ವಿ.ಎಸ್.ಉಗ್ರಪ್ಪ ಪತ್ರೀಕಾಗೋಷ್ಟಿ

0
9

ಪಾವಗಡ;-

         ಬಳ್ಳಾರಿ ಮತ್ತು ಪಾವಗಡ ಭಾಗದಲ್ಲಿ ನಿರುದ್ಯೋಗ, ಬಡತನ, ಕುಡಿಯುವ ಸಮಸ್ಯೆ ಇದ್ದು,ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್,ಮುಖ್ಯ ಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಹಾಗೂ ದೇವೇಗೌಡರವರು ಮತ ಪ್ರಚಾರ ಸಂದರ್ಭದಲ್ಲಿ ಕೂಡ್ಲಿಗಿ,ಸಂಡೂರು,ಹಗರಿಬೊಮ್ಮನಹಳ್ಳಿಯಲ್ಲಿ 2250 ಕೋಟಿಯ ಕುಡಿಯುವ ಯೋಜನೆಯನ್ನು ಈ ಭಾಗದಿಂದಲೇ ಶಂಖುಸ್ಥಾಪನೆ ಮಾಡಲಾಗುತ್ತದೆ ಎಂದು ಬಳ್ಳಾರಿಯ ನೂತನ ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ತಿಳಿಸಿದರು.

       ಬುಧವಾರ ಪಟ್ಟದ ನಿರೀಕ್ಷಣಾ ಮಂದಿರದಲ್ಲಿ ನೂತನ ಸಂಸದರಾಗಿ ಆಯ್ಕೆಯಾದ ನಂತರ ಪಾವಗಡದ ಸುಪ್ರಸಿದ್ದ ಶನಿಮಹಾತ್ಮ ದೇವಸ್ತಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ ನೀರೀಕ್ಷಣಾ ಮಂದಿರದಲ್ಲಿ ಪ್ರತಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಬಿ.ಜೆ.ಪಿ ಪಕ್ಷದವರಿಗೆ ಬೈ ಎಲೆಕ್ಷನ್ ಗಳಲ್ಲಿ ಸ್ಪರ್ದೇ ಮಾಡುವದೇ ಕಾಯಕವಾಗಿದೆ, ಚುನಾವಣೆಗಳಲ್ಲಿ ಬಿ.ಜೆ.ಪಿ ಮುಖಂಡರ ಕುಟುಂಬದ ಸದಸ್ಯ ಅಭ್ಯರ್ಥಿಗಳಿಗೆ ಟಿಕಿಟ್ ನೀಡುವುದು ಇವರ ವಾಡಿಕೆಯಾಗಿದೆ ಎಂದು ವ್ಯಂಗವಾಡಿದರು.

        ಪಾವಗಡ ತಾಲ್ಲೂಕು ನನ್ನ ಜನ್ಮ ಭೂಮಿಯಾಗಿದ್ದು,ನನ್ನ ಕ್ಷೇತ್ರ ಬಳ್ಳಾರಿ ಕರ್ಮ ಭೂಮಿಯಾಗಿದ್ದು, ಈ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಅಗುತ್ತೇನೆ ಎಂಬ ಮಾಹಿತಿ ನನಗಿರಲಿಲ್ಲ, ಅದರೇ ಹೈ ಕಮ್ಯಾಂಡ್ ನೀನೆ ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರ ನಾನು ಕ್ಷೇತ್ರಕ್ಕೆ ಬಂದಾಗ ಬಳ್ಳಾರಿ ಜನತೆ ಕೈ ಬಿಡುವುದಿಲ್ಲ ಎಂಬ ನೀರೀಕ್ಷೆ ನನಗೆ ಇತ್ತು ಎಂದರು.

        ಬಳ್ಳಾರಿ ಕ್ಷೇತ್ರದ ಜನತೆ ಹೆಚ್ಚು ಮತ ನೀಡಿ ಜಯಗಳಿಸಿದ್ದಾರೆ. ಸಾದ್ಯವಾದಷ್ಟು ಮತದಾರರ ಋಣ ತಿರಿಸುತ್ತೇನೆ,ಸಂಸದರಾಗಿ ಆಯ್ಕೆ ಅಗಿರುವವರು ಯಾವ ಕಾನೂನು ಮಾಡಬೇಕು ಯಾವುದು ಬೀಡಬೇಕು,ಕಾನೂನಿಗೆ ವಿರುದ್ದವಾದ ಸಂಪನ್ಮೂಲಗಳನ್ನು ಬೇರೆ ಬೇರೆ ರಾಜ್ಯ ಮತ್ತು ಪ್ರದೇಶಗಳಿಗೆ ಅಭಿವೃದ್ಧಿಗೆ ಬೇಕಾದ ಸಂಪತ್ತು ಕ್ರೋಡಿಕರಿಸಿ, ಅದನ್ನು ಸೋರಿಕೆಯಾಗದಂತೆ ನೋಡುಕೊಳ್ಳುವ ಜೊತೆಗೆ ದೇಶದ ವಿದೇಶಾಂಗ ನೀತಿ ಬಗ್ಗೆ ಸಲಹೆ ನೀಡುವುದು,ದೇಶದ ರಕ್ಷಣೆ ನೀತಿ ಜಾರಿಯಾಗುವುದರ ಬಗ್ಗೆ, ಹಾಗೂ ಅರ್ಥಿಕ ಬಗ್ಗೆ ಸಲಹೆ ನೀಡುವುದಾಗಿ ತಿಳಿಸಿದರು.

       ಮಾಜಿ ಶಾಸಕ ತಿಮ್ಮರಾಯಪ್ಪ, ಡಾ.ಜಿ.ವೆಂಕಟರಾಮಯ್ಯ, ವಕೀಲ ಎಂ, ನಾಗೇಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ಕೋರ್ಟನರಸಪ್ಪ, ರೇವಣ್ಣ, ಲಕ್ಷ್ಮೀನಾರಾಯಣಪ್ಪ, ಜೆ.ಡಿ.ಎಸ್.ಪುರಸಭಾಸದಸ್ಯರಾದ ಜಿ.ಎ.ವೆಂಕಟೇಶ್, ಮುಗದಾಳಬೆಟ್ಟನರಸಿಂಹಯ್ಯ,ಮಾತನಾಡಿದರು,

          ವಿ.ಎಸ್.ಉಗ್ರಪ್ಪ ರ ಪುತ್ರ ನೀತೀಶ್‍ಕುಮಾರ್,ತಾ.ಪಂ. ಮಾಜಿ ಸದಸ್ಯೆ ತಾಡಮ್ಮ,ಕದೀರೆಹಳ್ಳಿಜಗನ್ನಾಥ್, ದೊಡ್ಮನೆತಿಪ್ಪೇಸ್ವಾಮಿ,ಮನುಮಹೇಶ್, ಜೆ.ಡಿ.ಎಸ್.ಮುಖಂಡರಾದ ಅನಿಲ್‍ಹಂಡೆ,ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್‍ಕುಮಾರ್, ಮಂಗಳವಾಡಧನುಂಜಯ, ರೊಪ್ಪಹನುಮಂತರಾಯ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here