ ಖಾತರಿಯೋಜನೆಯಡಿಯಲ್ಲಿ ಅನುಮತಿ ಸಿಗಬೇಕು. ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು

      ಜಿಲ್ಲೆಯ ಕೆರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೊಳು ತುಂಬಿದೆ ಮಳೆ ಬಂದರು ಸಹಾ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸಂಗ್ರಹ ಮಾಡಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ, ಇದರಿಂದ ಕೊಳವೆಬಾವಿಗಳಲ್ಲಿ ಅಂರ್ತಜಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕೆಳಗೆ ಹೋಗುತ್ತಿದೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿಯೇ 1000 ಅಡಿ ಆಳ ಕೊರೆದರು ಸಹಾ ನೀರು ಸಿಗದ ವಾತಾವರಣ ನಿರ್ಮಾಣವಾಗಿದೆ ಎಂದರು.

       ಸರ್ಕಾರ ಜಿಲ್ಲೆಯ 4 ತಾಲ್ಲೂಕುಗಳನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದೆ ಇದಕ್ಕೆ ತಕ್ಕಂತೆ ಅನುದಾನವನ್ನು ನೀಡಲು ಸಹಾ ಸಿದ್ದ ಇದೆ ಆದರೆ ಕುಡಿಯಲು ನೀರು ಎಲ್ಲೂ ಸಿಗುತ್ತಿಲ್ಲ, ಹಣ ಇದ್ದರು ಸಹಾ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಸರ್ಕಾರ ಎನ್ ಆರ್, ಇ.ಜಿ ಯೋಜನೆಯಡಿ ಬರಿ ರಸ್ತೆ ಚರಂಡಿ ನಿರ್ಮಾಣ ಮಾಡುವ ಬದಲು ಕೆರೆಗಳಲ್ಲಿ ಹೊಳನ್ನು ತೆಗೆಸುವ ಕೆಲಸವನ್ನು ಮಾಡಿದರೆ ಅದು ದೇಶದ ಆಸ್ತಿಯಾಗುತ್ತದೆ ಅಲ್ಲದೆ ಆ ಭಾಗಕ್ಕೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಇದರ ಬಗ್ಗೆ ಜಿಲ್ಲೆಯ ಶಾಸಕರೊಂದಿಗೆ ಮುಖ್ಯ ಕಾರ್ಯದರ್ಶೀಗಳೊಂದಿಗೆ ಮಾತನಾಡಲಾಗುವುದು ಎಂದು ತಿಳಿಸಿದರು.

      ತೆಲಂಗಾಣ ರಾಜ್ಯದಲ್ಲಿ ಕೆರೆಗಳನ್ನು ಹೊಳಯನ್ನು ತೆಗೆಸಿದರ ಪರಿಣಾಮವಾಗಿ ಸಂಗ್ರಹದಲ್ಲಿ ಶೇ.30 ರಷ್ಟು ನೀರಿನ ಪ್ರಮಾಣ ಜಾಸ್ತಿಯಾಗಿದೆ ಇದೇ ರೀತಿ ನಮ್ಮ ರಾಜ್ಯದಲ್ಲಿಯೂ ಸಹಾ ಸಣ್ಣ ಮತ್ತು ನೀರಾವರಿ ಇಲಾಖೆಗಳ ಬಳಿ ಇರುವ ಲಕ್ಷಾಂತರ ಕೆರೆ ಹೊಳನ್ನು ತೆಗೆಸುವ ಕಾರ್ಯವನ್ನು ಮಾಡಬೇಕು ಇದಕ್ಕೆ ಎಲ್ಲರು ಸಹಾ ಸಹಕಾರ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿ ತಿಪ್ಪಾರೆಡ್ಡಿ, ಜಿಲ್ಲೆಯಲ್ಲಿ ಈ ವರ್ಷ ಮಳೆ ಕೈಕೊಟ್ಟಿದೆ ಕೆಲವಡೆ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮಳೆಯಾಗಿದೆ ಬೇರೆ ಕಡೆಯಲ್ಲಿ ಮಳೆಯ ಸುದ್ದಿ ಇಲ್ಲ, ಇದರಿಂದ ಜನತೆ ಆಂತಕಕ್ಕೆ ಈಡಾಗಿದ್ದಾರೆ. ಸರ್ಕಾರ ಇದರ ಬಗ್ಗೆ ಆಲೋಚನೆ ನಡೆಸಿ ಶೀಘ್ರವಾಗಿ ಬರ ಪರಿಹಾರಕ್ಕೆ ಸಂಬಂಧಪಟ್ಟಂತೆ ಕಾಮಗಾರಿಗಳನ್ನು ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದಲ್ಲಿ ಕೆರೆಯ ಹೊಳನ್ನು ತೆಗೆಯುವ ಕೆಲಸ ಆಗಿಲ್ಲ ಸಮರ್ಪಕವಾಗಿ ಆದಾಗ ಮಾತ್ರವೇ ಮಳೆಯ ನೀರು ಸಂಗ್ರಹವಾಗಲು ಸಾಧ್ಯವಿದೆ ಎಂದರು.

      ಶಾಂತಿ ಸಾಗರದಲ್ಲಿ ನೀರಿದೆ ಅಲ್ಲಿಂದ ಚಿತ್ರದುರ್ಗ ನಗರದ ಮುಕ್ಕಾಲು ಭಾಗಕ್ಕೆ ನೀರು ಬರುತ್ತಿದೆ ಇನ್ನು ಕಾಲು ಭಾಗಕ್ಕೆ ವಿವಿಸಾಗರದಿಂದ ನೀರು ಬರುತ್ತಿದ್ದು ಆವರಿಗೆ ಸ್ವಲ್ಪ ಪ್ರಮಾಣದಲ್ಲಿ ತೊಂದರೆಯಾಗಲಿದೆ ಮಳೆ ಬಂದರೆ ಸಮಸ್ಯೆ ನಿವಾರಣೆಯಾಗಲಿದೆ ಎಂದ ಶಾಸಕರು, ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ವಿಧಾನಸಭಾ ಕ್ಷೇತ್ರವಾರು 50 ಲಕ್ಷ ರೂ ನೀಡುತ್ತದೆ ಇದು ಸಕಾಗುವುದಿಲ್ಲ ಎಂದು ಹೇಳಿದರು.

        ದಿಕ್ಕು ತಪ್ಪಿಸುವ ಕೆಲಸ ; ನಗರದಲ್ಲಿ ಮೆಡಿಕಲ್ ಕಾಲೇಜಿನ ಬಗ್ಗೆ ವಿಶೇಷವಾದ ಚರ್ಚೆ ನಡೆಯುತ್ತಿದೆ ವಿವಿಧ ಸಂಘಟನೆಗಳು ನಾವು ಹೋರಾಟ ಮಾಡಿದ್ದಕ್ಕೆ ಮೆಡಿಕಲ್ ಕಾಲೇಜು ಬಂದಿತು ಎಂದು ಹೇಳುತ್ತಿದ್ದು ಇದರ ಬಗ್ಗೆ ಹೋರಾಟವನ್ನು ಸಹಾ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ ಆದರೆ ಇದು ಚಿತ್ರದುರ್ಗಕ್ಕೆ ಬರಲು ಯಾರು ಕಾರಣ ಎಂದು ಜನತೆಗೆ ಗೊತ್ತಿದೆ ಏನು ಗೊತ್ತಿಲ್ಲದವರು ಈಗ ಬಂದು ನಾವು ಮಾಡಿಸಿದ್ದೇವೆ ಅದರ ಬಗ್ಗೆ ಹೋರಾಟವನ್ನು ಮಾಡಿದ್ದೇವೆ ಎಂದು ಹೇಳುತ್ತಾ ಜನತೆತನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ದೂರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap