6.48ಲಕ್ಷ ರೂ.ಗಳ 17 ದ್ವಿಚಕ್ರವಾಹನಗಳ ವಶ;ಓರ್ವನ ಬಂಧನ

0
7

ಬಳ್ಳಾರಿ

         ಬಳ್ಳಾರಿ ಕೌಲ್‍ಬಜಾರ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಮೋಟಾರ್ ಸೈಕಲ್ ಕಳ್ಳನನ್ನು ಬಂಧಿಸಿ ಅವನಿಂದ 6.48 ಲಕ್ಷ ರೂ.ಮೊತ್ತದ 9 ಮೋಟಾರ್ ಸೈಕಲ್ ಹಾಗೂ 8 ಸ್ಕೂಟರ್ ಸೇರಿ 17 ದ್ವಿಚಕ್ರ ವಾಹನಗಳನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.

         19 ವರ್ಷದ ಹುಸೇನ್ ಅಹ್ಮದ್ ಸಮೀರ್ ತಂದೆ ಮಹ್ಮದ್ ಶರೀಫ್ ಎಂಬುವರನ್ನು ಟಿ.ಬಿ.ಸ್ಯಾನಿಟೋರಿಯಂ ಹತ್ತಿರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಈ ಆರೋಪಿಯು ಕೌಲ್‍ಬಜಾರ್ ಹಾಗೂ ಬ್ರೂಸ್‍ಪೇಟೆ ಪೊಲೀಸ್ ಠಾಣಾ ಸರಹದ್ದಿನಿಲ್ಲಿ ಹಾಗೂ ಇತರೆ ಕಡೆಗಳಲ್ಲಿ ನಕಲಿ ಬೀಗಗಳನ್ನು ಉಪಯೋಗಿಸಿ ತಲೆಮರಿಸಿಕೊಂಡಿರುವ ಆರೋಪಿ-1 ಜಾವೀದ್‍ರೊಂದಿಗೆ ಸೇರಿ ಮೋಟಾರ್ ಸೈಕಲ್ ಹಾಗೂ ಸ್ಕೂಟರ್‍ಗಳನ್ನು ಕಳವು ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ರೂ.6.48ಲಕ್ಷ ಬೆಲೆಬಾಳುವ 17 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

         ಎಸ್ಪಿ ಅರುಣ ರಂಗರಾಜನ್, ಎಎಸ್ಪಿ ಲಾವಣ್ಯ, ಡಿಎಸ್‍ಪಿ ಉಮೇಶನಾಯಕ್ ಮಾರ್ಗದರ್ಶನದಲ್ಲಿ ಮೋಟಾರ್ ಸೈಕಲ್ ಪ್ರಕರಣಗಳಲ್ಲಿನ ಆರೋಪಿಗಳನ್ನು ಪತ್ತೆಹಚ್ಚಲು ಕೌಲ್‍ಬಜಾರ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ವಿ.ಚಂದನಗೋಪಾಲ್ ನಿರ್ದೇಶನದಲ್ಲಿ ಒಂದು ರಚಿಸಲಾಗಿತ್ತು. ಆ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿತ್ತು. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ವಿ.ಚಂದನ್‍ಗೋಪಾಲ್, ಅಪರಾಧ ವಿಭಾಗದ ಪಿಎಸ್‍ಐ ಎಚ್.ಬಿ.ವಿಜಯಲಕ್ಷ್ಮೀ, ಎಎಸ್‍ಐ ಲಾರೆನ್ಸ್ ಹಾಗೂ ಸಿಬ್ಬಂದಿಗಳಾದ ನಾಗರಾಜ,ಅನ್ವರಭಾಷಾ, ರಾಮದಾಸ,ಬಸವರಾಜ,ರಾಮಲಿಂಗಪ್ಪ,ಬಿ.ಸಿದ್ದೇಶ, ಎಂ.ರಾಜ, ಕೀರ್ತಿರಾಜ, ಮಹಾಲಿಂಗಪ್ಪ ಭಾಗವಹಿಸಿದ್ದರು. ಸದರಿ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಈ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರ ಕಾರ್ಯವೈಖರಿಯನ್ನು ಎಸ್ಪಿ ಅರುಣ ರಂಗರಾಜನ್ ಅವರು ಶ್ಲಾಘಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here