ವರಹಾ ವಿರುದ್ಧ ಕಾರ್ಯಾಚರಣೆ: 200 ಹಂದಿ ಸೆರೆ

ದಾವಣಗೆರೆ:

       ನಗರದಲ್ಲಿ ಮಹಾನಗರ ಪಾಲಿಕೆಯು ಮತ್ತೂ ಆಪರೇಷನ್ ವರಹಾ ಮುಂದುವರೆಸಿದ್ದು, ಮಂಗಳವಾರ ನಗರದ ವಿವಿಧ ಪ್ರದೇಶಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಹಂದಿಗಳನ್ನು ಸೆರೆ ಹಿಡಿದು ನಗರದಿಂದ ಸ್ಥಳಾಂತರ ಮಾಡಿದೆ.

         ಮಂಗಳವಾರ ಬೆಳಗ್ಗೆಯಿಂದಲೇ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿ ಡಾ. ಚಂದ್ರಶೇಖರ್ ಸುಂಖದ್, ಪರಿಸರ ಅಭಿಯಂತರ ಸುನೀಲ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‍ನಲ್ಲಿ ಹಂದಿ ಹಿಡಿಯಲು ತಮಿಳುನಾಡಿನಿಂದ ನಗರಕ್ಕೆ ಆಗಮಿಸಿರುವ 25 ಜನರ ತಂಡ ಬಲೆ ಬೀಸಿ, ಕೈಗೆ ಸಿಕ್ಕ ಹಂದಿಗಳನ್ನು ಸೆರೆ ಹಿಡಿದು ನಗರದಿಂದ ಲಾರಿಗಳ ಮೂಲಕ ಹೊರ ಸಾಗಿಸಲಾಯಿತು.

        ಇಲ್ಲಿ ಬಸವನಗರ ಪೊಲೀಸ್ ಠಾಣೆ ರಸ್ತೆ, ಗಡಿಯಾರ ಕಂಬ, ಬಿಎಸ್‍ಸಿ ಅಂಗಡಿ ರಸ್ತೆ, ಹಗೆದಿಬ್ಬ ವೃತ್ತ, ಗಾಂಧಿನಗರ ಪೊಲೀಸ್ ಠಾಣೆ ರಸ್ತೆ, ಜಾಲಿನಗರ ಸುರೇಶ್ ನಗರ, ನಗರದೇವತೆ ದುರ್ಗಾಂಭಿಕಾ ದೇವಸ್ಥಾನ ರಸ್ತೆ, ಆಫೀಸರ್ಸ್ ಕ್ಲಬ್ ರಸ್ತೆ, ಬಾಪೂಜಿ ಸಮುದಾಯ ಭವನ ರಸ್ತೆ, ಎಸ್‍ಎಸ್ ಲೇಔಟ್ ಸೇರಿದಂತೆ ವಿವಿಧೆಡೆ ಹಂದಿ ಸೆರೆ ಕಾರ್ಯಾಚರಣೆ ನಡೆದಿದ್ದು, ಇಂದು ಸಹ ಕಾರ್ಯಾಚರಣೆ ಮುಂದು ವರೆಯಲಿದೆ.

         ಜಾಲಿ ನಗರದಲ್ಲಿ ಹಂದಿ ಸೆರೆ ಹಿಡಿಯುತ್ತಿದ್ದ ಸಂದರ್ಭದಲ್ಲಿ ಪಾಲಿಕೆ ಸದಸ್ಯರೋರ್ವರು ತಮ್ಮ ಹಂದಿಗಳ ಸೆರೆ ಹಿಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆಂದು ಹೇಳಲಾಗುತ್ತಿದೆ.ಕಾರ್ಯಾಚರಣೆಯಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕ ಪ್ರಕಾಶ್, ಅಂಜಿನಪ್ಪ, ಸಂತೋಷ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap