ತ್ಯಾಗ, ಸ್ವಾಭಿಮಾನ, ರಾಷ್ಟ್ರಭಕ್ತಿ ಗಳಗನಾಥರ ಸಾಹಿತ್ಯಿಕ ನೆಲೆ

ಹಾವೇರಿ

        ಜನರಲ್ಲಿ ಪ್ರೇಮ, ದಯೆ, ತ್ಯಾಗ, ಸ್ವಾತಂತ್ರ್ಯ, ಸ್ವಾಭಿಮಾನ, ರಾಷ್ಟ್ರಭಕ್ತಿ ಒಡಮೂಡಬೇಕು, ನೆಲೆನಿಲ್ಲಬೇಕು, ಬೆಳಗಬೇಕು ಎಂಬುದು ಗಳಗನಾಥರು ರಚಿಸಿರುವ ಸಾಹಿತ್ಯದ ನೆಲೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ದುಷ್ಯಂತ ನಾಡಗೌಡ ಅವರು ಹೇಳಿದರು.

           ಶನಿವಾರ ನಗರದ ಜ್ಯೋತಿಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಗಳನಾಥ ಹಾಗೂ ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ 151ನೆಯ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಕನ್ನಡ ಪರಿಸ್ಥಿತಿ ಶೋಚನೀಯವಾಗಿದ್ದ ಕಾಲದಲ್ಲಿ ನಾಡು-ನುಡಿಗಾಗಿ ದುಡಿದ ಸಾಹಿತಿಗಳ ಹೆಸರುಗಳಲ್ಲಿ ಗಳಗನಾಥರು ಅತ್ಯಂತ ಪ್ರಮುಖರಾಗಿದ್ದಾರೆ. ಅವರ ಪರಿಚಯವನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದು ನಾಡಗೌಡ ಹೇಳಿದರು.ನೇತ್ರದಾನ ಪ್ರೇರಣಾ ಸಂಘದ ಅಧ್ಯಕ್ಷ ಜಿಲ್ಲಾಧ್ಯಕ್ಷ ಪ್ರಭಾಕರರಾವ್ ಮಂಗಳೂರ ಅವರು ಮಾತನಾಡಿ, ವಿಶೇಷ ಚೇತನ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರಬೇಕಾಗಿದೆ. ಇಂಥಹ ಮಕ್ಕಳ ಶಿಕ್ಷಕರ ಸೇವೆ ಅನನ್ಯ. ಮಕ್ಕಳ ಪ್ರತಿಭೆ ಹಾಗೂ ಶಿಕ್ಷಕರ ಪ್ರಾಮಾಣಿಕ ಪ್ರಯತ್ನಕ್ಕೆ ಉತ್ತೇಜಿಸಲು ಪ್ರಯೋಜಕತ್ವವಹಿಸಿಕೊಳ್ಳುವೆ ಎಂದು ಹೇಳಿದರು.

           ಸಾಹಿತಿ ಹನುಮಂತಗೌಡ ಗೊಲ್ಲರ,ಹೊಯ್ಸಳ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಕೃಷ್ಣಾ ಜವಳಿ, ವಸತಿ ಪ್ರಾಂಶುಪಾಲ ಬಸವಂತ ಕಾಳಣ್ಣನವರ ಮಾತನಾಡಿದರು. ಪ್ರತಿಷ್ಠಾನದ ಸದಸ್ಯ ಸಂಚಾಲಕ ವೆಂಕಟೇಶ ಗಳಗನಾಥ, ಮುತ್ತಮ್ಮ ಮರಿದ್ಯಾಮಣ್ಣನವರ, ರೂಪಾ ಜಲದಿ, ಭುವನೇಶ್ವರಿ ಮತ್ತಿಗಟ್ಟಿ, ಬಸಯ್ಯ ಹುಚ್ಚುಯ್ಯನವರಮಠ, ಸುಭಾಸ ಮಲ್ಲಾಡದ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap