‘ಆರೋಗ್ಯದ ಪ್ರಧಾನವೇ ಆಯುರ್ವೇದದ ಮೂಲಉದ್ದೇಶ’

0
7

 ಬಳ್ಳಾರಿ

     ದೀರ್ಘಾಯುಷ್ಯದ ಗುಟ್ಟನ್ನು ಜನಹಿತಕ್ಕಾಗಿ ತೆರೆದಿಟ್ಟಿರುವುದು ಆಯುರ್ವೇದದ ವಿಶೇಷತೆ. ಆರೋಗ್ಯವಂತರ ಆರೋಗ್ಯವನ್ನು ಕಾಪಾಡುವುದು ಮತ್ತು ರೋಗಿಗಳಿಗೆ ಆರೋಗ್ಯ ಪ್ರಧಾನ ಮಾಡುವುದು ಆಯುರ್ವೇದದ ಮೂಲ ಉದ್ದೇಶ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ವಂದನಾ ಗಾಳಿ ಹೇಳಿದರು.

       ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಿಮಿತ್ತ ಆಯುಷ್ ನಿರ್ದೇಶನಾಲಯ,ಜಿಲ್ಲಾಡಳಿತ,ಜಿಪಂ ಮತ್ತು ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಸಮೀಪದ ಅಂದ್ರಾಳ್‍ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಆಯುಷ್ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ ಮತ್ತು ಆಯುಷ್ ಕುರಿತ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

        ದಿನಚರ್ಯ ಮತ್ತು ಋತುಚರ್ಯಗಳ ಮುಖಾಂತರ ಆರೋಗ್ಯದ ಬದುಕನ್ನು ನಡೆಸಬೇಕೆಂದು ತಿಳಿಸಿದೆ ಎಂದು ಹೇಳಿದ ಅವರು,ಬದಲಾಗುತ್ತಿರುವ ಈ ಜೀವನಶೈಲಿಯ ಸಂದರ್ಭದಲ್ಲಿ ಆಯುಷ್ ಮಹತ್ವ ಕುರಿತು ತಿಳಿಸುವ ಉದ್ದೇಶದಿಂದ ಈ ಶಿಬಿರ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

       ಜೀವನಶೈಲಿ ಹಾಗೂ ಆಹಾರ ಪದ್ಧತಿ ವ್ಯತ್ಯಾಸದಿಂದಾಗಿ ಮಾನವನಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತಿದ್ದು, ಅನಿಯಮಿತ ಔಷಧಿ ಸೇವನೆಯಿಂದಾಗಿ ರೋಗಾಣುಗಳು ಔಷಧಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತಿದೆ. ಇದರಿಂದಾಗಿ ದಿನೇದಿನೆ ಹೊಸ ಹೊಸ ಕಾಯಿಲೆಗಳು ದಾಳಿಯಿಡುತ್ತಿವೆ. ಈ ನಿಟ್ಟಿನಲ್ಲಿ ರೋಗಿಗಳ ರೋಗ ನಿವಾರಣೆಯಷ್ಟೇ ಅಲ್ಲದೇ ಆರೋಗ್ಯವಂತನ ಆರೋಗ್ಯವನ್ನು ಸಂರಕ್ಷಣೆ ಮಾಡುವುದು ಇಂದಿನ ಅವಶ್ಯಕತೆ ಇದೆ ಎಂದರು.

      ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಹನುಮಂತಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜೀವನಶೈಲಿ ಬದಲಾವಣೆ ಪರಿಣಾಮ ಅನೇಕ ರೋಗಗಳಿಗೆ ನಾವು ಬಲಿಯಾಗುತ್ತಿದ್ದು, ಸಾರ್ವಜನಿಕ ಆರೋಗ್ಯಕ್ಕಾಗಿ ಆಯುರ್ವೇದ ಇಂದು ಅಗತ್ಯವಾಗಿದ್ದು ಈ ವರ್ಷ ಇದೇ ಘೋಷವಾಕ್ಯದಡಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ನಿಮಾ ಜಿಲ್ಲಾ ಕಾರ್ಯದರ್ಶಿ ಡಾ.ವಿರೂಪಾಕ್ಷಿ ವಸ್ತ್ರದ, ಆಯುಷ್ ಮೇಡಿಕಲ್ ಅಧಿಕಾರಿಗಳಾದ ಡಾ.ಕೋಟ್ರೇಶ್, ರೂಪಸಿಂಗ್ ರಾಠೋಡ್, ಡಾ.ಶಶಿಧರ್ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶಶಿರೇಖಾ ಇದ್ದರು.
ಈ ಶಿಬಿರದಲ್ಲಿ ಆಯುರ್ವೇದ ತಜ್ಞ ವೈದ್ಯರುಗಳು ಶಿಬಿರಕ್ಕೆ ಆಗಮಿಸಿದ ಅನೇಕ ಜನರಿಗೆ ಉಚಿತ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಿದರು.ಆಯುಷ್ ಮಹತ್ವ ಸಾರುವ ವಸ್ತುಪ್ರದರ್ಶನ ಈ ಸಂದರ್ಭದಲ್ಲಿ ಗಮನಸೆಳೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here