ಮತದಾನಕ್ಕೆ ಅಡ್ಡಿಪಡಿಸಿದರೆ 6 ತಿಂಗಳ ಸಜೆ..!!!

0
12

ಬೆಂಗಳೂರು

      ವಿದ್ಯುನ್ಮಾನ ಮತಯಂತ್ರ ಕುರಿತಂತೆ ಸುಳ್ಳು ಆಪಾದನೆ ಮಾಡುವವರು ಹಾಗೂ ಮತದಾನಕ್ಕೆ ಅಡ್ಡಿ ಮಾಡಲು 6 ತಿಂಗಳ ಸೆರೆಮನೆ ವಾಸ ಹಾಗೂ ಸಾವಿರ ರೂ.ದಂಡದ ಶಿಕ್ಷೆಗೊಳಗಾಗಬೇಕಾಗುತ್ತದೆ.

       ಮತದಾರರು ಹಾಕಿದ ಮತ ಅವರು ಇಷ್ಟಪಟ್ಟ ಅಭ್ಯರ್ಥಿ ಹೊರತುಪಡಿಸಿ ಬೇರೆ ಅಭ್ಯರ್ಥಿಗೆ ಹೋಗಿರುವುದು ವಿವಿ ಪ್ಯಾಟ್‍ನಲ್ಲಿ ಕಾಣಿಸಿಕೊಂಡರೆ ಪ್ರಿಸೈಡಿಂಗ್ ಅಧಿಕಾರಿಗೆ ದೂರು ನೀಡಿ ಅವರು ನೀಡುವ ಫಾರಂಗೆ ಸಹಿ ಮಾಡಿ ಮುಖ್ಯ ಅಧಿಕಾರಿ, ಬೂತ್ ಏಜೆಂಟ್‍ಗಳು ಹಾಗೂ ಪೊಲೀಸರ ಮುಂದೆಯೇ ತಾನು ಇಷ್ಟಪಡುವ ಅಭ್ಯರ್ಥಿಗೆ ಮತ ಚಲಾಯಿಸಬೇಕಾಗುತ್ತದೆ.ಹೀಗೆ ಮಾಡುವ ಮೊದಲು ದೂರುದಾರ ತಾನು ಯಾವ ಅಭ್ಯರ್ಥಿಗೆ ಮತ ಚಲಾಯಿಸುತ್ತಿದ್ದೇನೆಂಬುದನ್ನು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕಾಗುತ್ತದೆ.

        ಮತಯಂತ್ರ ಸರಿಯಿಲ್ಲ ಎಂದು ಮತಗಟ್ಟೆಯ ಮುಖ್ಯ ಅಧಿಕಾರಿಗೆ ದೂರು ನೀಡಿದರೆ ಮತದಾರರು ಫಾರಂ 49ಕ್ಕೆ ಸಹಿ ಮಾಡಿ ಮತ್ತೊಂದು ಮತದಾನಕ್ಕೆ ಅವಕಾಶ ಪಡೆದುಕೊಳ್ಳಬಹುದಾಗಿದೆ.2ನೇ ಬಾರಿ ಮತದಾನಕ್ಕೆ ಅವಕಾಶ ಪಡೆದುಕೊಳ್ಳುವವರು ಮತವನ್ನು ಬಹಿರಂಗವಾಗಿ ಚಲಾಯಿಸಬೇಕಾಗುತ್ತದೆ. ಒಂದು ವೇಳೆ ದೂರುದಾರರು ಮತ ಚಲಾಯಿಸದಿದ್ದರೆ ಅವರನ್ನು ಪೊಲೀಸರು ಬಂಧಿಸಲಿದ್ದಾರೆ.ಮತದಾರರು ಚಲಾಯಿಸಿದ ಮತ ಬೇರೆ ಅಭ್ಯರ್ಥಿಗೆ ಹೋಗಿದ್ದೇಯಾದರೆ ಕೂಡಲೇ ಮತದಾನ ಸ್ಥಗಿತಗೊಳಿಸಿ ಮತಯಂತ್ರ ದುರಸ್ಥಿ ನಂತರ ಮತ್ತೆ ಮತದಾನಕ್ಕೆ ಅವಕಾಶ ದೊರೆಯಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here