ಸಿಲಿಂಡರ್ ಸ್ಫೋಟ : ಮೂವರ ದಾರುಣ ಸಾವು ..!!

0
5

ಬೆಂಗಳೂರು

        ನಗರದಲ್ಲಿ ಮತ್ತೊಂದು ಸಿಲೆಂಡರ್ ಸೋರಿಕೆಯ ದುರ್ಘಟನೆ ಸಂಭವಿಸಿದ್ದು ಸಿಲಿಂಡರ್ ಸ್ಫೋಟದಿಂದ ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ಸಂಭವಿಸಿದೆ.

      ಎಲ್ಲರೂ ಬೇರೆ ಊರಿಂದ ಬಂದು ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ವಾಸ್ತವ್ಯ ಹೂಡಿದ್ದರು. ಮನೆಯಲ್ಲಿ ಅಡುಗೆ ಮಾಡಲು ಲೋಕಲ್ ಗ್ಯಾಸ್ ಬುಕ್ ಮಾಡಿದ ಕಾರಣ ಲೋಕಲ್ ಗ್ಯಾಸ್ ಮ್ಯಾನ್ ನಿನ್ನೆ ಮನೆಗೆ ಬಂದು ಗ್ಯಾಸ್ ಸರಬರಾಜು ಮಾಡಿ ಹೋಗಿದ್ದರು.ಗಾಯಗೊಂಡವರನ್ನು ಚಿಕಿತ್ಸೆಗೆ ರವಾನಿಸುತ್ತಿರುವುದುಆದರೆ, ಅಡುಗೆ ಮಾಡಲು ತಯಾರಿ ನಡೆಸಿದ್ದ ವೇಳೆ ಗ್ಯಾಸ್ ಆನ್ ಮಾಡುತ್ತಿದ್ದಂತೆ ಸೋರಿಕೆಯಾಗಿ ಮನೆಯಲ್ಲಿದ್ದ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು.

         ಗಾಯಗೊಂಡ ಇವರನ್ನೆಲ್ಲ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ, ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.ಈ ಹಿನ್ನೆಲೆ ಗ್ಯಾಸ್ ಮ್ಯಾನ್ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರು ಬಾಣಸವಾಡಿ ಪ್ಯೂರ್ ಫುಡ್ ಎಂಬ ಹೆಸರಿನ ಜ್ಯೂಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here