ಮಹರ್ಷಿ ವಾಲ್ಮೀಕಿ ಜಯಂತಿ

ಹಾನಗಲ್ಲ :

       ಕಠೋರ ಮನಸ್ಸಿನ ರತ್ನಾಕರ, ಮಹಾತ್ಮರ ದರ್ಶನದಿಂದ ಮಹಾಮಾನವನಾದ ಋಷಿ, ಈ ದೇಶ ಕಂಡ ಉತ್ಕಷ್ಟ ಮಹಾಕವಿಯಾದ ಮಹರ್ಷಿ ವಾಲ್ಮೀಕಿಯ ಜೀವನ ಚರಿತ್ರೆ ಜಗತ್ತಿಗೆ ಮಾದರಿಯಾಗಿದೆ ಎಂದು ಪ್ರಾಂಶುಪಾಲ ಪ್ರೊ. ಸಿ. ಮಂಜುನಾಥ ನುಡಿದರು.

        ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, ದುರಾಚಾರಿ ಮನಸ್ಸಿನ ಒಬ್ಬ ವ್ಯಕ್ತಿ ತ್ಯಾಗ, ಬಲಿದಾನ, ಪ್ರೀತಿ, ವಿಶ್ವಾಸದ ಸಂಕೇತವಾದ ರಾಮಾಯಣದ ಕತೃವಾದ ವಾಲ್ಮೀಕಿ ಮಹರ್ಷಿ, ರಾಮಾಯಣದಂತ ಮಹಾಕಾವ್ಯ ಬರೆದು ಬ್ರಹ್ಮಋಷಿಯಾಗಿ ಹೊರಹೊಮ್ಮಿದ ಅವರ ಜೀವನ ಚರಿತ್ರೆ ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು.

       ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರಕಾಶ ಬಿ. ಹೊಳೇರ ಮಾತನಾಡಿ ಮಹರ್ಷಿ ವಾಲ್ಮೀಕಿಯವರ ಬದುಕು ಇವತ್ತಿನ ಯುವಸಮುದಾಯಕ್ಕೆ ಮಾದರಿಯಾಗಬೇಕು. ಅಹಿಂಸೆ, ಅನಾಚಾರಗಳಲ್ಲಿ ತೊಡಗಿದವರು ಸರಿಯಾದ ಉದ್ದೇಶಗಳನ್ನು ಹೊಂದಿ, ಸಾಧಕರಾಗುವ ಬಗ್ಗೆ ಅತ್ಯುತ್ತಮ ಉದಾಹರಣೆ ಇವರಾಗಿದ್ದಾರೆ. ಏಕೆಂದರೆ ಪರಿವರ್ತನೆ ಜಗತ್ತಿನ ನಿಯಮ. ಅಲ್ಲದೇ ಅತ್ಯಂತ ಸಂಕೀರ್ಣವಾದ ರಾಮಾಯಣದಲ್ಲಿಯ ಪಾತ್ರಗಳು ಪ್ರತಿಯೊಬ್ಬರ ಬದುಕಿನ ಹಾಗೂ ವಿವಿಧ ಮನಸ್ಥಿತಿಯ ಗುಣಗಳಿಗೆ ಹೊಂದುವಂತೆ ನಿರ್ಮಿಸಿದ ಮಹಾಕಾವ್ಯ ರಾಮಾಯಣ ಜಗತ್ತು ಮೆಚ್ಚಿದ ಹಾಗೂ ಪ್ರಪಂಚಕ್ಕೆ ಮಾದರಿಯಾದ ಕೃತಿಗೆ ಕಾರಣರಾದ ವಾಲ್ಮಿಕಿಯವರು ಯಾವುದೇ ಜಾತಿ-ಧರ್ಮಕ್ಕೆ ಸೇರದ ಈ ದೇಶದ ಬಹು ದೊಡ್ಡ ಆಸ್ತಿ ಎಂದರು.

       ಹಾವೇರಿ ಜಿ.ಎಚ್. ಕಾಲೇಜಿನ ಪ್ರಾಧ್ಯಾಪಕ ಹಾಗೂ ಬಾಹ್ಯ ಪರೀಕ್ಷಕ ಪ್ರೊ. ಎಸ್.ಎಸ್. ಸಣ್ಣಶಿವಣ್ಣನವರ ಅತಿಥಿಗಳಾಗಿ ಮಾತನಾಡಿ ಸಮಾಜಕ್ಕೆ ಮಾದರಿಯಾದ ಮಹನೀಯರನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ ಮಹಾತ್ಮರ ಜಯಂತಿಗಳ ಮೂಲಕ ಯುವ ಸಮುದಾಯಕ್ಕೆ ಆದರ್ಶಗಳು ಪ್ರಸಾರಗೊಳ್ಳಬೇಕು, ಈಗ ಯುವ ಜನಾಂಗಕ್ಕೆ ಮಹಾತ್ಮರ ಚರಿತ್ರೆಯನ್ನು ತಿಳಿಸುವುದು ಅತ್ಯವಶ್ಯಕವಾಗಿವೆ ಎಂದರು.

        ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಭಾಗ್ಯಲಕ್ಷ್ಮಿ ಹುರಳಿಕುಪ್ಪಿ, ಅಧಿಕ್ಷಕ ವಸಂತ ಗುಡಗುಡಿ, ಎಂ.ಡಿ. ಕಲಾಲ, ಮುದ್ದಕ್ಕಳವರ, ಕಮಲಾಕ್ಷಿ ದೇಸಾಯಿ, ದುರುಗಮ್ಮ ಹೊಸಮನಿ, ಎನ್.ಎಚ್. ಪುರೋಹಿತ, ಆರ್.ಎಂ. ಬಂಡಾರಿ, ಹನುಮಂತಪ್ಪ ದಳವಾಯಿ, ಶೇಕಪ್ಪ ತಗಡಿನಮನಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap