ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

0
3

ಹಾವೇರಿ :

          ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪಿಂಚಣಿದಾರರ ಸಂಘದ ಹಾವೇರಿ ಪ್ರಾದೇಶಿಕ ಸಮಿತಿಯ ಪುನರ್‍ರಚನೆ ಮತ್ತು ಸಂಘದ ಕ್ಯಾಲೆಂಡರ್ ಬಿಡುಗಡೆಯ ಸಮಾರಂಭ ನಗರದ ಹೆಸ್ಕಾಂ ಕಛೇರಿಯಲ್ಲಿ ಜರುಗಿತು.

        ಕ್ಯಾಲೆಂಡರ್‍ನ್ನು ಅಧೀಕ್ಷಕ ಇಂಜನೀಯರ್ ಎಂ.ಬಿ ಪಾಟೀಲ ಬಿಡುಗಡೆ ಮಾಡಿ ನಿವೃತ್ತರ ಸಂಘದ ಚಟುವಟಿಕೆಗಳಿಗೆ ಈ ದಿನ ದರ್ಶಿಕೆ ಸಾಕ್ಷಿಯಾಗುತ್ತದೆ. ನಿವೃತ್ತರು ತಮ್ಮ ಕ್ರೀಯಾಶೀಲತೆಯನ್ನು ತೋರಿಸಲು ಅವಕಾಶವಾಗಿದೆ ಎಂದರು  ಬಿಡುಗಡೆಯ ಸಮಾರಂಭದಲ್ಲಿ ಕಾರ್ಮಿಕ ಧುರೀಣ ವಿಜಯಕುಮಾರ ಮುದಕಣ್ಣನವರ ಸಿ.ಎ ಕೂಡಲಮಠ, ಜೆ ಎನ್ ಬಣಕಾರ ಆರ್,ಎಫ್ ಕಾಳೆ, ಸಿ.ಎಚ್ ಬಾರ್ಕಿ ಮುಖ್ಯ ಅತಿಥಿಯಾಗಿದ್ದರು.

        ಈ ಸಂದರ್ಭದಲ್ಲಿ ಸಂಘದ ಹಾವೇರಿ ಪ್ರಾದೇಶಿಕ ಸಮಿತಿಯ ಪುನರ್‍ರಚನೆ ನಡೆಯಿತು. ಅಧ್ಯಕ್ಷರಾಗಿ ಸಿ ಎಸ್ ಗೂಳಪ್ಪನವರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನಿವೃತ್ತ ಅಧೀಕ್ಷಕ ಇಂಜನೀಯರ್ ಎನ್.ಬಿ ಕಟಕೋಳ ರವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾದ ಸರ್ವಶ್ರೀ ಎಸ್ ಸಿ ಚಿಕ್ಕಮಠ ( ಕೇಂದ್ರ ಸಮಿತಿ ಸದಸ್ಯರು ) ಕೆ ಡಿ ಮಾಳಿ ( ಉಪಾಧ್ಯಕ್ಷರು ) ಬಿ ಸಿ ಬಂಗಾಳಿ ( ಕಾರ್ಯದರ್ಶಿ ) ಎ ಎಸ್ ಪಡಸಲಗಿ ( ಜಂಟಿ ಕಾರ್ಯದರ್ಶಿ) ಮಲ್ಲಪ್ಪ ಪಸಾರದ ( ಖಜಾಂಚಿ ) ಇಸ್ಲಾಯಿಲ್‍ಸಾಬ, ಟಿ ಹನುಮಂತಪ್ಪ, ವ್ಹಿ ಬಿ ಹಿರೇಮಠ, ಶ್ರೀಮತಿ ಸುಶೀಲಾ ಗುಳೇದಗುಡ್ಡ, ಸರದಾರ ಎಂ ಅತ್ತಾರ ಹಾಗೂ ಎಫ್‍ಸಿ ಹೊಳೆಯಣ್ಣನವರ ಸದಸ್ಯರಾದರು. ನೂತನ ಸಮಿತಿಗೆ ಶುಭ ಹಾರೈಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here