ವರ್ಗಾವಣೆಗೊಂಡ ಎಇಇ ಅರ್ಥಪೂರ್ಣ ವಿದಾಯ

0
10

ಹೊನ್ನಾಳಿ:

      ಪ್ರಸ್ತುತ ದಿನಗಳಲ್ಲಿ ಅಪರಿಮಿತವಾಗಿ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ವಿದ್ಯುತ್ ವಿತರಣೆ ಅಧಿಕಾರಿಗಳಿಗೆ ಒಂದು ಸವಾಲಿನ ಕೆಲಸವಾಗಿದೆ ಎಂದು ಹೊನ್ನಾಳಿ ಬೆಸ್ಕಾಂ ಇಲಾಖೆಯಲ್ಲಿ ಎಇಇ ಆಗಿ ಸೇವೆ ಸಲ್ಲಿಸಿ ಇದೀಗ ದಾವಣಗೆರೆ ಕಚೇರಿಗೆ ವರ್ಗಾವಣೆಗೊಂಡಿರುವ ಜಯಪ್ಪ ಹೇಳಿದರು.

      ಇಲ್ಲಿನ ಕೆಪಿಟಿಸಿಎಲ್ ಆವರಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಬೆಸ್ಕಾಂ ಗುತ್ತಿಗೆದಾರರು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

      ಬೇಸಿಗೆ ಸಂದರ್ಭಗಳಲ್ಲಿ ಕೂಡ ರೈತರ ಅಗತ್ಯಗಳಿಗೆ ತಕ್ಕಂತೆ ವಿದ್ಯುತ್ ಸರಬರಾಜು ಮಾಡುವ ವಿಚಾರದಲ್ಲಿ ತಾವು ತಮ್ಮ ಶಕ್ತಿ ಮೀರಿ ಇಲಾಖೆಯ ಸಹೋದ್ಯೋಗಿಗಳ ಸಹಕಾರ ಪಡೆದು ಆದಷ್ಟು ತಾಲೂಕಿನಲ್ಲಿ ಉತ್ತಮ ಸೇವೆ ಸಲ್ಲಿಸುವ ಪ್ರಯತ್ನ ನಡೆಸಿದ್ದಾಗಿ ತಿಳಿಸಿದರು.

        ಇದೀಗ ತಾವು ಇಲ್ಲಿಂದ ವರ್ಗಾವಣೆಗೊಂಡು ದಾವಣಗೆರೆಗೆ ತೆರಳುತ್ತಿದ್ದು, ತಮ್ಮ ಜಾಗಕ್ಕೆ ದಾವಣಗೆರೆಯಿಂದ ಆಗಮಿಸಿರುವ ರವಿಕಿರಣ್ ಅವರಿಗೂ ಇಲಾಖೆಯ ಸಿಬ್ಬಂದಿ, ಗುತ್ತಿಗೆದಾರರು, ರೈತರು, ಸಾರ್ವಜನಿಕರು ಉತ್ತಮ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.

         ಹರಿಹರ ಬೆಸ್ಕಾಂ ಉಪ ವಿಭಾಗದ ಅಧಿಕಾರಿ ಸುಭಾಷ್ ಹಾಗೂ ಇತರ ಅಧಿಕಾರಿಗಳು ನಿರ್ಗಮಿತ ಎಇಇ ಜಯಪ್ಪ ಅವರನ್ನು ಅಭಿನಂದಿಸಿದರು.ಹೊನ್ನಾಳಿ ಬೆಸ್ಕಾಂ ನೂತನ ಎಇಇ ರವಿಕಿರಣ್ ಅವರನ್ನು ಸನ್ಮಾನಿಸಿ, ಸ್ವಾಗತಿಸಲಾಯಿತು.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಜಿ. ಹನುಮಂತಪ್ಪ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೆರೇಹಳ್ಳಿ ನಾಗರಾಜಪ್ಪ, ಇತರ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಎಂ.ಎಸ್. ಜಗದೀಶ್ ಮತ್ತು ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಬೆಸ್ಕಾಂ ಗುತ್ತಿಗೆದಾರರು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ನಿರ್ಗಮಿತ ಎಇಇ ಜಯಪ್ಪ ಅವರಿಗೆ ಸ್ಮರಣಿಕೆ ನೀಡಿ, ಸನ್ಮಾನಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here