63 ನೇ ಕನ್ನಡ ರಾಜ್ಯೋತ್ಸವ

0
22

ಹಾವೇರಿ :

          ನಗರದ ಇಜಾರಿ ಲಕ್ಮಾಪುರದಲ್ಲಿನ ಜ್ಯೋತಿ ಬುದ್ಧಿಮಾಂಧ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಜಾತ್ಯಾತೀತ ಜನತಾ ದಳ ಪಕ್ಷದ ವತಿಯಿಂದ 63 ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಹಾಗೂ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕನ್ನಡ ರಾಜ್ಯೋತ್ಸವ ಆಚರಿಲಾಯಿತು.

        ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ|| ಸಂಜಯ ಡಾಂಗೆ ಭಾಷಾವಾರು ಕರ್ನಾಟಕ ಏಕೀಕರಣಕ್ಕಾಗಿ ಹಲವಾರು ಕನ್ನಡ ನಾಡಿನ ಮಹಾನ್ ಸಾಧಕರು ಶ್ರಮವಹಿಸಿದ್ದಾರೆ. ಮಾತೃ ಭಾಷೆಯೇ ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರವಾಗಿದ್ದು, ಇಂದಿನ ದಿನಮಾನಗಳಲ್ಲಿ ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಮೋರೆ ಹೋಗಿ ತಾಯಿ ಭಾಷೆ ಹಾಗೂ ನಮ್ಮತನವನ್ನು ಕಳೆದುಕೊಳ್ಳುವ ಹಂತ ತಲುಪುತ್ತಿರುವುದು ವಿಷಾಧಕರ.

       ಮೈತ್ರಿ ಸರ್ಕಾರದ ಸಿಎಂ ಕುಮಾರಸ್ವಾಮಿ ಎಲ್ಲ ಸರ್ಕಾರಿ ಆಡಳಿತದಲ್ಲಿ ಮಾತೃ ಭಾಷೆಯ ಉಳಿವಿಗಾಗಿ ಕನ್ನಡ ಮುಖ್ಯ ಎಂದು ಭಾವಿಸಿ ಆದೇಶ ನೀಡಲಾಗಿದ್ದು, ಕನ್ನಡ ಪುತ್ರನಾಗಿ ಉತ್ತಮ ಬೆಳವಣೆಗೆಯಾಗಿದೆ. ಈ ದಿನ ವಿಶೇಷ ಚೇತನ ಮಕ್ಕಳೊಂದಿಗೆ ರಾಜ್ಯೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷಕರ. ಸರ್ಕಾರ ಎಲ್ಲರ ಪರವಾಗಿ ಕೆಲಸ ಮಾಡಲಿದೆ ಎಂದರು. ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಯರಾದ ಬಸವಂತ ಕಾಳಣ್ಣನವರ ಮಾತನಾಡಿ ನಮಗೆ ಇಂದು ಅತ್ಯಂತ ಸಂತೋಷಕರವೆನೆಂದರೆ ರಾಜ್ಯ ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಎಲ್ಲ ಶಾಲೆಗಳಂತೆ ವಿಕಲಚೇತನ ಶಾಲೆಯ ಮಕ್ಕಳಿಗೂ ಪೌಷ್ಠಿಕತೆ ನೀಡುವ ಹಾಲನ್ನು ಒದಗಿಸುವ ಕ್ಷೀರ ಭಾಗ್ಯ ಯೋಜನೆ ವಿಸ್ತರಣೆ ಮಾಡಲಾಗಿದ್ದು, ಈ ಸರ್ಕಾರ ಹಾಗೂ ಕನ್ನಡ ನೆಲದ ಮಣ್ಣಿನ ಮಗನ ಮಹತ್ವಪೂರ್ಣ ಕೆಲಸವಾಗಿದೆ.

          ಕನ್ನಡ ಭಾಷೆ ನೆಲೆ ಹಾಗೂ ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ಶಹರ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ ಕನ್ನಡ ರಾಜ್ಯೋತ್ಸವ ಹಬ್ಬವಾಗಿ ಆಚರಿಸಿ ನಮ್ಮ ಭಾಷೆ,ನೆಲ,ಜಲಗಳ ರಕ್ಷಣೆ ಮಾಡಲು ಕನ್ನಡ ನಾಡಿನ ನಾವೆಲ್ಲರೂ ಸಿದ್ದರಾಗಬೇಕು ಎಂದರು. ಈ ಸಂದರ್ಭದಲ್ಲಿ ಪಕ್ಷದ ಯುತ್ ತಾಲೂಕಾಧ್ಯಕ್ಷ ಸುನೀಲ ದಂಡೆಮ್ಮನವರ.ಮುಖಂಡರಾದ ಅಲ್ತಾಪ್ ನದಾಫ್.ಪರಶುರಾಮ ಹಾವೇರಿ. ಸೈಯದ್ ಜಮಾದಾರ.ಬಸವರಾಜ ಕುರುಬರ.ರಘು ಎಂ.ಲೋಕೇಶ ಕೆ.ಇಮ್ರಾನ್ ಹುಬ್ಬಳ್ಳಿ. ಮಹಿಳಾ ಘಟಕದ ಉಪಾಧ್ಯಕ್ಷೆ ರೀಟಾ,ಮೆಹಬೂಬ,ಪರಶುರಾಮ ಎಂ.ಜೆಬಿವುಲ್ಲಾ ಎಸ್.ಶಾಲೆಯ ಭೋಧಕ ವರ್ಗದವರಾದ ಸುಭಾಸ ಮಲ್ಲಾಡದ.ರೇವಣ್ಣ ಸಿದ್ದಯ್ಯ ಮರಿಗೌಡ್ರ.ಭುವನೇಶ್ವರಿ ಮತ್ತಿಗಟ್ಟಿ. ಜಯಲಕ್ಷ್ಮಿ ಕೋರಿ, ಆಸ್ಪಕ್‍ಬೇಗಂ ನದಾಫ್ ಪಕ್ಷದ ಮುಖಂಡರು ಹಾಗೂ ಶಾಲಾ ಕಾರ್ಯ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here