ಡಾಲರ್ ಕೊಡಿಸುವ ನೆಪದಲ್ಲಿ ವಿಧ್ಯಾರ್ಥಿಗೆ ಮೋಸ…!!

ಬೆಂಗಳೂರು

      ಅಮೇರಿಕನ್ ಡಾಲರ್ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಯೊಬ್ಬರಿಗೆ ಮೋಸ ಮಾಡಿರುವ ಕೃತ್ಯವು ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

       ಆನೇಕಲ್‍ನ ಆಕಾಶ್ ರವೀಂದ್ರ ನಾಯಕ್ ಮೋಸ ಹೋದ ವಿದ್ಯಾರ್ಥಿ. ಇತ್ತೀಚೆಗೆ ಕೆಲಸದ ನಿಮಿತ್ತ ಶ್ರೀಲಂಕಾ ಹೋಗಲು ನಿರ್ಧರಿಸಿದ್ದ. ಹೀಗಾಗಿ ಯುಎಸ್ ಡಾಲರ್‍ಗಾಗಿ ಹುಡುಕಾಟ ನಡೆಸಿದ್ದನಂತೆ. ಈ ವೇಳೆ ಆನ್‍ಲೈನ್‍ನಲ್ಲಿ ಅರವಿಂದ್ ಎಂಬುವವನ ನಂಬರ್ ಸಿಕ್ಕದ್ದು ಆತನಿಗೆ ಕರೆ ಮಾಡಿದ್ದ.

      ಈ ವೇಳೆ ಅರವಿಂದ್ ಆರ್‍ಬಿಐ ನಿಯಮದ ಪ್ರಕಾರ ನೇರವಾಗಿ ಡಾಲರ್ ಸಿಗಲ್ಲ. ನೀವು ನಿಮ್ಮ ಅಕೌಂಟ್‍ನ ಎಲ್ಲಾ ಡೀಟೇಲ್ಸ್ ಕೊಡಬೇಕು ಎಂದಿದ್ದ. ಇದನ್ನ ನಂಬಿ ತನ್ನೆಲ್ಲಾ ಅಕೌಂಟ್ ಡೀಟೇಲ್ಸ್ ನೀಡಿ ಒಟಿಪಿಯನ್ನೂ ಶೇರ್ ಮಾಡಿದ್ದು, ಅರೋಪಿ 50 ಸಾವಿರ ರೂಪಾಯಿ ಆಕಾಶ್ ಅಕೌಂಟ್‍ನಿಂದ ಡ್ರಾ ಮಾಡಿದ್ದಾನೆ.

       ವಿದ್ಯಾರ್ಥಿಗೆ ತಾನು ಮೋಸ ಹೋಗಿರುವ ವಿಚಾರ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ಸೈಬರ್ ಕ್ರೈಂ ಪೊಲೀಸರ ಸಹಕಾರದೊಂದಿಗೆ ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap