51 ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ….!!!!

ಬೆಂಗಳೂರು

        ಮಾಧ್ಯಮ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದ ಹಾಗೂ ಗಣನೀಯವಾಗಿ ಸೇವೆ ಸಲ್ಲಿಸಿದ 51 ಪತ್ರಕರ್ತರು ಮತ್ತು ಸಂಸ್ಥೆಗಳಿಗೆ 2018 ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಂದಿದೆ.

       ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಭೆಯಲ್ಲಿ ಪ್ರಶಸ್ತಿ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಜೀವಮಾನ ಸಾಧನೆ ಪ್ರಶಸ್ತಿಗೆ ಧರ್ಮಾ ವರಪು ಬಾಲಾಜಿ, ಡಾ. ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಡಾ: ಸಿ.ಎಸ್. ದ್ವಾರಕಾನಾಥ್, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ ” ಕೋಲಾರ ವಾಣಿ ” ಪತ್ರಿಕೆಗೆ, ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿ ದೇಶಾದ್ರಿ ಹೊಸ್ಮನೆ, ಸಾಮಾಜಿಕ ಸಮಸ್ಯೆ ಪ್ರತಿಬಿಂಬಿಸುವ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ ವಿಶ್ವವಾಣಿ ಪತ್ರಿಕೆಯ ಪರಮೇಶ್ವರ್ ಭಟ್, ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ ಇಂದು ಸಂಜೆ ಪತ್ರಿಕೆಯ ಜಿ.ಎನ್. ನಾಗರಾಜ್ ಅವರಿಗೆ ದೊರಕಿದೆ.

