ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಪತ್ರಿಕೆಗಳ ಉಳಿವು

0
11

ಚಳ್ಳಕೆರೆ

       ವಿಶ್ವದ ಇತಿಹಾಸದ ಉದ್ದಕ್ಕೂ ಸುದ್ದಿಗಳ ಮೂಲಕ ಜನತೆಯ ವಿಶ್ವಾಸವನ್ನು ಮತ್ತು ಗೌರವವನ್ನು ಗಳಿಸುವಲ್ಲಿ ಪತ್ರಿಕಾ ಕ್ಷೇತ್ರ ಸಫಲವಾಗಿದೆ. ಶತಮಾನಗಳಿಂದಲೂ ಸಮಾಜದ ಅಭಿವೃದ್ಧಿ ಪರ ಚಿಂತನೆ ಹಿನ್ನೆಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. 16ನೇ ಶತಮಾನದಲ್ಲಿ ಮೊದಲ ಪತ್ರಿಕೆ ಪ್ರಾರಂಭವಾಗಿದ್ದು ಜರ್ಮನಿಯಲ್ಲಿ. ಪತ್ರಿಕೆಗಳ ಇತಿಹಾಸವನ್ನು ಅರ್ಥೈಸಿಕೊಳ್ಳುವ ಮನಸ್ಥಿತಿ ಇಂದಿನ ಯುವ ಪೀಳಿಗೆಗೆ ಹೆಚ್ಚು ಬರಬೇಕೆಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ವಿ.ಭಾ ಪ್ರಶಸ್ತಿ ವಿಜೇತ, ಪತ್ರಕರ್ತ ಎನ್.ರವಿಕುಮಾರ್ ತಿಳಿಸಿದರು.

        ಅವರು, ಸೋಮವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಭಾರತದ ರಾಜಕಾರಣದಲ್ಲಿ ಪತ್ರಿಕೆಗಳ ಪಾತ್ರ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದ ಇತಿಹಾಸವನ್ನು ನೋಡಿದರೆ ರಾಜ್ಯದಮೊಟ್ಟ ಮೊದಲ ಪತ್ರಿಕೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ‘ಮಂಗಳೂರು ಸಮಾಚಾರ’ದೊಂದಿಗೆ ಪ್ರಾರಂಭವಾಯಿತು. ಇಂದು ರಾಷ್ಟ್ರದಾದ್ಯಂತ 17.680 ಪತ್ರಿಕೆಗಳು, 400ಕ್ಕೂ ಹೆಚ್ಚು ಪ್ರಭಾವಿ ದೂರದರ್ಶನ ಮಾದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವೆಂದು ಬಿಂಬಿಸಲ್ಟಿರುವ ಪತ್ರಿಕಾ ಮಾಧ್ಯಮದ ಕಾರ್ಯ ಜವಾಬ್ದಾರಿಯುತದಿಂದ ಕೂಡಿದೆ. ಪತ್ರಕರ್ತ ಇಂದು ತನ್ನ ವೃತ್ತಿ ಗೌರವವನ್ನು ಕಾಪಾಡಿಕೊಳ್ಳುವ ದೃಷ್ಠಿಯಿಂದ ಅನೇಕ ಸವಾಲುಗಳನ್ನು ಎದುರಿಸಿ ಕಾರ್ಯನಿರ್ವಹಿಸಬೇಕಿದೆ ಎಂದರು.

        ಭಾರತದ ರಾಜಕಾರಣದಲ್ಲಿ ಪತ್ರಿಕೆಗಳ ಪಾತ್ರ ಕುರಿತು ಹಲವಾರು ಪ್ರಧಾನ ವಿಷಯವನ್ನು ಪ್ರಸ್ತಾಪಿಸಿದ ಅವರು, ಪತ್ರಿಕೆಗಳು ಜನಧ್ವನಿಯಾದಾಗ ಮಾತ್ರ ಸಮಾಜ ಮತ್ತು ಸಾರ್ವಜನಿಕರ ಗೌರವವನ್ನು ಸಂಪಾದಿಸಲು ಸಾಧ್ಯವಾಗುತ್ತದೆ. ಸರ್ಕಾರದ ಲೋಪದೋಷಗಳು, ಭ್ರಷ್ಟಾಚಾರದ ವರದಿಗಳು ಸಮಾಜವನ್ನು ಪರಿವರ್ತಿಸುವ ಹಾದಿಯಲ್ಲಿ ಮಾತ್ರ ಬಿಂಬಿತವಾಗುತ್ತವೆ. ವರದಿಗಳನ್ನು ವಸ್ತು ನಿಷ್ಠವಾಗಿ ಬರೆಯುವ ಶಕ್ತಿ ಸಾಮಥ್ರ್ಯದ ಪತ್ರಕರ್ತ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಸಾಧ್ಯ.

       ಹಲವಾರು ಪತ್ರಿಕೆಗಳು ಬಂಡವಾಳ ಶಾಹಿ, ಪ್ರಭಾವಿ ರಾಜಕಾರಣಿ, ಹಣವಂತರ ನೆರಳಿನಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬ ಚರ್ಚೆ ಅಧಿಕವಾಗಿ ಪ್ರಾರಂಭವಾಗಿದೆ. ಆದರೆ, ಇಂತಹ ಪತ್ರಿಕಾ ವರದಿಗಳು ಜನರ ವಿಶ್ವಾಸವನ್ನು ಸುಲಭವಾಗಿ ಕಳೆದುಕೊಳ್ಳುತ್ತವೆ ಎಂಬ ಅಂಶವನ್ನು ಯಾರೂ ಮರೆಯಬಾರದು. ದೂರದರ್ಶನಗಳ ಹಾವಳಿಯಲ್ಲಿ ಪತ್ರಿಕಾ ವರದಿಗಳಿಗೆ ಹೆಚ್ಚು ಬೆಲೆ ಇಲ್ಲವೆಂಬ ವಾದವನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ.

       ಕಾರಣ ದೂರದರ್ಶನ ಕೆಲವೇ ಸೀಮಿತ ಅವಧಿಗೆ ಮಾತ್ರ ಸುದ್ದಿ ನೀಡಿದರೆ ಮುದ್ರಣ ಮಾದ್ಯಮ ಸಂಪೂರ್ಣ ಚಿತ್ರವನ್ನು ಜನತೆಯ ಮುಂದೆ ಇಡುವ ಮೂಲಕ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿವೆ. ಮುದ್ರಣ ಮಾದ್ಯವೂ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಗಣಕೀಕರಣ ಪ್ರಭಾವ ಸ್ವಾಗತವಾದರೂ ಮುದ್ರಣ ವಿಚಾರದಲ್ಲಿ ಮಾತ್ರ ಎಲ್ಲವನ್ನು ಗಣಕೀಕರಣದ ಮೇಲೆ ಅವಲಂಬಿತವಾಗಲು ಸಾಧ್ಯವಾಗುವುದಿಲ್ಲ.

        ಪತ್ರಿಕೆಗಳ ವರದಿಗಾರ ನೀಡುವ ವರದಿಯೇ ಅ ಪತ್ರಿಕೆಯ ಅಳಿವು ಮತ್ತು ಉಳಿವಿಗೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವರದಿಗಳನ್ನು ವಾಟ್ ಆಫ್, ಫೇಸ್‍ಬುಕ್ ಹಾಗೂ ಗೂಗಲ್‍ನಲ್ಲಿ ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಇದರಿಂದ ಪತ್ರಿಕೆಗಳ ಬೆಳವಣಿಗೆ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬ ಓದುಗನು ತನಗೆ ಇಷ್ಟ ಬಂದ ಪತ್ರಿಕೆಯನ್ನು ಕೊಂಡು ಓದಿದಲ್ಲಿ ಮಾತ್ರ ಪತ್ರಿಕೆಗಳು ಬೆಳೆಯಲು ಸಾಧ್ಯವಾಗುತ್ತದೆ.

         ಇಂದಿಗೂ ಸಹ ರಾಜ್ಯದ ಮಟ್ಟಿಗೆ ಹೇಳುವುದಾದರೆ ಪತ್ರಿಕೆಗಳನ್ನು ಓದುವವರರ ಸಂಖ್ಯೆ ಬಹಳ ಕಡಿಮೆಯಾಗಿದೆ. ಪತ್ರಿಕೆಯನ್ನು ಹೆಚ್ಚು ಹೆಚ್ಚು ಕೊಂಡು ಓದುವ ಪ್ರವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಒಟ್ಟಿನಲ್ಲಿ ಮಾದ್ಯಮ ಸರ್ಕಾರದ ಲೋಪದೋಷವನ್ನು ತಿದ್ದುವ ಜೊತೆಗೆ ಸಮಾಜದ ಪರಿವರ್ತನೆ ಹಾಗೂ ಸರ್ಕಾರ ಯೋಜನೆಗಳ ಯಶಸ್ಸಿ ಜಾರಿಗೆ ಕಾರಣವಾಗುತ್ತದೆ ಎಂದರು.

         ಕಾರ್ಯಕ್ರಮದಲ್ಲಿ ಆರ್.ಪ್ರಸನ್ನಕುಮಾರ್, ಕರೀಕೆರೆ ಎ.ನಾಗರಾಜು, ಫರೀದ್‍ಖಾನ್, ಕೆ.ಟಿ.ಮುತ್ತುರಾಜ್, ಓಬಳೇಶ್, ಜೆ.ಮಂಜುನಾಥ, ಶಿವಮೂರ್ತಿ, ಬಾಬು, ಗೊಂಚಿಗಾರ ಪಾಪಣ್ಣ, ಬಡಗಿಪಾಪಣ್ಣ, ಬೋರಣ್ಣ, ಶಾಂತವೀರಣ್ಣ, ಕೃಷ್ಣ, ಜಗದೀಶ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here