ಸಾರ್ವಜನಿಕರ ಕೆಲಸ ಮಾಡುವುದರ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಳ್ಳಿ.; ಬಿ.ಪಿ ಹರೀಶ್

ಹರಿಹರ :

       ತಾಲೂಕಿನ ರೈತರು ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಕಛೇರಿಗಳಿಗೆ ಪ್ರತಿನಿತ್ಯ ಹಲೆದಾಡುತ್ತಿದ್ದಾರೆ. ರೈತರು ದೇಶದ ಬೆನ್ನೆಲೆಬು, ಅವರನ್ನು ಸತಾಯಿಸದೆ, ಅವರ ಕೆಲಸವನ್ನು ಮಾಡಿಕೊಡುವಂತ ಕೆಲಸವನ್ನು ಸರ್ಕಾರಿ ನೌಕರರ ಸಂಘ ಮಾಡಬೇಕೆಂದು ಎಂದು ಮಾಜಿ ಶಾಸಕ ಬಿ.ಪಿ ಹರೀಶ್ ಹೇಳಿದರು.

          ನಗರದ ಪಿಬಿ ರಸ್ತೆಯಲ್ಲಿರುವ ಭಾಗಿರಥಿ ಕನ್ವೆಷನ್ ಹಾಲ್‍ನಲ್ಲಿ ಗುರುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಹರಿಹರ ತಾಲೂಕು ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ತಾಲೂಕು ಮಟ್ಟದ ಸಮಾವೇಶ ಮತ್ತು ಪ್ರಜಾಸ್ನೇಹಿ ಆಡಳಿತ ಕುರಿತು ಶೈಕ್ಷಣಿಕ ಕಾರ್ಯಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

            ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ಯಾವುದೇ ರಾಜಕಾರಣಿಗಳನ್ನು ಮೆಚ್ಚಿಸುವ ಕೆಲಸ ಮಾಡುವ ಬದಲು, ನಿಮ್ಮ ಬಳಿ ಬರುವ ಸಾರ್ವಜನಿಕರು ನಿಮ್ಮ ಕೆಲಸ ನೂಡಿ ಮೆಚ್ಚುವಂತೆ ಸಾರ್ವಜನಿಕರ ಕೆಲಸ ಮಾಡುವುದರ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಳ್ಳಿ. ತಾಲೂಕಿನ ರೈತರು ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಕಛೇರಿಗಳಿಗೆ ಪ್ರತಿನಿತ್ಯ ಹಲೆದಾಡುತ್ತಿದ್ದಾರೆ. ರೈತರು ದೇಶದ ಬೆನ್ನೆಲೆಬು, ಅವರನ್ನು ಸತಾಯಿಸದೆ, ಅವರ ಕೆಲಸವನ್ನು ಮಾಡಿಕೊಡಿ ಎಂದು ಸಲಹೆ ನೀಡಿದರು.
ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ಯಾವುದೇ ರಾಜಕಾರಣಿಗಳನ್ನು ಮೆಚ್ಚಿಸುವ ಕೆಲಸ ಮಾಡುವ ಬದಲು, ನಿಮ್ಮ ಬಳಿ ಬರುವ ಸಾರ್ವಜನಿಕರು ನಿಮ್ಮ ಕೆಲಸ ನೂಡಿ ಮೆಚ್ಚುವಂತೆ ಸಾರ್ವಜನಿಕರ ಕೆಲಸ ಮಾಡಿ ಎಂದು ಮಾಜಿ ಮಾಜಿ ಶಾಸಕ ಬಿ.ಬಿ ಹರೀಶ್ ಹೇಳಿದರು.

          ನಂತರ ದಾವಣಗೆರೆಯ ಅಬಕಾರಿ ಉಪ ಆಯುಕ್ತರಾದ ಟಿ. ನಾಗರಾಜಪ್ಪ ಉಪನ್ಯಾಸ ನೀಡಿದ ಅವರು, ರಾಜ್ಯದಲ್ಲಿ ಸಕಾಲ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಸೇವೆಗಳು ಬಂದಮೇಲೆ ಪ್ರಜೆಗಳಿಗೆ ಒಂದು ಬ್ರಹ್ಮಾಸ್ತ್ರ ಸಿಕ್ಕಾಂತಾಗಿದೆ. ಇದರಿಂದ ಜನರಿಗೆ ಯಾವುದೇ ಇಲಾಖೆಯಲ್ಲಿ ಸರಳವಾಗಿ ಮಾಹಿತಿಯನ್ನು ಪಡೆಯಬಹುದು. ಸಾರ್ವಜನಿಕರು ಅಧೀಕಾರಿಗಳ ಬಳಿ ತಮ್ಮ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡು ಬಂದಾಗ, ಅವರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ, ಅವರ ಸಮಸ್ಯೆಯನ್ನು ಶಾಂತಿಯುತವಾಗಿ ಕೇಳಿದಾಗ, ಅವರೀಗೂ ಸಮಾಧಾನವಾಗುತ್ತದೆ ಎಂದು ತಿಳಿಸಿದರು.

          ಇಂದು ತಂತ್ರಜ್ಞಾನ ಬೆಳೆದಿದ್ದು ಪ್ರತಿಯೊಂದು ಇಲಾಖೆಗೆ ತನ್ನದೇಯಾದ ತಂತ್ರಾಂಶವನ್ನು ನೀಡಿದೆ. ಆ ಒಂದು ಇಲಾಖೆಯ ಕೆಲಸ ಆಗಬೇಕಾದರೆ ಅದೇ ತಂತ್ರಾಂಶದ ಮೂಲಕ ಕಾರ್ಯನಿರ್ವಹಿಸಬೇಕು. ಇದರಿಂದ ಸಾರ್ವಜನಿಕರ ಕೆಲಸಗಳು ಸರಾಗವಾಗಿ ಸಾಗುತ್ತಿವೆ. ನಾವು ಒಂದು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಲ್ಲಿಗೆ ಬರುವ ವ್ಯಕ್ತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ ಅವರ ಪ್ರೀತಿಗೆ ಪಾತ್ರರಾಗಬೇಕು. ಇದರಿಂದ ಯಾವುದೇ ಸಮಸ್ಯಗಳು ಎದುರಾಗುವುದಿಲ್ಲ, ನಿಯಮಗಳನ್ನೂ ಮೀರುವುದಿಲ್ಲ ಎಂದರು.

         ವೇದಿಕೆಯಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಎಂ.ವಿ ಹೊರಕೇರಿ, ರಾಜ್ಯ ನೌಕರರ ಸಂಘದ ಖಜಾಂಚಿ ಸಿ.ಎಸ್ ಷಡಕ್ಷರಿ, ಎ.ಪುಟ್ಟಸ್ವಾಮಿ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಶೇಖರ್‍ಗೌಡ ಪಾಟೀಲ್, ಸ.ಕ.ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ಇ.ಓ ನೀಲಗಿರಿಯಪ್ಪ, ಸಂಘದ ಗೌರವಾಧ್ಯಕ್ಷ ಎಂ. ಉಮ್ಮಣ್ಣ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಶಿಕ್ಷಕೆಉ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap