ಜನಪರ ಬಜೆಟ್ ನಿರೀಕ್ಷೆಯಲ್ಲಿ ದೇಶದ ಜನತೆ….!!!

0
38

       ಬಹು ನಿರೀಕ್ಷಿತ2019-20ನೇ ಸಾಲಿನ ಮಧ್ಯಂತರಕೇಂದ್ರ ಬಜೆಟ್‍ಇಂದು ಮಂಡಣೆಯಾಗುತ್ತಿದೆ.ಅರುಣ್‍ಜೇಟ್ಲಿ ಅನುಪಸ್ಥಿತಿಯಲ್ಲಿ ಮಧ್ಯಂತರ ವಿತ್ತ ಸಚಿವ ಪಿಯೂಷ್‍ಗೋಯಲ್ ಬಜೆಟ್ ಮಂಡಿಸಲಿದ್ದಾರೆ.ಲೋಕಸಭಾಚುನಾವಣೆಗೂ ಮುಂಚೆಯೇ ಈ ಬಜೆಟ್ ಮಂಡಣೆಯಾಗುತ್ತಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಬಡಜನರ ಮತ್ತು ಮಧ್ಯಮ ವರ್ಗದಜನರಿಗೆ ಅನುಕೂಲವಾಗುವ ಜನಪ್ರಿಯ ಯೋಜನೆಗಳನ್ನು ಬಜೆಟ್‍ನಲ್ಲಿಘೋಷಿಸುವ ಸಾಧ್ಯತೆಇದೆ.

       ಕೃಷಿ ವಲಯದ ಬಿಕ್ಕಟ್ಟುಗಳಿಗೆ ಸುಮಾರುಎರಡು ಲಕ್ಷಕೋಟಿ ವಿಶೇಷ ಪ್ಯಾಕೇಜ್, ಆದಾಯತೆರಿಗೆ ವಿನಾಯತಿ ಮಿತಿ ಹೆಚ್ಚಳ, ಎಲ್ಲರಿಗೂ ಕನಿಷ್ಠ ಆದಾಯ (ಯುಬಿಐ), ಉದ್ಯಮಿಗಳಿಗೆ ವಿಮಾಯೋಜನೆ ಹಾಗೂ ಅಗ್ಗದ ಬಡ್ಡಿದರದಲ್ಲಿ ಸಾಲ ನೀಡಿಕೆ, ಆಹಾರ ಸಬ್ಸಿಡಿಗೆಗರಿಷ್ಠ ಮೊತ್ತ 1.80 ಲಕ್ಷಕೋಟಿಗೆಏರಿಕೆಯಂತಹಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಂಭವವಿದೆ.

       ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಈ ಬಾರಿಯ ಬಜೆಟ್‍ನಲ್ಲಿ ಘೋಷಿಸುವಸಾಧ್ಯತೆಇದೆಎನ್ನಲಾಗಿದೆ. ರೈತರಪ್ರತಿವರ್ಷದಆದಾಯದಲ್ಲಿಹೆಚ್ಚಳಹಾಗೂ ಕೃಷಿಬಿಕ್ಕಟ್ಟುಗಳಿಗೆಪರಿಹಾರ ಕಂಡುಕೊಳ್ಳುವಂತಹ ಯೋಜನೆಗೆ ಹೆಚ್ಚಿನ ಆಸಕ್ತಿ ನೀಡಲಾಗುವುದುಎನ್ನಲಾಗಿದೆ. ಅಲ್ಲದೇ, ಪ್ರಸ್ತುತಇರುವಂತಹಆದಾಯತೆರಿಗೆ ವಿನಾಯಿತಿಯನ್ನು2.5 ಲಕ್ಷದಿಂದ 5 ಲಕ್ಷದವರೆಗೂಹೆಚ್ಚಿಸಬಹುದುಎನ್ನಲಾಗಿದೆ.ಸಣ್ಣ, ಅತಿ ಸಣ್ಣಕೈಗಾರಿಕೋದ್ಯಮಗಳಿಗೂ ಕೆಲ ಸಕಾರಾತ್ಮಕ ಯೋಜನೆಗಳನ್ನು ಜಾರಿಗೆತರಬಹುದುಎಂದು ನಿರೀಕ್ಷಿಸಲಾಗಿದೆ.

        2016ರಲ್ಲಿ ಸ್ಟಾರ್ಟ್‍ಅಪ್‍ ಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಟಾರ್ಟ್‍ಅಪ್‍ ಇಂಡಿಯಾ ಅಭಿಯಾನ ಆರಂಭಿಸಿತು. ಉದ್ಯೋಗಸೃಷ್ಟಿ, ಹೊಸ ಆವಿಷ್ಕಾರ, ಸಂಪತ್ತುಹೆಚ್ಚಳಇದರಮುಖ್ಯಆಶಯವಾಗಿತ್ತು.2022ರ ವೇಳೆಗೆ ಭಾರತದ ಜನಸಂಖ್ಯೆಯ ಶೇಕಡ 35ರಷ್ಟು ಯುವಕರೇ ಇರುತ್ತಾರೆಂಬ ಚಿಂತನ ಮಂಥನ ನಡೆಸಿ ಯುವಕರಿಗೆ ಉದ್ಯೋಗ ನೀಡಲು ಸ್ಟಾರ್ಟ್‍ಅಪ್‍ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎನ್ನಲಾಗಿದೆ.

       ಇಷ್ಟಲ್ಲದೆ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕಿದೆ . ಅದರಲ್ಲೂ ಕೃಷಿ ವಲಯದ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಿದೆ . ಚುನಾವಣೆ ವರ್ಷದಲ್ಲಿ ಮಂಡಿಸುವುದಾದ್ದರಿಂದ ಇದು ಮಧ್ಯಂತರ ಬಜೆಟ್ . ದೇಶದ ಹಿತಾಸಕ್ತಿಯಿಂದ ಈ ಮಧ್ಯಂತರ ಬಜೆಟ್‍ ಅಗತ್ಯವಾದುದೆಲ್ಲವನ್ನೂ ಒಳಗೊಂಡಿರಬೇಕಿದೆ.

        ಸಾರ್ವತ್ರಿಕ ಕನಿಷ್ಠ ಆದಾಯಯೋಜನೆಅರ್ಥಾತ್‍ಯೂನಿವರ್ಸಲ್ ಬೇಸಿಕ್ ಇನ್‍ಕಮ್ (ಯುಬಿಐ) ಯೋಜನೆ ಜಾರಿಗೊಳಿಸುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸಿಕ್ಕಿಂ ರಾಜ್ಯಇದನ್ನು ಜಾರಿಗೊಳಿಸಲು ಮುಂದಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಯುಬಿಐ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ . ರಾಜ್ಯ-ಕೇಂದ್ರ ಸರ್ಕಾರಗಳು ಬಡತನ ಮತ್ತು ನಿರುದ್ಯೋಗ ಹೋಗಲಾಡಿಸಲು ಹಲವು ಯೋಜನೆ ಘೋಷಿಸುತ್ತಿವೆ. ಆದರೆ ಅನುಷ್ಠಾನದ ಕೊರತೆಯಿಂದ ಅವು ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ . ಆ ಹಲವು ಯೋಜನೆಗಳ ಬದಲು , ದೇಶದಲ್ಲಿ ಬಿಪಿಎಲ್ ವ್ಯಾಪ್ತಿಗೆ ಬರುವ ಶೇ.27.5ರಷ್ಟು ಮಂದಿಗೆ ನೇರವಾಗಿ ಕನಿಷ್ಠ ಆದಾಯ ನೀಡಿದರೆ ಹೇಗೆ ಎನ್ನುವ ಕುರಿತು ಚರ್ಚೆ ಮತ್ತು ಚಿಂತನೆ ನಡೆದಿದೆ. ಒಟ್ಟಾರೆಯಾಗಿ ನಿರುದ್ಯೋಗ, ಬಡತನ ಮುಂತಾದ ಕಾರಣಗಳಿಂದಾಗಿ ಮಾಸಿಕವಾಗಿ ಖಚಿತ ಆದಾಯ ಇಲ್ಲದಿರುವವರಿಗೆ ಪ್ರತಿ ತಿಂಗಳು ನಿರ್ದಿಷ್ಟ (ಸುಮಾರುರೂ.2,500) ಹಣವನ್ನು ನೇರವಾಗಿ ವರ್ಗಾವಣೆ ಮಾಡುವುದು ಈ ಯೋಜನೆಯ ಉದ್ದೇಶ. ವಾರ್ಷಿಕವಾಗಿ ಈ ಯೋಜನೆಗೆ 32 ಸಾವಿರಕೋಟಿರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

        2018-19ರ ಸಾಲಿನ ಒಟ್ಟು ಬಜೆಟ್ ಸಾಮಥ್ರ್ಯ 24.42 ಲಕ್ಷಕೋಟಿಯಷ್ಟು ಇತ್ತು . ಈ ಬಾರಿ ಚುನಾವಣೆ ವರ್ಷದ ಆಯವ್ಯಯ ಆಗಿರುವುದರಿಂದ ಮತಬೇಟೆಗೆ ಈ ಹಿಂದಿನ ಬಜೆಟ್‍ಗಳಿಗಿಂತ ಹೆಚ್ಚಿನದನ್ನೇ ಘೋಷಿಸುವ ನಿರೀಕ್ಷೆ ಇದೆ . ಈ ಹಿಂದೆ ಇದ್ದ ಸರ್ಕಾರಗಳು ಇದನ್ನೇ ರೂಢಿಸಿಕೊಂಡು ಬಂದಿವೆ. ಹೀಗಾಗಿ, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಜನ ಮೆಚ್ಚಿಗೆ ಬಜೆಟ್ ಹೊರಬಿದ್ದರೇ ಮುಂಬರುವ ಆಡಳಿತಾರೂಢ ಪಕ್ಷಕ್ಕೆ ಆರ್ಥಿಕ ಹೊರೆ ಬೀಳಲಿದೆ . ಜೊತೆಗೆ ಉದ್ದೇಶಿತ ವಿತ್ತೀಯಕೊರತೆ ಶೇ.3.2ಕ್ಕೆ ತಗ್ಗಿಸುವುದರಲ್ಲಿ ಸಫಲತೆ ಕಾಣುವುದಿಲ್ಲ ಎಂಬುದು ಆರ್ಥಿಕ ತಜ್ಞರ ಅಭಿಮತ.

       ಜಿಡಿಪಿಗೆ ಕೃಷಿ ವಲಯದ ಕೊಡುಗೆ ಐದನೇ ಒಂದು ಭಾಗಕ್ಕಿಂತ ಕಡಿಮೆ ಇದೆ.ಕೃಷಿ ವಲಯಕ್ಕೆ ಸೂಕ್ತ ಪ್ರೋತ್ಸಾಹ ನೀಡುವ ಘೋಷಣೆಗಳನ್ನು ಸರಕಾರವು ಈ ಬಾರಿ ಬಜೆಟ್‍ನಲ್ಲಿ ಮಾಡಬೇಕಿದೆ . ಈ ಮಧ್ಯೆ ರಾಷ್ಟ್ರಮಟ್ಟದಲ್ಲಿ ಕೃಷಿ ಸಾಲ ಮನ್ನಾಘೋಷಣೆ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.ಆ ಬೇಡಿಕೆಗೆ ಈವರೆಗೆ ನರೇಂದ್ರ ಮೋದಿ ಸರಕಾರ ಒಪ್ಪಿಲ್ಲ. ಪ್ರಗತಿದರವನ್ನು ಒಂಭತ್ತು ಪಸೆರ್ಂಟ್‍ಗೆ ಹೆಚ್ಚಿಸಬೇಕು ಎಂಬ ನಿರೀಕ್ಷೆ ಇರುವುದರಿಂದ ಈ ಬಾರಿಯ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.

          ಮುಂಗಡ ಪತ್ರದಲ್ಲಿ ವಿತ್ತೀಯ ಕೊರತೆಯನ್ನು ಯಾವರೀತಿಯಲ್ಲಿ ಹೊಸ ಯೋಜನೆಗಳ ಮುಖಾಂತರ ಗುರಿಯನ್ನು ಸಾಧಿಸಲಿದ್ದಾರೆ ಎಂಬುದು ಆರ್ಥಿಕ ತಜ್ಞರು ಕಾತುರತೆಯಿಂದ ಕಾಯುವಂತಾಗಿದೆ . ಈ ಬಜೆಟ್ 92 ವರ್ಷ ಹಳೆಯದಾದ ಯೋಜನೆ ಮತ್ತುಯೋಜನೇತರ ವೆಚ್ಚಗಳ ಪರಿಕಲ್ಪನೆಗೆ ವಿದಾಯ ಹೇಳಿ ಸರ್ಕಾರಿ ವೆಚ್ಚಗಳನ್ನು ವರ್ಗೀಕರಿಸುವ ಪದ್ಧತಿಯನ್ನು ಪ್ರಾರಂಭಿಸಲಿದ್ದಾರೆ . ಸಾಮಾನ್ಯ ಬಜೆಟ್‍ನಲ್ಲಿ ರೈಲ್ವೆ  ಬಜೆಟ್‍ನ್ನು ಅಂರ್ತಗತಗೊಳಿಸಲಾಗಿದೆ . ಹೀಗಾಗಿ ಸಾಮಾನ್ಯ ಬಜೆಟ್‍ನ ಮಹತ್ವ ಜನಸಾಮಾನ್ಯರಿಗೆ ಬಹಳ ನಿರೀಕ್ಷೆ ಹುಟ್ಟಿಸಿದೆ.

       ದೇಶದ ಬಡಜನರ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು 2018 ರಲ್ಲಿನ ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಈ ಬಾರಿ ಆರೋಗ್ಯಕ್ಷೇತ್ರಕ್ಕಾಗಿ ಮತ್ತಷ್ಟು ಕ್ರಮಗಳನ್ನು ಘೋಷಿಸುವ ಸಾಧ್ಯತೆಗಳಿವೆ . ಆದಾಯ ತೆರಿಗೆ ಕಾಯ್ದೆ 80ಡಿ ಯಡಿ ವೈದ್ಯಕೀಯ ಚಿಕಿತ್ಸೆ ಹಾಗೂ ರೋಗಪೂರ್ವ ಚೆಕಪ್‍ಗಳಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಬಹುದಾಗಿದೆ . ಜಿಎಸ್‍ಟಿ ಜಾರಿಯಾದ ಬಳಿಕ ಅನೇಕ ಪರೋಕ್ಷ ತೆರಿಗೆಗಳು ಕೇಂದ್ರ ಬಜೆಟ್‍ನ ಪರಿಧಿಯಿಂದ ನಿರ್ಗಮಿಸಲಿದೆ. ಈ ಮೊದಲು ಪರೋಕ್ಷ ತೆರಿಗೆಗಳ ಮೇಲೆ ಬಜೆಟ್ ಪ್ರಭಾವ ಪ್ರಾಮುಖ್ಯತೆ ಪಡೆದಿತ್ತು . ಪ್ರಸ್ತುತ ಜಿಎಸ್‍ಟಿ ಮಂಡಳಿ ನಿರ್ಧಾರದ ಮೇಲೆ ಬದಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆಗಳ ಪ್ರಭಾವ ಬಜೆಟ್ ಮೇಲೆ ಆಗುತ್ತದೆ.

       ರೈತರ ಸಮಸ್ಯೆಗಳು ಮತ್ತು ತೆರಿಗೆದರ ಇಳಿಕೆ, ಇತರ ತೆರಿಗೆ ಪ್ರಯೋಜನಗಳ ಬಗ್ಗೆ ಕೂಡಜನರು ನಿರೀಕ್ಷೆ ಹೊಂದಿದ್ದು, ಈ ಸಂಬಂಧ ಪ್ರಸಕ್ತ ವರ್ಷ ಮಾತ್ರವಲ್ಲದೆ, ಮುಂಬರುವ ಯೋಜನೆಗಳನ್ನು ಕೂಡ ಬಜೆಟ್‍ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಗೋಯಲ್ ಮಂಡಿಸಲಿರುವ ಬಜೆಟ್‍ನಲ್ಲಿತೆರಿಗೆ ಸುಧಾರಣೆ ಮತ್ತು ತೆರಿಗೆದರ ಕಡಿತದ ಕುರಿತು ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ . ಜತೆಗೆ ಮೆಡಿಕಲ್‍ಇನ್ಸೂರೆನ್ಸ್‍ನಲ್ಲೂದರಕಡಿತ ಮಾಡುವ ನಿರೀಕ್ಷೆಯಿದೆ.  

       ರೈತರ ಮತ್ತು ಕೃಷಿ ವಲಯದ ಸಮಸ್ಯೆಗಳು, ಮಧ್ಯಮ ವರ್ಗಕ್ಕೆತೆರಿಗೆ ಸುಧಾರಣಾಕ್ರಮ ಈ ಬಾರಿಯ ಬಜೆಟ್‍ನ ಪ್ರಮುಖ ಅಂಶವಾಗಲಿದೆ. ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಜೆಟ್ ಮಂಡಿಸಿದರೂ, ಮತ್ತೆ ಎನ್‍ಡಿಎ ಸರಕಾರ ಬಂದರೆ ಯೋಜನೆಗಳ ಜಾರಿ ಮತ್ತು ಸಮತೋಲನ ಸಾಧ್ಯವಾಗುವಂತೆ ಕೇಂದ್ರ ಸರಕಾರ ಗಮನ ಹರಿಸಬೇಕಿದೆ . ಒಟ್ಟಾರೆ ಜೇಟ್ಲಿ ಚಿಂತನೆಯುಳ್ಳ ಬಜೆಟ್‍ನ್ನು ಗೋಯಲ್ ಮಂಡಿಸುವಂತಾಗಿದ್ದರೂ ಕೂಡ ವಿಭಿನ್ನತೆಯಿಂದ ಭಾವಿಸಬೇಕಾದ ಪ್ರಸಂಗ ನಮ್ಮೆಲ್ಲರಿಗೂ ಮೂಡಿದೆ.

ಪ್ರೊ. ಪರಮಶಿವಯ್ಯ ಪಿ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here