63 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಾಕ್ರಮ

0
12

ಪಾವಗಡ;-

      ಪಾವಗಡ ತಾಲ್ಲೂಕು ಆಂಧ್ರದ ಗಡಿಭಾಗದಲ್ಲಿ ಇದ್ದು,ಹೆಚ್ಚಿನದಾಗಿ ತೆಲುಗು ಬಾಷೆ ಮಾತನಾಡುವ ಜನರಿದ್ದಾರೆ.ಗಡಿ ಭಾಗದ ಹಳ್ಳಿಗಳಲ್ಲಿ ಕನ್ನಡ ಕಲಿಸಲು ಕನ್ನಡ ಪರ ಸಂಘಟನೆಗಳು ಶ್ರಮ ವಹಿಸಬೇಕಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್‍ರವರು ತಿಳಿಸಿದರು.

     ಪಟ್ಟಣದ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ 63 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತಿಗಳು ಕನ್ನಡಕ್ಕಾಗಿ ಏನೇಲ್ಲ ಪ್ರಯತ್ನ ಮಾಡಿದ್ದಾರು ಕನ್ನಡ ಕುಸಿಯುತ್ತಿದೆ,ಪರ ಬಾಷೆಯನ್ನು ಬಿಟ್ಟು,ಮಾತೃಬಾಷೆಯನ್ನು ನಾವು ಉಳಿಸ ಬೇಕಾಗಿದೆ.ನಾವು ಕನ್ನಡಿಗರು ಎಂದು ಗಮನದಲ್ಲಿ ಇಟ್ಟುಕೊಂಡು ಕನ್ನಡ ಬಾಷೆ ಉಳಿವಿಗಾಗಿ ಪ್ರತಿಯೋಬ್ಬರು ಶ್ರಮವಹಿಸಬೇಕಾಗಿದೆ ಎಂದರು.

        ಪಾವಗಡ ತಾಲ್ಲೂಕು ಬರ ಪೀಡಿತ ಪ್ರದೇಶ,ಮಳೆ ಬೆಳೆಯಿಲ್ಲ,ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದ್ದು,ಸರ್ಕಾರ ಪಾವಗಡ ಕುಡಿಯುವ ನೀರಿಗಾಗಿ ಇಗಾಗಲೇ ಯೋಜನೆಯನ್ನು ರೂಪಿಸಿದ್ದು,ಇನ್ನೊಂದು ವರ್ಷದೋಳಗೆ ಕುಡಿವ ನೀರು ಹರಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಡಿ.ಎನ್.ವರದರಾಜು ದ್ವಜಾರೋಹಣ ನೇರವೇರಿಸಿ ಮಾತನಾಡಿ ಕನ್ನಡ ಬಾಷೆ ಉಳಿವಿಗಾಗಿ ಹಲುವಾರು ಮಾಹನ್ ಕವಿಗಳು,ಸಾಹಿತಿಗಳು,ಭಕ್ತರು ಕನ್ನಡದ ಬಗ್ಗೆ ಅಭಿಮಾನವನ್ನು ಮೂಡಿಸಿದ್ದಾರೆ, ಕನ್ನಡ ಪರ ಹೋರಾಟಗಳನ್ನು ಮಾಡಿ ಕನ್ನಡ ಬಾಷೆಯನ್ನು ಉಳಿಸಿ ಬೆಳೆಸಲು ಶ್ರಮ ವಹಿಸಿದ್ದಾರೆ.

        ಪುರಸಭೆ ಅಧ್ಯಕ್ಷೀಣಿ ಸುಮಾಅನಿಲ್ ರವರು ಮಾತನಾಡಿ ಕನ್ನಡ ಬಾಷೆಗೆ ಎರಡು ಸಾವಿರ ವರ್ಷಗಳವುಳ್ಳ ಇತಿಹಾಸವಿದೆ,ಪರಬಾಷೆ ವ್ಯಾಮೋಹವನ್ನು ಬಿಟ್ಟು ಮಾತೃ ಬಾಷೆಯನ್ನು ಪ್ರೀತಿಸೋಣ,ನಾಡು ಸುಂದರವಾಗಿದ್ದು,ಕನ್ನಡ ಬಾಷೆಯನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

       ಕನ್ನಡ ಉಳಿವಿಗಾಗಿ ಸರ್ಕಾರ ಶಾಲೆಗಳನ್ನು ಉನ್ನತ ಸ್ಥಾನಕ್ಕೆ ಹೋಗ ಬೇಕಾಗಿದೆ.ಸರ್ಕಾರ ಶಾಲೆಗಳಿಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಕನ್ನಡ ಬಾಷೆಗೆ ಹೆಚ್ಚು ಒತ್ತು ನೀಡಬೇಕಾಗಿದ್ದು,ಕನ್ನಡ ಬಾಷೆಗೆ ಉದ್ಯೋಗ ಸಿಗಲ್ಲ ಎಂಬ ಕಾರಣಕ್ಕೆ ನಾವು ಪರ ಬಾಷೆಯಾದ ಇಂಗ್ಲೀಷ್ ಬಾಷೆಯನ್ನು ಕಲಿಯಲು ಕನ್ನಡ ಜನತೆ ಮುಂದಾಗುತ್ತಿದ್ದಾರೆ ಎಂದರು.

      ನಿವೃತ್ತ ಸಹಾಯಕ ನಿರ್ದೇಶಕರಾದ ಜಿ.ಕೆ.ಕಂಚಿವರದಯ್ಯ,ಆರ್.ಟಿ.ಖಾನ್, ದೈಹಿಕ ಶಿಕ್ಷಕರಾದ ಬಸವರಾಜು,ರಾಮಾಂಜಿನರೆಡ್ಡಿ ರವರು ಮಾತನಾಡಿದರು.

       ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಇಮ್ರಾನ್,ಮಾಜಿ ಅಧ್ಯಕ್ಷ ನಾಗರಾಜು,ತಾ.ಪಂ.ಸದಸ್ಯರಾದ ಗೋವಿಂದಪ್ಪ,ಮೈಲಾರರೆಡ್ಡಿ ಪುರಸಭೆ ಉಪಾಧ್ಯಕ್ಷಣಿ ನಾಗರತ್ನಮ್ಮ,ಅಮೀರ್,ಬಿ.ಇ.ಒ ಕುಮಾರಸ್ವಾಮಿ,ಎಇಇ ಈಶ್ವರಯ್ಯ,ಪುರಸಭೆ ಮುಖ್ಯಾಧಿಕಾರಿ ನವೀನ್‍ಚಂದ್ರ,ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ,ನರಸಿಂಹರೆಡ್ಡಿ, ದೈಹಿಕ ಶಿಕ್ಷಕರಾ ತಾಡಪ್ಪ, ರಾಮಾಂಜಿನಪ್ಪ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here