ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಮೊದಲ ದಿನವೇ 187 ವಿದ್ಯಾರ್ಥಿಗಳು ಗೈರು

ಚಳ್ಳಕೆರೆ

         ಪ್ರಸ್ತುತ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ತಾಲ್ಲೂಕಿನಾದ್ಯಂತ ಒಟ್ಟು 18 ಕೇಂದ್ರದಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಿದ್ದು, ನಗರದಲ್ಲಿ 6, ಗ್ರಾಮೀಣ ಭಾಗದಲ್ಲಿ 12 ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ 4882 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರೌಢಶಿಕ್ಷಣ ಮಂಡಳಿ ವ್ಯವಸ್ಥೆ ಮಾಡಿತ್ತು.

         ಪ್ರಾರಂಭದ ದಿನದಂದೆ ತಾಲ್ಲೂಕಿನಾದ್ಯಂತ ಇರುವ 18 ಪರೀಕ್ಷಾ ಕೇಂದ್ರಗಳಲ್ಲಿ 187 ವಿದ್ಯಾರ್ಥಿಗಳು ಮೊದಲನೇ ದಿನವೇ ಗೈರು ಹಾಜರಾಗಿದ್ದು, 4882 ವಿದ್ಯಾರ್ಥಿಗಳಲ್ಲಿ 4695 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿರುತ್ತಾರೆ. ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಅಬ್ಬೇನಹಳ್ಳಿಯಲ್ಲಿ 25, ನಾಯಕನಹಟ್ಟಿ ಎಸ್‍ಟಿಎಸ್‍ಆರ್ ಶಾಲೆಯಲ್ಲಿ 20, ಹಿರೇಹಳ್ಳಿ ಚಿಂತಾಮಣೇಶ್ವರ ಪ್ರೌಢಶಾಲೆಯಲ್ಲಿ 15, ಪರಶುರಾಮಪುರ ಪದವಿ ಪೂರ್ವ ಕಾಲೇಜು 12, ನಗರದ ಮೊರಾರ್ಜಿ ಶಾಲೆಯಲ್ಲಿ 15 ಆದರ್ಶ ಶಾಲೆಯ 6, ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ನಗರದ ಪ್ರದೇಶದ ಶಾಲೆಯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

         ಪರೀಕ್ಷಾರ್ಥಿಗಳಿಗೆ ಅಡ್ಡವಾದ ರೈಲ್ವೆ ಗೇಟ್ : ಬುಧವಾರ ಆರಂಭವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಮೊರಾರ್ಜಿ ಹಾಗೂ ಆದರ್ಶ ಶಾಲೆಯ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಹೋಗುವ ಸಂದರ್ಭದಲ್ಲಿ ರೈಲ್ವೆ ಗೇಟ್ ಹಾಕಿದ್ದು, ಕೆಲ ನಿಮಿಷಗಳ ಕಾಲ ಅನಿವಾರ್ಯವಾಗಿ ವಾಹನಗಳ ಓಡಾಟ ಸ್ಥಗಿತಗೊಂಡಿದ್ದರಿಂದ ವಾಹನದಲ್ಲಿದ್ದ ಪರೀಕ್ಷಾರ್ಥಿಗಳು ಸಹ ಕೇಂದ್ರಕ್ಕೆ ತಡವಾಗಿ ತಲುಪಿದರು. ಇದರಿಂದ ನೂರಾರು ವಿದ್ಯಾರ್ಥಿಗಳು ಕೆಲ ಹೊತ್ತು ಆತಂಕಕ್ಕೆ ಈಡಾಗಿದ್ದರು ಎನ್ನಲಾಗಿದೆ. ಮೊರಾರ್ಜಿ ಹಾಗೂ ಆದರ್ಶ ಶಾಲೆಯ ನಗರದಿಂದ ಸುಮಾರು 2 ಕಿ.ಮೀ ದೂರವಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ತೊಂದರೆ ಎದುರಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಗಮನಹರಿಸಬೇಕೆಂದು ಪೋಷಕರ ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap