ಪಾಲಿಕೆ: ವೇತನಕ್ಕೆ ವಾಲ್ವ್‌ಮನ್‌ಗಳ ಧರಣಿ

0
10

ತುಮಕೂರು

         ಕಳೆದ ನಾಲ್ಕು ತಿಂಗಳುಗಳಿಂದ ತಮಗೆ ವೇತನ ಪಾವತಿ ಆಗದೆ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ ಎಂದು ತುಮಕೂರು ಮಹಾನಗರ ಪಾಲಿಕೆಯ ನೀರುಪೂರೈಕೆ ವಿಭಾಗದ ವಾಲ್ವ್‌ಮನ್‌ಗಳು ಪಾಲಿಕೆ ಕಚೇರಿ ಮುಂದೆ ಧರಣಿ ನಡೆಸಿದ ಪ್ರಸಂಗ ಜರುಗಿದೆ.

         ಪಾಲಿಕೆ ಕಚೇರಿ ಎದರು ಶನಿವಾರ ವಾಲ್ವ್‌ಮನ್‌ಗಳು ಧರಣಿ ನಡೆಸಿ, ತಮ್ಮ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಿದರು.
ಮಹಾನಗರ ಪಾಲಿಕೆಯಲ್ಲಿ ಸುಮಾರು 214 ಜನ ವಾಲ್ವ್‌ಮನ್‌ಗಳು ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇವರಿಗೆ ಕಳೆದ ನಾಲ್ಕು ತಿಂಗಳುಗಳಿಂದ ವೇತನ ಪಾವತಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಎಲ್ಲ ವಾಲ್ವ್ ಮನ್‌ಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ವೇತನ ಪಾವತಿಗೆ ಒತ್ತಾಯಿಸಿ ‘ರಣಿ ಕೈಗೊಂಡರು.

        ಸುದ್ದಿ ತಿಳಿದ ತಕ್ಷಣ ಪಾಲಿಕೆ ಆಯುಕ್ತ ಎಲ್.ಮಂಜುನಾಥ ಸ್ವಾಮಿ ಧರಣಿನಿರತರನ್ನು ಭೇಟಿ ಮಾಡಿ ಚರ್ಚಿಸಿದರು. ಬಾಕಿ ಇರುವ ವೇತನ ಪಾವತಿ ಮಾಡುವುದಾಗಿ ‘ರವಸೆ ನೀಡಿದರು. ಆ ಬಳಿಕ ವಾಲ್ವ್‌ಮನ್‌ಗಳು ಧರಣಿ ಕೈಬಿಟ್ಟು ಕರ್ತವ್ಯಕ್ಕೆ ತೊಡಗಿಸಿಕೊಂಡರು.
ಇದಾದ ಬಳಿಕ ವಾಲ್ವ್‌ಮನ್‌ಗಳಿಗೆ ಕೇವಲ ಒಂದು ತಿಂಗಳ ವೇತನವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ನಾಲ್ಕೂ ತಿಂಗಳ ವೇತನ ಲಭಿಸಬಹುದೆಂದು ನಿರೀಕ್ಷಿಸಿದ್ದ ವಾಲ್ವ್‌ಮನ್‌ಗಳಿಗೆ ಇನ್ನೂ ಮೂರು ತಿಂಗಳ ವೇತನ ಉಳಿದಂತಾದುದರಿಂದ, ಮತ್ತೆ ಅಸಮಾಧಾನ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಆದ್ಯತೆ ಮೇರೆಗೆ ನೀಡಬೇಕು

       ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ ‘‘ನೀರು ಸರಬರಾಜು ವಿಷಯದಲ್ಲಿ ಪಾಲಿಕೆಯ ಆಡಳಿತ ಕಿಂಚಿತ್ತೂ ನಿರ್ಲಕ್ಷೃ ಮಾಡಬಾರದು. ಕುಡಿಯುವ ನೀರು ಪೂರೈಸುವುದು ಪಾಲಿಕೆಯ ಆದ್ಯ ಕರ್ತವ್ಯ. ಆದ್ದರಿಂದ ನೀರು ಪೂರೈಕೆ ಕಾರ್ಯದಲ್ಲಿ ಹಗಲಿರುಳೂ ನಿರತರಾಗಿರುವ ವಾಲ್ವ್‌ಮನ್‌ಗಳಿಗೆ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸಕಾಲಕ್ಕೆ ವೇತನ ಪಾವತಿಸಬೇಕು. ಬೇರೆ ವಿಷಯಕ್ಕಿಂತಲೂ ವಾಲ್ವ್‌ಮನ್‌ಗಳಿಗೆ ಪ್ರಥಮ ಆದ್ಯತೆಯ ಮೇರೆಗೆ ವೇತನ ಪಾವತಿಗೆ ಪಾಲಿಕೆ ಆಡಳಿತವು ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕು’’ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here