ಅನಧಿಕೃತ ಗೂಡಂಗಡಿ ತೆರವು ಎರಡು ದಿನಗಳ ಕಾಲಾವಕಾಶ : ಪುರಸಭೆ

ಹಗರಿಬೊಮ್ಮನಹಳ್ಳಿ

      ಪಟ್ಟಣದ ಬಸವೇಶ್ವರ ಬಜಾರದಲ್ಲಿರುವ ಫುಟ್‍ಪಾತ್‍ನ್ನು ಅಕ್ರಮಿಸಿಕೊಂಡಿರುವ ವ್ಯಪಾರ ಕಟ್ಟಡಗಳ ಮಾಲೀಕರಿಗೂ ಮತ್ತು ಸರ್ವೀಸ್ ರೋಡ್‍ನ್ನು ಅಕ್ರಮಿಸಿಕೊಂಡಿರುವ ಅನಾಧಿಕೃತ ಗೂಡಂಗಡಿಗಳ ತೆರವಿಗೆ ಇಲ್ಲಿಯ ಪುರಸಭೆ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇನ್ನೆರಡು ದಿನಗಳ ಸಮಯವನ್ನು ನೀಡಿದ್ದಾರೆ.

      ಸೋಮವಾರ ಬೆಳಗ್ಗೆ ರಸ್ತೆಗಿಳಿದ ಪುರಸಭೆ ಅಧಿಕಾರಿಗಳು ಶಾಶ್ವತವಾಗಿ ಕಟ್ಟಿಕೊಂಡಿದ್ದ ಹಣ್ಣು, ಹೂ, ಮತ್ತು ಹೋಟಲ್‍ಗಳ ಗೂಡಂಗಡಿಗಳನ್ನು ತೆರವುಗೊಳಿಸಬೇಕು, ಪ್ರತಿನಿತ್ಯ ತಳ್ಳುಗಾಡಿಯಲ್ಲಿ ಬಜಾರಕ್ಕೆ ತಂದು ವ್ಯಾಪಾರಮುಗಿಸಿಕೊಂಡು ಮತ್ತೇ ಅಂಗಡಿಗಳನ್ನು ತೆರವುಗೊಳಿಸಬೇಕು ಅದು ಈಗಿರುವ ಚರಂಡಿಗಳ ಮೇಲೆ ನಿಮ್ಮ ಮೊಬೈಲ್ ಶಾಪ್‍ಗಳನ್ನು ಇಟ್ಟು ವ್ಯಾಪಾರ ಮಾಡಬೇಕು ಎಂದು ಪುರಸಭೆಯ ಮುಖ್ಯ ಅಧಿಕಾರಿ ಕೃಷ್ಣನಾಯ್ಕ ಆದೇಶಿಸಿದರು.

        ಅಲ್ಲಿಯ ರಸ್ತೆ ಬದಿಯ ವ್ಯಾಪಾರಿಗಳು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದು ಬಹು ವರ್ಷಗಳಿಂದ ನಾವು ಫುಟ್‍ಪಾತ್ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ, ನಮಗೆ ತೊಂದರೆ ನೀಡಬೇಡಿ ಎಂದು ಪ್ರತಿಭಟಿಸಿದರು. ಆದರೂ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆಯಲ್ಲಿ ಮತ್ತು ಸರ್ವೀಸ್ ರಸ್ತೆಯಲ್ಲಿ ಶಾಶ್ವತ ಗೂಡಂಗಡಿಗಳನ್ನು ತೆರೆದಿರುವುದು ಮತ್ತು ಟೆಂಟ್‍ಗಳನ್ನು ನಿರ್ಮಾಣಮಾಡಿಕೊಂಡಿರುವುದು ಸರಿ ಅಲ್ಲವೆಂದು ವಾದಿಸಿದರು.

        ಇದ್ದಕ್ಕಿದಂತೆ ರಸ್ತೆಬದಿಯ ವ್ಯಾಪಾರಿಗಳ ಪದಾಧಿಕಾರಿಗಳು ಮತ್ತು ಪುರಸಭೆಯ ಅಧಿಕಾರಿಗಳ ದಿಢೀರನೇ ತುರ್ತುಸಭೆ ಏರ್ಪಡಿಸಲಾಯಿತು. ಸಭೆಯಲ್ಲಿ ಅಧಿಕಾರಿ ಕೃಷ್ಣನಾಯ್ಕ ಮಾತನಾಡಿ, ಬಸವೇಶ್ವರ ಬಜಾರದುದ್ದಕ್ಕೂ ಅನಾಧಿಕೃತ ಗೂಡಂಗಡಿಗಳ ನಿರ್ಮಾಣವಾಗಿ ಅವುಗಳ ಮಾಲೀಕರು ಸರ್ಕಾರಿ ಜಾಗವನ್ನು ಅಕ್ರಮಿಸಿಕೊಂಡು ನಿತ್ಯ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಸಾಕಷ್ಟು ಇವೆ. ಅಧಿಕೃತ ಅಂಗಡಿಗಳು ಮೊಬೈಲ್ ರೀತಿಯಲ್ಲಿ ನಿತ್ಯ ವ್ಯಾಪಾರ ಮಾಡಿದರೆ ಯಾರಿಗೂ ತೊಂದರೆ ಇರುವುದಿಲ್ಲವೆಂದು ತಿಳಿಸಿದರು.

        ರಸ್ತೆ ಬದಿಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಉಪ್ಪಾರ ಮಂಜುನಾಥ ಮಾತನಾಡಿ, ಅಲ್ಲಿ ಅನಾಧಿಕೃತ ಅಂಗಡಿಗಳು ಯಾವು ಇಲ್ಲ. ಎಲ್ಲರೂ ಹೊಟ್ಟೆಪಾಡಿಗಾಗಿ ದುಡಿದುಕೊಂಡು ಜೀವನ ನಿರ್ವಹಣೆಮಾಡುವವರೇ ಇದ್ದು, ಒಂದು ವೇಳೆ ಅನಾಧಿಕೃತ ಗೂಡಂಗಡಿಗಳು ಇದ್ದರೆ, ಅವುಗಳನ್ನು ನೀವು ತೆರವುಗೊಳಿಸಿ ಅದಕ್ಕೆ ನಮ್ಮ ಸಹಕಾರವಿದೆ ಎಂದರು.ಪುರಸಭೆಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ರಸ್ತೆಬದಿಯ ನೂರಾರು ವ್ಯಾಪಾರಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap