ದಲಿತರ ಕಾಲೋನಿಗಳ ಅಭಿವೃದಿಗೆ 23 ಕೋಟಿ

ಕುಣಿಗಲ್

       ತಾಲ್ಲೂಕಿನಲ್ಲಿ ಡಾ ಬಿ.ಆರ್ ಅಂಬೇಡ್ಕರ್‍ರವರ, ಬಾಬು ಜಗಜೀವನರಾಂರವರ ಹಾಗೂ ವಾಲ್ಮೀಕಿ ಭವನ ಸೇರಿದಂತೆ ವಿವಿಧ ದಲಿತರ ಕಾಲೋನಿಗಳ ಅಭಿವೃದಿಗೆ 23 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ತಾಲ್ಲೂಕು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಾದ ಜಯಣ್ಣ ತಿಳಿಸಿದರು

        ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ,ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ,ತಾಲ್ಲೂಕಿನ ಮುಖ್ಯ ಕೇಂದ್ರವಾದ ಪಟ್ಟಣದಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣ ಕೈಗೊಳ್ಳಲು 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಪ್ರಸ್ತಾವನೆಯನ್ನ ಶಾಸಕರಾದ ಡಾ ರಂಗನಾಥ್‍ರವರ ಮೂಲಕ ಸರ್ಕಾರವನ್ನ ಕೋರಲಾಗಿದ್ದು,ಈ ಭವನ ನಿರ್ಮಾಣಕ್ಕೆ 1.5 ಕೋಟಿ ಇದೆಯೆಂದು ತಿಳಿಸುತ್ತಾ,ಈಗಾಗಲೇ ಹಳೆಯ ಅಂಬೇಡ್ಕರ್ ಭವನದ ಕಟ್ಟಡವನ್ನ ತೆರವುಗೊಳಿಸಲಾಗಿದೆ,

        ಅದೇ ರೀತಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂರವರ ಭವನ,ವಾಲ್ಮೀಕಿ ಭವನವನ್ನ ನಿರ್ಮಾಣ ಮಾಡಲು ಸಹ ಈಗಾಗಲೇ ತಹಸೀಲ್ದಾರರಿಗೆ ನಿವೇಶನ ನೀಡುವಂತೆ ಕೋರಲಾಗಿದ್ದು,ಈ ಭವನಗಳನ್ನು ಸಹ ತಲಾ 5 ಕೋಟಿ ವೆಚ್ಚಗಳಲ್ಲಿ ನಿರ್ಮಾಣ ಮಾಡಲಾಗುವುದು. ತಾಲ್ಲೂಕಿನ ಹಲವು ಹರಿಜನ ಕಾಲೋನಿಗಳ ರಸ್ತೆ, ಚರಂಡಿ, ಸಮುದಾಯ ಭವನಗಳು ಸೇರಿದಂತೆ 23 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಲಾಗಿದೆ. ತಾಲ್ಲೂಕಿನಾದ್ಯಂತ ಓಬಿಸಿ ,ಎಸ್.ಸಿ.,ಎಸ್.ಟಿ., ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಹಾಸ್ಟೆಲ್ ಸೌಲಭ್ಯ ನೀಡಿ 20 ಸಾವಿರ ಮಕ್ಕಳು ವ್ಯಾಸಂಗ ಮಾಡುತ್ತಿರುತ್ತಾರೆ ಎಂದರು.ಪ್ರತಿ ಹೋಬಳಿಯಲ್ಲು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.ತಾಲ್ಲೂಕಿನ ದಲಿತರ ಸ್ಮಶಾನಗಳ ಅಭಿವೃದ್ದಿüಗಾಗಿ 30 ಲಕ್ಷ ರೂಪಾಯಿ ಹಣ ಬಿಡುಗೊಡೆಗೊಂಡಿದೆ ಎಂದು ತಿಳಿಸಿದರು.

        ದಲಿತರಿಗೆ ದೇವಸ್ಥಾನಕ್ಕೆ ಮುಕ್ತ ಅವಕಾಶ ನೀಡುವಂತೆ ಮುಜರಾಯಿ ದೇವಸ್ಥಾನಗಳಲ್ಲಿ ನಾಮ ಫಲಕ,ಹೋಟೆಲ್‍ಗಳಲ್ಲಿ ನಾಮಫಲಕ ಹಾಕಿಸುವಂತೆ ದಲಿತ ಮುಖಂಡರು ಒತ್ತಾಯಿಸಿದರು.ಮಿನಿ ವಿಧಾನಸೌಧ ಮುಂಭಾಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸುವಂತೆ ಒತ್ತಾಯಿಸಲಾಯಿತು.

        ತಾಲ್ಲೂಕು ಮಟ್ಟದ ಅಧಿಕಾರಿಗಳು ದಲಿತರ ಹಿತರಕ್ಷಣಾ ಸಭೆಗೆ ಗೈರು ಹಾಜರಾಗಿರುವವರ ಬಗ್ಗೆ ಸೂಕ್ತ ಕ್ರಮ ಜರುಗಿದಸಸಬೇಕೆಂದು ಒತ್ತಾಯಿಸಲಾಯಿತು.

        ಅಧ್ಯಕ್ಷತೆಯನ್ನ ತಹಸೀಲ್ದಾರ್ ನಾಗರಾಜು ವಹಿಸಿದ್ದರು,ಇಓ ಶಿವರಾಜಯ್ಯ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.ಸಭೆಯಲ್ಲಿ ದಲಿತ ಮುಖಂಡರಾದ ವರದರಾಜು , ರಾಮಚಂದ್ರಯ್ಯ , ದಲಿತ ನಾರಾಯಣ್ , ಎಸ್.ಆರ್.ಚಿಕ್ಕಣ್ಣ , ನರಸಿಂಹಪ್ರಸಾದ್ ,ಕರಿಯಮ್ಮ,ವಿ.ಶಿವಶಂಕರ್,ಬಿ.ಡಿ.ಕುಮಾರ್,ಚೆಲುವನಾರಾಯಣ,ಶ್ರೀನಿವಾಸ್,ರಾಮಲಿಂಗಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap