ಲೋಕಸಭಾ ಚುನಾವಣೆ ಬಳ್ಳಾರಿ ಕ್ಷೇತ್ರದಲ್ಲಿ 63 ಸಾವಿರ ಯುವ ಮತದಾರರು : ಡಿಸಿ

0
9

ಬಳ್ಳಾರಿ

        ಈ ತಿಂಗಳ 23ರಂದು ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಮೊದಲ ಬಾರಿಗೆಮತದಾನ ಮಾಡಲು 53 ಸಾವಿರ ಯುವ ಜನತೆ ಮತದಾನದ ಹಕ್ಕು ಪಡೆದಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

       ಅವರಿಂದು ತಮ್ಮ ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿ, ಕ್ಷೇತ್ರದಲ್ಲಿ 232 ಇತರೆ, 880488 ಮಹಿಳಾ ಮತದಾರರು ಸೇರಿ ಒಟ್ಟಾರೆ 17 ಲಕ್ಷದ ಮಹಿಳಾ ಮತದಾರರು ಸೇರಿ ಒಟ್ಟಾರೆ 17 ಲಕ್ಷದತ 51 ಸಾವಿರದ 911 ಮತದಾರರಿದ್ದಾರೆ.ಸಂಡೂರು, ಕೂಡ್ಲಿಗಿ, ಹಡಗಲಿ ಕ್ಷೇತ್ರಗಳನ್ನು ಬಿಟ್ಟು ಉಳಿದಂತೆ ಬಳ್ಳಾರಿ, ಬಳ್ಳಾರಿ ಗ್ರಾಮೀಣ, ಕಂಪ್ಲಿ, ವಿಜಯನಗರ, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆಂದು ತಿಳಿಸಿದರು.

        ಕ್ಷೇತ್ರದಲ್ಲಿ ಮತದಾನಕ್ಕಾಗಿ 1925 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಅವುಗಳಲ್ಲಿ ಬೆಳಕಿನ ವ್ಯವಸ್ಥೆ, ಕ್ಯಾನ್ ಕುಡಿಯುವ ನೀರು ಮತ್ತು ಮತಗಟ್ಟೆಮುಂದೆ ನೆರಳಿನ ವ್ಯವಸ್ಥೆ ಮಾಡಲಾಗಿದೆ.

        ಮತದಾನ ಕಾರ್ಯಕ್ಕೆ 2687 ಪಿ.ಆರ್.ಓ, 2667 ಎಪಿಆರ್‍ಓ, 5553 ಮತಗಟ್ಟೆ ಅಧಿಕಾರಿಗಳು, 435 ಮೈಕ್ರೋ ಅಬ್ಸರ್ ವರ್ ನೇಮಕ ಮಾಡಿದೆ. 19 ಸಖೀ ಮತಗಟ್ಟೆಗಳನ್ನು ಸ್ಥಾಪಿಸಿದೆ. ಇವರಿಗಿಲ್ಲ 3 ಹಂತದಲ್ಲಿ ತರಬೇತಿ ನೀಡಿದ್ದು 6ಪುಟಗಳ ಕನ್ನಡ ಭಾಷೆಯ ಕೈಪಿಡಿಯನ್ನು ನೀಡಿದೆಂದರು.ವಾಹನಮತದಾನ ಕಾರ್ಯಕ್ಕೆ 425 ಸಾರಿಗೆ ಸಂಸ್ಥೆ ಬಸ್ 109 ಮಿನಿ ಬಸ್, ಸೇರಿದಂತೆ ಒಟ್ಟಾರೆ 617 ವಾಹನಗಳ ಬಳಕೆ ಮಾಡಲಾಗುತ್ತಿದ್ದು ಇವುಗಳಿಗೆಲ್ಲಾ ಜಿಪಿಎಸ್ ಅಳವಡಿಸಿದೆ.

        ಸಿ. ವಿಜಲ್ ಯ್ಯಾಪ್ ಗೆ ಈ ವರೆಗೆ 90 ದೂರುಗಳು ಬಂದಿದ್ದು ಅವನ್ನು ಬಗೆಹರಿಸಲಾಗಿದ್ದು ಅದರಲ್ಲಿ ಎರಡು ಪ್ರಕರಣ ದಾಖಲಾಗಿದೆ. 1950 ನಂಬರ್ ಗೆ 1903, 290 ಸಾಮಾನ್ಯ ದೂರುಗಳು ಬಂದಿದ್ದು ಅವನೆಲ್ಲಾ ಬಗೆಹರಿಸಿದೆ.

‍        ಚುನಾವಣೆ ಕರ್ತವ್ಯ ನಿರತ 10907 ಮತಗಟ್ಟೆ ಸಿಬ್ಬಂದಿ 2180 ಪೊಲೀಸ್, 58 ಸಾರಿಗೆ 2261 ಇತರೆ ಸೇರಿದಂತೆ 15406 ಜನರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಿದೆ. ಅಲ್ಲದೆ ಇ.ಡಿ.ಸಿ ನ ಮನೆಯಲ್ಲಿ 6096 ಜನರಿಗೆ ಅಂಚೆ ಮತಕ್ಕೆ ಅವಕಾಶ ಕಲ್ಪಿಸಿದೆ.

        ಮತದಾನ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ 11 ತಾಸುಗಳ ಕಾಲ ನಡೆಯಲಿದೆ. ಅದಕ್ಕೂ ಮುನ್ನ ಮತಗಟ್ಟೆಯಲ್ಲಿ ಮಾಕ್ ಪೋಲೀಂಗ್ ನಡೆಸಿ ಮತಯಂತ್ರಗಳ ಪರಿಶೀಲನೆ ಮತಗಟ್ಟೆ ಎಜೆಂಟರ ಸಮ್ಮುಖದಲ್ಲಿ ನಡೆಯಲಿದೆ. 3 ಜನ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟಾರೆ 11 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

        ಜಿಲ್ಲೆಯಲ್ಲಿ 63 ಪ್ಲೆಯಿಂಗ್ ಸ್ಕ್ವಾರ್ಡ್ ಗಳು ಕಾರ್ಯನಿರ್ವಹಿಸುತ್ತಿವೆ. ಈ ವರೆಗೆ 15.75 ಲಕ್ಷ ರೂಪಾಯಿ ನಗದು, 1 ಕೋಟಿ 95 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.ಮತದಾರರಿಗೆ ತಮ್ಮ ಮತ ಯಾವ ಮತಗಟ್ಟೆಯಲ್ಲಿದೆಎಂಬ ಬಗ್ಗೆ ಮತಚೀಟಿಯನ್ನು ಮನೆ ಮನೆಗೆ ತೆರಳಿ ನೀಡುತ್ತಿದೆ. ದೊರೆಯದಿದ್ದವರಿಗೆ ಮತಗಟ್ಟೆ ಮುಂದೆ ಮತದಾನದ ದಿನ ಬಿ.ಎಲ್.ಓಗಳು ನೀಡಲಿದ್ದಾರೆ. ಇದರ ಜೊತೆಮತದಾರರು ತಮ್ಮ ಗುರುತಿನ ಚೀಟಿಯನ್ನು ತೋರಿಸಿದರೆ ಮಾತ್ರ ಮತದಾನಕ್ಕೆ ಅವಕಾಶ ನೀಡಲಿದೆಂದರು.

        ಹಲವು ಹಳ್ಳಿಗಳಲ್ಲಿ ತಮ್ಮ ಸಮಸ್ಯೆಗಳ ಇತ್ಯರ್ಥಕ್ಕಾಗಿ ಮತದಾನ ಬಹಿಷ್ಕಾರದ ಬಗ್ಗೆ ಹೇಳಿತ್ತು. ಅದನ್ನು ಅಧಿಕಾರಿಗಳು ಬಗೆಹರಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇರುವ ಹರಗಿನಡೋಣಿ ಗ್ರಾಮಕ್ಕೆ ಸದ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಶಾಶ್ವತ ಪರಿಹಾರಕ್ಕಾಗಿ 32 ಕೋಟಿ ರೂಗಳ ಯೋಜನೆ ರೂಪಿಸಿದೆಂದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತೀಶ್ ಕೆ ಮೊದಲಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here