        ವಾರ್ಷಿಕ ಪ್ರಶಸ್ತಿಗೆ ಪ್ರೇಮ್ ಕುಮಾರ್ ಹರಿಯಬ್ಬೆ ಪ್ರಜಾವಾಣಿ, ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ, ಮೋಹನ ಹೆಗಡೆ ವಿಜಯವಾಣಿ, ಭಾನು ತೇಜ್ ಎಕನಾಮಿಕ್ ಟೈಮ್ಸ್, ಬಿ.ಎಸ್. ಸತೀಶ್ ಕುಮಾರ್ ಹಿಂದೂ, ಜಿ.ಎಂ. ಕುಮಾರ್ ಬಿ.ಟಿ.ವಿ, ಕೆ.ಎನ್. ಚೆನ್ನೇಗೌಡ ವಿಜಯವಾಣಿ, ಮರಿಯಪ್ಪ ಕೆ.ಜೆ. ಪ್ರಜಾವಾಣಿ, ಸಾಲೋಮನ್ ಆಂದೋಲನ, ಆಯೇಷಾ ಖಾನಂ ದೂರದರ್ಶನ, ಅಬ್ದುಲ್ ಮಲ್ಲಿಕ್ ಡೆಲಿ ಪಾಸ್ಬಾನ್, ಎಂ. ಅನಿಲ್ ಕುಮಾರ್ ನ್ಯೂಸ್ 9, ಕೆ.ಎನ್. ನಾಗೇಶ್ ಕುಮಾರ್ ಸಿನಿಮಾ ಛಾಯಾಗ್ರಾಹಕ, ಹರಿಪ್ರಸಾದ್ ಟಿ.ವಿ 9, ಈಶ್ವರ ಶಿವಣ್ಣ ಛಾಯಾಗ್ರಾಹಕ, ಬಸವರಾಜ ಭೂಸಾರೆ ಸಮಾಜಮುಖಿ, ಮೋಹನ್ ಕುಮಾರ್ ಛಾಯಾಗ್ರಾಹಕ, ದೊಡ್ಡ ಬೊಮ್ಮಯ್ಯ ಸಂಜೇವಾಣಿ, ರಾಮುಪಾಟೀಲ್ ಇಂಡಿಯನ್ ಎಕ್ಸ್ ಪ್ರೆಸ್, ರಾಜು ವಿಜಾಪುರ ಡೆಕ್ಕನ್ ಹೆರಾಲ್ಡ್, ರಾಜು ನದಾಫ್ ವಿಜಯ ಕರ್ನಾಟಕ, ಉಮೇಶ್ ಪೂಜಾರ್ ಸವಿನುಡಿ, ಎಸ್.ವಿ. ಶಿವಪ್ಪಯ್ಯನಮಠ ವಿಶ್ವವಾಣಿ, ಶಶಿಕುಮಾರ್ ಪಾಟೀಲ್ ಯುವರಂಗ, ಶಿವರಾ ಅಸುಂಡಿ ನ್ಯೂಸ್ 18, ಕೆ.ಜೆ. ಸುರೇಶ್ ಪ್ರಜಾ ಟಿ.ವಿ., ಪಿ. ಪರಮೇಶ್ ಸುದ್ದಿಮೂಲ, ಎಂ. ಪಾಷಾ ಈಶಾನ್ಯ ಟೈಮ್ಸ್, ಶರಣಪ್ಪ ಬಾಚಲಾಪುರ ನ್ಯೂಸ್ 18, ಸುಭಾಷ್ ಹುದಲೂರು ಸುದಿನ, ಲೋಚನೇಶ್ ಹೂಗಾರ್ ಸಂಜೆ ದರ್ಪಣ, ಎಚ್.ಬಿ. ವೈದ್ಯನಾಥ್ ನಾವಿಕ, ಪ್ರಕಾಶ್ ಕುಗ್ವೆ ಪ್ರಜಾವಾಣಿ, ಕಂ.ಕ. ಮೂರ್ತಿ ಸಂಯುಕ್ತ ಕರ್ನಾಟಕ, ಜಿ.ಆರ್. ಕೆಂಚೇಗೌಡ ಪ್ರಜೋದಯ, ಮೀರಾ ಅಪ್ಪಯ್ಯ ಸ್ಟಾರ್ ಆಫ್ ಮೈಸೂರು, ಕೆ.ಎನ್. ರವಿಕುಮಾರ್ ಕನ್ನಡ ಪ್ರಭ, ಎಚ್.ಬಿ. ಮಂಜುನಾಥ್ ಉದಯವಾಣಿ, ನಂದೀಶ್ ನ್ಯೂಸ್ 18, ಪ.ಶ್ರೀ ಅನಂತರಾಂ ವಿಜಯವಾಣಿ, ವಿನ್ಸ್‍ಂಟ್ ಕೆನಡಿ ವಾರ್ತಾ ಭಾರತಿ, ಕಾಗತಿ ನಾಗರಾಜಪ್ಪ ಉದಯವಾಣಿ, ಗಂಗಹನುಮಯ್ಯ ಅಮೃತವಾಣಿ, ವೆಂಕಟ ಸ್ವಾಮಿ ಸಂಜೆ ಸಮಾಚಾರ್, ಶ್ರೀಜಾ ಡಿಜಿಟಲ್ ಮೀಡಿಯಾ, ಪ್ರಕಾಶ್ ಶೆಟ್ಟಿ ವ್ಯಂಗ್ಯಚಿತ್ರಕಾರರು, ಸುಕೇಶ್ ಕುಮಾರ್ ಶೆಟ್ಟಿ ಕಸ್ತೂರಿ, ಕೆ.ಎಸ್. ಜನಾರ್ಧನಾ ಚಾರಿ ಈ ಸಂಜೆ, ಕೆ.ಎನ್. ಸುಭಾಷ್ ಚಂದ್ರ ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಮಂಜುಶ್ರೀ ಕಡಕೊಳ ಪ್ರಜಾವಾಣಿ ಅವರಿಗೆ ಪ್ರಶಸ್ತಿ ಲಭಿಸಿದೆ.

         ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶೀಘ್ರದಲ್ಲೇ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಸಿದ್ದರಾಜು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap