ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ;

0
10

ಚಿತ್ರದುರ್ಗ:

         ಜೋಗಿಮಟ್ಟಿ ರಸ್ತೆಯಲ್ಲಿರುವ ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯಲ್ಲಿ ಶನಿವಾರ ಮಕ್ಕಳಿಗೆ ಬೈಸಿಕಲ್ ವಿತರಣೆ ಹಾಗೂ ಕೆ.ಟಿ.ವಾಸುದೇವರೆಡ್ಡಿರವರ 112 ನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

       ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಕ್ಕಳಿಗೆ ಬೈಸಿಕಲ್ ವಿತರಿಸಿ ಮಾತನಾಡುತ್ತ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ದೇಶಾಭಿಮಾನವನ್ನು ಮೂಡಿಸಬೇಕಾಗಿದೆ. ಮೊದಲು ದೇಶ ನಂತರ ನಾವುಗಳು ಎನ್ನುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡಾಗ ಭಾರತ ಬಲಿಷ್ಟ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

      ಸರ್ಕಾರ ಪ್ರತಿ ವರ್ಷವೂ ಮಕ್ಕಳಿಗೆ ಬೈಸಿಕಲ್‍ಗಳನ್ನು ವಿತರಿಸುತ್ತಿರುವುದು ಅತ್ಯುತ್ತಮವಾದ ಕಾರ್ಯಕ್ರಮ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬೈಸಿಕಲ್‍ಗಳು ಹೆಚ್ಚು ಪ್ರಯೋಜನವಾಗಲಿದೆ. ಹಾಗಾಗಿ ಮಕ್ಕಳು ಬೈಸಿಕಲ್‍ಗಳ ಪ್ರಯೋಜನ ಪಡೆದುಕೊಳ್ಳಿ ಎಂದರು.
ನರೇಂದ್ರಮೋದಿರವರು ದೇಶದ ಪ್ರಧಾನಿಯಾದ ಮೇಲೆ ಅತ್ಯತ್ತಮ ಕಾರ್ಯಕ್ರಮಗಳು ಜಾರಿಗೆ ಬರುತ್ತಿವೆ. ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಜಗತ್ತಿನ ಬೇರೆ ದೇಶಗಳು ಭಾರತದ ಕಡೆ ತಿರುಗಿ ನೀಡುವಂತ ಅನೇಕ ಜನೋಪಕಾರಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಗುಣಗಾನ ಮಾಡಿದರು.

       ಕೆ.ಟಿ.ವಾಸುದೇವರೆಡ್ಡಿ ಸೌಮ್ಯ ಸ್ವಭಾವದವರು ಯಾವುದೇ ಅತ್ಯಾಧುನಿಕ ಸಲಕರಣೆಗಳು ಇಲ್ಲದ ಕಾಲದಲ್ಲಿಯೇ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಎನ್ನುವುದನ್ನು ಮನಗಂಡಿದ್ದ ಕೆ.ಟಿ.ವಾಸುದೇವರೆಡ್ಡಿ ಜನಾಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ. ಅವರ ಆಸೆಯಂತೆ ಮಕ್ಕಳು ಶಿಕ್ಷಣವನ್ನು ಪಡೆದು ಮುಂದೆ ದೇಶದ ಸತ್ಪ್ರೆಜೆಗಳಾಗುವಂತೆ ತಿಳಿಸಿದರು . ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯ ರಾಮಕೃಷ್ಣಪ್ಪ, ನಗರಸಭೆ ಸದಸ್ಯರುಗಳಾದ ವೆಂಕಟೇಶ್‍ಚಿಲಿಲಿ, ವೆಂಕಟೇಶ್, ಮಾಜಿ ಸದಸ್ಯ ಮಹೇಶ್, ಶಾಲೆಯ ಆಡಳಿತಾಧಿಕಾರಿ ಶಫಿವುಲ್ಲಾ, ಕೃಷ್ಣಮೂರ್ತಿನಾಯ್ಕ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here