ಪ್ರಗತಿಪರ ಸಂಘಟನೆಗಳಿಂದ ಹುತಾತ್ಮಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಹಿರಿಯೂರು :

        ಕಣಿವೆರಾಜ್ಯವಾದ ಕಾಶ್ಮೀರದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯಿಂದ 44 ಭಾರತೀಯ ವೀರಯೋಧರು ಸಾವಿಗೀಡಾಗಿದ್ದು, ಈ ಘಟನೆಯಿಂದಾಗಿ ಭಾರತೀಯ ಪ್ರಜೆಗಳು ದಿಗ್ಬ್ರಾಂತರಾಗಿದ್ದು, ನಗರದ ಎಲ್ಲಾ ಪ್ರಗತಿಪರ ಸಂಘಟನೆಗಳು ಹಾಗೂ ಈ ಸಂಘಟನೆಗಳ ಎಲ್ಲಾ ಮುಖಂಡರು ಯಾವುದೇ ಭೇಧಭಾವವಿಲ್ಲದೇ ನಗರದ ನೆಹರು ವೃತ್ತದಲ್ಲಿ ಮೌನಾಚರಣೆ ನಡೆಸುವ ಮೂಲಕ ಹುತಾತ್ಮಯೋಧರಿಗೆ ಮೇಣದಬತ್ತಿಗಳನ್ನು ಬೆಳಗಿಸಿ ಭಾವಪೂರ್ವ ಶ್ರದ್ಧಾಂಜಲಿಯನ್ನು ಅರ್ಪಿಸಿದರು

        ನಗರದ ವಿವಿಧ ಭಾಗಗಳಲ್ಲಿ ಭಾರತೀಯ ಹುತಾತ್ಮಯೋಧರಿಗೆ, ವಂದೇಮಾತರಂ ವೇದಿಕೆ, ನಗರದ ಆರ್ಯವೈಶ್ಯ ಸಮಾಜ, ವಕೀಲರಸಂಘ, ಪೋಲೀಸ್‍ಇಲಾಖೆ, ವಿದ್ಯಾರ್ಥಿಪರಿಷತ್, ಭಜರಂಗದಳ, ಕರ್ನಾಟಕರಕ್ಷಣಾವೇದಿಕೆ, ಸೇರಿದಂತೆ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪಕ್ಷಾತೀತವಾಗಿ ಈ ವಿದ್ವಂಸಕ ಕೃತ್ಯವನ್ನು ತೀವ್ರವಾಗಿ ಖಂಡಿಸಿದರಲ್ಲದೆ ಇತರೆ ಯುವಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಯೋಧರ ಸಾವಿಗೆ ತೀವ್ರಕಂಬನಿ ಮಿಡಿದರು.’

      ನಗರದ ಶ್ರೀಕನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯವೈಶ್ಯ ಕುಲಭಾಂಧವರು ಸಹಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾರತೀಯ ಹೃತಾತ್ಮ ವೀರಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಹೆಚ್.ಎಸ್.ನಾಗರಾಜ್‍ಗುಪ್ತಾ, ಎಲ್.ಆನಂದಶೆಟ್ಟಿ ಕೆ.ವಿಅಮರೇಶ್, ಪಿ.ವಿ.ನಾಗರಾಜ್, ಆರ್.ಪ್ರಕಾಶ್‍ಕುಮಾರ್, ಸತ್ಯನಾರಾಯಣಶೆಟ್ಟಿ, ಬಿ.ಎನ್.ತಿಪ್ಪೇಸ್ವಾಮಿ, ಪಿ.ಎಸ್.ಐ ಮಂಜುನಾಥ್ ವಕೀಲರುಗಳಾದ ಸಂಜಯ್, ಅನಿಲ್, ಪ್ರಭಾಕರ್ ನಾಗರಾಜ್, ಭಾಜಪ ಕಾರ್ಯದರ್ಶಿ ಕೇಶವಮೂರ್ತಿ, ಕರವೇ ಅಧ್ಯಕ್ಷ ಕೃಷ್ಣಪೂಜಾರಿ, ವಂದೇ ಮಾತರಂ ಅರುಣ್‍ಕುಮಾರ್, ಗಿರಿಧರ್, ಸಂಗೀತ ಶಿಕ್ಷಕರಾದ ತಿಪ್ಪೇಸ್ವಾಮಿ, ಯುವಮುಖಂಡರುಗಳಾದ ಯೋಗೇಶ್, ದನಂಜಯ್, ವೆಂಕಟೇಶ್, ನೇತಾಜಿಮಂಜು, ಪ್ರವೀಣ್‍ನಾಯ್ಕ ಮಾರುತಿ, ಮಧು, ಅಭಿಲಾಷ್, ಶರತ್‍ನಾಯ್ಕ, ಗಿರೀಶ್, ಉಮೇಶ್, ರಹಮತ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap