ಆದಿಜಾಂಬವ ಮಾದಿಗ ಸಮಾಜದ ಸಭೆ

ಜಗಳೂರು :

          ಸಮಾಜದ ಅಭಿವೃದ್ದಿ ಹಾಗೂ ಸಂಘಟನೆ ದೃಷ್ಠಿಯಿಂದ ಆದಿಜಾಂಬವ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ಪುನಾರಚನೆ ಅಗತ್ಯವಿದ್ದು, ನ.15ರಂದು ಅಂಬೇಡ್ಕರ್ ಭವನದಲ್ಲಿ ಸಮಾಜದ ಸಭೆ ಕರೆಯಲಾಗಿದೆ ಎಂದು ಆದಿಜಾಂಬವ ಮಾದಿಗ ಸಮಾಜ ಸೇವಾ ಸಂಘ ಅಧ್ಯಕ್ಷ ಜಿ.ಎಚ್ ಶಂಭುಲಿಂಗಪ್ಪ ತಿಳಿಸಿದರು.

        ಈ ಹಿಂದೆ ಸಮಾಜದ ಹಿರಿಯ ಮುಖಂಡರಾದ ಅಣಬೂರು ಯಲ್ಲಪ್ಪ, ತಾಯಿಟೋಣಿ ರಾಮಣ್ಣ, ಜಗಳೂರು ಕೋರಪ್ಪ ಚೌಡಪ್ಪ ಸೇರಿದಂತೆ ಹಿರಿಯ ಮುಖಂಡರೊಂದಿಗೆ ಸೇರಿ ಸಮಾಜ ಕಟ್ಟಲಾಗಿತ್ತು. ಇದೀಗ ಅವರೆಲ್ಲರು ಮೃತರಾಗಿದ್ದು, ಅವರ ಸ್ಥಾನಗಳಿಗೆ ಸಮಾಜದ ಪದಾಧಿಕಾರಿಗಳನ್ನು ಸಂಘಕ್ಕೆ ತುಂಬುವ ಕೆಲಸವಾಗಬೇಕಿದೆ ತಾಲೂಕಿನ 70ರಿಂದ 90 ಹಳ್ಳಿಗಳಲ್ಲಿ ಸಮಾಜದ ಕುಲಬಾಂಧವರಿದ್ದು ಅವರೆಲ್ಲರನ್ನು ಸಮಾಜದ ಕಟ್ಟು ಕೆಲಸಕ್ಕೆ ತೊಡಗಿಕೊಳ್ಳಬೇಕು,

        ಸದಾಶಿವ ಆಯೋಗ ಜಾರಿಗೆ ಒತ್ತಾಯಿಸಲು ಬೃಹತ್ ಸಮಾವೇಶ ನಡೆಸಲು ಚಿಂತಿಸಲಾಗಿದೆ. ಇದೆ ಉದ್ದೇಶಕ್ಕಾಗಿ ಹಿಂದೆ ಎರಡು ಬಾರಿ ಸಭೆ ಸೇರಿದ್ದರು ನಿರೀಕ್ಷಿತ ಮಟ್ಟದಲ್ಲಿ ಸಮಾಜದ ಬಾಂಧವರು ಆಗಮಿಸದ ನಿಮಿತ್ತ ಅಂತಿಮವಾಗಿ ಗುರುವಾರ ಸಭೆ ಕರೆಯಲಾಗಿದೆ. ಇದು ಕೊನೆ ಸಭೆಯಾಗಿದೆ. ಸಮಾಜದಿಂದ ಅಧ್ಯಕ್ಷರಾದ ನಾನು ತೆಗೆದುಕೊಳ್ಳುವ ತೀರ್ಮಾನಗಳೇ ಅಂತಿಮವಾಗಿರುತ್ತದೆ. ಆದ್ದರಿಂದ ತಪ್ಪದೇ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಆಗಮಿಸಬೇಕು ಎಂದು ತಿಳಿಸಿದರು.

         ಮಾದಿಗ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಚಂದ್ರಪ್ಪ, 2ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾ. ಬಿ.ಆರ್ ಅಂಬೇಡ್ಕರ್, ಡಾ. ಬಾಬು ಜಗಜೀವನರಾಮ್ ಸಮುದಾಯ ಭವನಗಳು ನಿರ್ವಹಣೆ ಇಲ್ಲದೇ ದುರಸ್ಥಿಯಾಗಿವೆ. ಈ ಭವನಗಳ ನಿರ್ವಹಣಾ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆಗಳು ಅಥವಾ ಸಮಾಜಕ್ಕಾಗಿ ನೀಡಿಲ್ಲವಾದ್ದರಿಂದ ಇವುಗಳ ಜವಾಬ್ದಾರಿ ತೆಗೆದುಕೊಳ್ಳಲು ತೀರ್ಮಾನಿಸಬೇಕಾಗಿದೆ.

         ಒಳ ಭಾಗದಲ್ಲಿ ಪೀಠೋಪಕರಣಗಳಾಗಿ, ಹೊರ ಭಾಗದಲ್ಲಿ ಮೈದಾನ ಅಭಿವೃದ್ದಿ ಕಟ್ಟಡ ದುರಸ್ಥಿ, ಸಿಸಿ ರಸ್ತೆ ಅಭಿವೃದ್ದಿಗೆ 1ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ದುರಸ್ಥಿ ಕಾರ್ಯವನ್ನು ನಡೆಸಬೇಕು ಸಮಾಜದ ಸುಪರ್ದಿಗೆ ಪಡೆಯಲಾಗುವುದು ಆದ್ದರಿಂದ ಹೆಚ್ಚಿನ ವಿಷಯಗಳನ್ನು ಚರ್ಚಿಸಲು ಈ ಸಭೆಗೆ ಯುವಕರು ಆಗಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಗುತ್ತಿದುರ್ಗ ಶಿವಣ್ಣ, ಪೂಜಾರಿ ಸಿದ್ದಪ್ಪ, ಎ.ಎಕ ಶಿವಮೂರ್ತಿ, ಬಿಳಿಚೋಡು ಹಾಲೇಶ್, ಅಸಗೋಡು ಹನುಮಂತಪ್ಪ, ಬಸವರಾಜ್ ಸೇರಿದಂತೆ ಮತ್ತಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap