ದಿನದ 24 ಗಂಟೆಯೂ ನೀರು ಪೂರೈಕೆ;ತಿಪ್ಪಾರೆಡ್ಡಿ

ಚಿತ್ರದುರ್ಗ;

         ನಗರದಲ್ಲಿ ಅತಿ ಶೀಘ್ರದಲ್ಲಿ ದಿನದ 24 ಗಂಟೆ ಮತ್ತು ವಾರದ 7 ದಿನವು ನಿಮಗೆ ನೀರು ಸಿಗುವಂತೆ ಮಾಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟ ಕೆಲಸ ನಡೆಯುತ್ತ್ತಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.

        ನಗರದ ಕಬೀರಾನಂದ ಆಶ್ರಮದ ಮುಂಭಾಗದಲ್ಲಿ ಶಾಸಕರ ಅನುದಾನದಲ್ಲಿ ಕೊರೆಯಲಾಗಿದ್ದ ಕೊಳವೆಬಾವಿಗಳಿಗೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ನಗರದಲ್ಲಿ ನೀರಿಗಾಗಿ ಬೇಡಿಕೆ ಬರುತ್ತಿದೆ ಇದಕ್ಕಾಗಿ 25 ಕೊಳವೆ ಬಾವಿಗಳನ್ನು ಕೊರೆಯಲು 1 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ ಯಾವ ಭಾಗದಿಂದ ಬೇಡಿಕೆ ಬರುತ್ತದೆಯೋ ಅಲ್ಲಿ ಕೊಳವೆಬಾವಿಯನ್ನು ಕೊರೆಯುವುದರ ಮೂಲಕ ನೀರನ್ನು ನೀಡಲಾಗುತ್ತದೆ ಎಂದರು.

           ಈಗಾಗಲೇ ಚಿತ್ರದುರ್ಗ ನಗರ ಕೇಂದ್ರದ ಅಮೃತ್ ಸಿಟಿ ಯೋಜನೆಗೆ ಆಯ್ಕೆಯಾಗಿ ಅದರ ಕೆಲಸಗಳು ನಡೆಯುತ್ತಿದೆ ಅದರಂತೆ ಕುಡಿಯುವ ನೀರಿನ ಕೆಲಸ ಸಹಾ ನಡೆಯುತ್ತಿದೆ ಮುಂದಿನ 8 ತಿಂಗಳ ಒಳಗಾಗಿ ನಗರದ ಎಲ್ಲಾ ಮನೆಗಳಿಗೂ ಸಹಾ ದಿನದ 24 ಗಂಟೆ ಮತ್ತು ವಾರದ 7 ದಿನವು ನಿರಂತವಾಗಿ ನೀರು ಸಿಗುವಂತೆ ಮಾಡಲಾಗುವುದು, ನೀವು ಬಳಸಿದ್ದಕ್ಕೆ ಮೀಟರ್ ದರದಂತೆ ಹಣವನ್ನು ಭರ್ತಿ ಮಾಡಬೇಕಿದೆ ಎಂದು ಶಾಸಕರು ಹೇಳಿದರು.

           ನೀರು ಇದೇ ಎಂದು ಅಗತ್ಯ ಇಲ್ಲದಿದ್ದರೂ ಸಹಾ ಬಳಕೆ ಮಾಡಬೇಡಿ ಇದರಿಂದ ನಿಮಗೆ ಮುಂದಿನ ದಿನದಲ್ಲಿ ನೀರಿನ ಭವಣೆ ಉಂಟಾಗುತ್ತದೆ ಈ ರೀತಿ ಆಗದಂತೆ ಇಲ್ಲಿನ ಯಿವಜನತೆ ಎಚ್ಚರದಿಂದ ನೀರನ್ನು ಬಿಡುವ ಕೆಲಸವನ್ನು ಮಾಡಬೇಕಿದೆ ಯಾರೂ ಹೇಳಿದರು, ನಮ್ಮ ಮನೆಯಲ್ಲಿ ಕಾರ್ಯಕ್ರಮ ಇದೆ ಎಂದು ಆನಗತ್ಯವಾಗಿ ನೀರನ್ನು ಬಳಕೆ ಮಾಡಬೇಡಿ ಎಂದು ಬಡಾವಣೆಯ ಜನತೆಗೆ ಕಿವಿ ಮಾತು ಹೇಳಿದರು.

         ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಭಾಸ್ಕರ್ ಹರೀಶ್, ಮಾಜಿ ಸದಸ್ಯ ಮಹೇಶ್, ಕುಮಾರ್ ಸೇರಿದಂತೆ ಕಬೀರಾನಂದ ಆಶ್ರಮದ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap