ದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಏಕತಾ ಓಟ

0
11

ಚಿತ್ರದುರ್ಗ:

      ಬಿಜೆಪಿ.ಯಿಂದ ರಾಷ್ಟ್ರೀಯ ಏಕತಾ ಓಟವನ್ನು ಬುಧವಾರ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹೊಳಲ್ಕೆರೆ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ರಾಷ್ಟ್ರೀಯ ಏಕತಾ ಓಟ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿತು.

      ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಅಪ್ಪಟ ದೇಶಭಕ್ತರಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್‍ರವರ ಅತಿ ಎತ್ತರದ ಪ್ರತಿಮೆಯನ್ನು ದೇಶದ ಪ್ರಧಾನಿ ನರೇಂದ್ರಮೋದಿರವರು ಇಂದು ಗುಜರಾತ್‍ನ ಸರ್ದಾರ್ ಸರೋವರ ಅಣೆಕಟ್ಟು ಕೆವಾಡಿಯಾ ಗ್ರಾಮದಲ್ಲಿ ಲೋಕಾರ್ಪಣೆಗೊಳಿಸುತ್ತಿರುವುದರಿಂದ ಇಡೀ ಜಗತ್ತೆ ಭಾರತದ ಕಡೆ ತಿರುಗಿ ನೋಡುವಂತಾಗಿದೆ ಎಂದು ಹೇಳಿದರು.

      ನೆಹರುರವರಿಗಿಂತ ಮೊದಲು ಸರ್ದಾರ್ ವಲ್ಲಭಾಯಿ ಪಟೇಲ್ ದೇಶದ ಪ್ರಧಾನಿಯಾಗಿದ್ದರೆ ಪಾಕಿಸ್ತಾನ ಭಾರತದ ತಂಟೆಗೆ ಬರುತ್ತಿರಲಿಲ್ಲ. ಆದರೆ ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಕಾಂಗ್ರೆಸ್‍ನವರು ಸರ್ದಾರ್ ವಲ್ಲಭಾಯಿ ಪಟೇಲ್‍ರನ್ನು ಬೆಳಕಿಗೆ ತರಲಿಲ್ಲ ಎಂದು ಕಾಂಗ್ರೆಸ್‍ನ ಕುತಂತ್ರವನ್ನು ಟೀಕಿಸಿದರು.

       ಉಕ್ಕಿನ ಮನುಷ್ಯ ಎಂದೆ ಹೆಸರುವಾಸಿಯಾಗಿದ್ದ ಸರ್ದಾರ್ ವಲ್ಲಭಾಯಿ ಪಟೇಲ್ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೈತರ ಕಲ್ಯಾಣಕ್ಕಾಗಿ ಕಟಿಬದ್ದರಾಗಿದ್ದರು. ಸ್ವತಂತ್ರ ಭಾರತದ ಶಿಲ್ಪಿ ಎಂದೆ ಹೆಸರಾಗಿದ್ದ ಅವರು ರಾಜರ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಭಾರತದ ಏಕತೆಯನ್ನು ಎತ್ತಿ ಹಿಡಿದರು. ಅಂತಹ ಮಹಾನ್ ನಾಯಕನ ವಿಚಾರಗಳನ್ನು ಇಂದಿನ ವಿದ್ಯಾರ್ಥಿಗಳು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

       ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಸಿದ್ದೇಶ್‍ಯಾದವ್, ರೇವಣಸಿದ್ದಪ್ಪ, ಮುರಳಿ, ರತ್ನಮ್ಮ, ಮಲ್ಲಿಕಾರ್ಜುನ್, ಸುರೇಶ್‍ಸಿದ್ದಾಪುರ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಕೆ.ತಿಪ್ಪೇಸ್ವಾಮಿ, ರೈತ ಮೋರ್ಚ ಜಿಲ್ಲಾಧ್ಯಕ್ಷ ಡಿ.ರಮೇಶ್, ಶ್ಯಾಮಲಶಿವಪ್ರಕಾಶ್, ರೇಖ, ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್, ಸುರೇಶ್, ಹರೀಶ್, ಯುವ ಮುಖಂಡ ರವಿಚಂದನ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಏಕತಾ ಓಟದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here