ಸರ್ವತೋಮುಖ ಅಭಿವೃದ್ಧಿಯೇ ವಿಜಯದಶಮಿ ಆಶಯ

ದಾವಣಗೆರೆ:

     ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯೇ ವಿಜಯದಶಮಿ ಆಚರಣೆಯ ಉದ್ದೇಶವಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

      ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಪ್ರಯುಕ್ತ ಶ್ರೀದುರ್ಗಾಂಬಿಕಾ ದೇವಿಯ ವಿಗ್ರಹದ ಘಟಸ್ಥಾಪನೆ ನೆರವೇರಿಸಿ ವಿಜಯ ದಶಮಿಗೆ ಚಾಲನೆ ನೀಡಿ ಅವರು ಮಾತನಾಡಿದರು.

      ಭಾರತೀಯ ಸಂಸ್ಕøತಿಯಲ್ಲಿ ಹಿಂದೂ ಧರ್ಮದ ಮೌಲ್ಯಗಳನ್ನು ಪಸರಿಸುವುದೇ ಶರನ್ನವರಾತ್ರಿ ಆಚರಣೆಯ ಉದ್ದೇಶವಾಗಿದೆ. ನಾಡಿನ ಸಮೃದ್ಧಿ, ಸುಭೀಕ್ಷೆಗಾಗಿ ನವರಾತ್ರಿ ಹಬ್ಬದಲ್ಲಿ ಒಂಭತ್ತು ದಿನಗಳ ಕಾಲ ನವ ಮಾತೆಯರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಸಕಾಲಕ್ಕೆ ಮಳೆ-ಬೆಳೆಯಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಿ ಅನ್ನಕ್ಕೆ ಕೊರತೆ ಎದುರಾಗದೇ ರೈತರ ಬದುಕು ಹಸನಾಗಲಿ ಎಂದು ಆಶಿಸಿದರು.

      ವಿಜಯ ದಶಮಿಯನ್ನು ಭಾರತೀಯರು ವೈಶಿಷ್ಠಪೂರ್ಣವಾಗಿ ಆಚರಿಸುತ್ತಾರೆ. ಮಾತೆ ದುರ್ಗೆಯು ಶತೃಬಾಧೆ, ಭಯೋತ್ಪಾದಕರ ಬಾಧೆಗಳನ್ನು ತಡೆಯುವ ಶಕ್ತಿಯನ್ನು ಸೈನಿಕರಿಗೆ ಕರುಣಿಸಲಿ. ಕಾಯ, ವಾಚ, ಮನಸ್ಸನ್ನು ಶುದ್ಧೀಕರಿಸಿಕೊಳ್ಳುವ ಸಂಕಲ್ಪದೊಂದಿಗೆ, ರಾಗ, ದ್ವೇಷ, ಅಸೂಯೆ, ಮೋಹಗಳನ್ನು ಬದಿಗೊತ್ತಿ, ಸಮಾಜಮುಖಿಯಾಗಿ ಒಳ್ಳೆಯದನ್ನು ತುಂಬಲು ಹಬ್ಬದಾಚರಣೆ ಉದ್ದೀಪನಗೊಳಿಸಲಿ. ಜ್ಞಾನದ ಶಕ್ತಿಯನ್ನು ಬೆಳೆಸುವ ಜತೆಗೆ ಆಧ್ಯಾತ್ಮಿಕ, ಧಾರ್ಮಿಕ ಬೆಳಕನ್ನು ಬೆಳಗಲಿ ಎಂದರು

       ಕಾರ್ಯಕ್ರಮದಲ್ಲಿ ಸಂಚಾಲಕ ಎನ್. ರಾಜಶೇಖರ್, ಎಸ್.ಟಿ. ವೀರೇಶ್, ಕೆ.ಬಿ.ಶಂಕರನಾರಾಯಣ, ವೈ. ಮಲ್ಲೇಶ್, ರಾಜನಹಳ್ಳಿ ಶಿವಕುಮಾರ್, ಸವಿತಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap