ಕಲಬೆರಕೆ ಆಹಾರ ಸೇವನೆ ಹಾನಿಕರ

ಹರಪನಹಳ್ಳಿ:

        ಜನಸಂಖ್ಯೆ ಹೆಚ್ಚಳ ಜಲಮಾಲಿನ್ಯ. ವಾಯುಮಾಲಿನ್ಯ ಹಾಗು ಕಲಬೆರಕೆ ಅಹಾರ ಸೇವನೆಯಿಂದ ನಾನಾ ರೋಗಗಳಿಗೆ ಮನುಷ್ಯ  ತುತ್ತಾಗುತ್ತಿದ್ದಾನೆ ಎಂದು ನ್ಯಾಯವಾದಿ ಟಿ.ಎಚ್.ಎಂ.ವಿರೂಪಾಕ್ಷಯ್ಯ ಹೇಳಿದರು.

       ಪಟ್ಟಣದ ಪುರಸಭೆ ಸಮುದಾಯ ಭವನದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ವತ್ರೆ ಅಲ್-ತೌಹೀದ್ ಎಜುಕೇಶನಲ್& ವೆಲ್ಫೇರ್ ಟ್ರಸ್ಟ್ ಹಾಗೂ ಫೀಸ್ ವೆಲ್ಫೇರ್ ಟಸ್ಟ್ ಹರಿಹರ ಇವರುಗಳ ಸಹಭಾಗಿತ್ವದಲ್ಲಿ ಆರೋಗ್ಯ ಕಾರ್ಡ್ ನೋಂದಾವಣಾ ಶಿಬಿರದಲ್ಲಿ ಆರೋಗ್ಯ ಕಾರ್ಡ್ ವಿತರಣೆ ಮಾಡಿ ಮಾತನಾಡಿದ ಅವರು ಉತ್ತಮ ಆರೋಗ್ಯವಂತನಂತೆ ಕಾಣುವ ಮನುಷ್ಯನಿಗೆ ಹೃದಯಾಘಾತದಂತ ಖಾಯಿಲೆಗಳು ಬರವುದು ಸಹಜವಾಗಿದ್ದು, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಿಸಬೇಕು. ಅತ್ಯಂತ ರಿಯಾಯಿತಿ ಹಾಗೂ ಉಚಿತ ದರದಲ್ಲಿ ಚಿಕಿತ್ಸೆ ಪಡೆಯಲು ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ವತ್ರೆಯ ಯೆನ್ ಆರೋಗ್ಯ ಕಾರ್ಡ ಪಡೆಯುವ ಮೂಲಕ ಜನಸಾಮಾನ್ಯರು ಇದರ ಸೌಲಭ್ಯಗಳನ್ನು ಪಡೆಯಬೇಕೆಂದು ಕಿವಿ ಮಾತು ಹೇಳಿದರು.

       ಪುರಸಭೆ ಮಾಜಿ ಅದ್ಯಕ್ಷ ಡಿ.ರಹಮಾನ್ ಸಾಹೇಬ್ ಮಾತನಾಡಿ ಕಳೆದ 25 ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ನರೆಹೊರೆಯ ಜಿಲ್ಲೆಗಳ ರೋಗಿಗಳಿಗೆ ಆರೋಗ್ಯ ಸೇವೆ ಜೋತೆಗೆ ವೈದ್ಯಕಿಯ ಕ್ಷೇತ್ರದಲ್ಲಿ ಅಗತ್ಯವಿರುವ ಬಹುತೇಕ ಎಲ್ಲಾ ಸಾಮನ್ಯ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ವಿಭಾಗಗಳಲ್ಲಿ ಪರಿಣತ ಹೊಂದಿದ್ದು ರೋಗಿಗಳಿಗೆ ಒಂದೇ ಸೂರಿನಡಿ ಆರೋಗ್ಯ ಸೇವೆಯನ್ನು ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ವತ್ರೆ ಒದಗಿಸಿದೆ ಎಂದರು

       ನ್ಯಾಯವಾದಿ ಟಿ.ವೆಂಕಟೇಶ ಮಾತನಾಡಿ ರಾಜ್ಯದ ಪ್ರತಿಷ್ಟಿತ ಆಸ್ವತ್ರೆಗಳಲ್ಲಿ ಒಂದಾದ ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ವತ್ರೆ ಜನಸಾಮನ್ಯರಿಗೆ ಕೈಗೆಟಕುವ ದರದಲ್ಲಿ ಉತ್ತಮ ಸೇವೆಯ ಗುರಿಯನ್ನು ಹೋಂದಿರುವ ಆಸ್ವತ್ರೆಯಲ್ಲಿ ವಿವಿಧ ರೋಗಗಳಿಗೆ ಚಿಕತ್ಸೆಯನ್ನು ನೀಡಲಾಗುತ್ತಿದ್ದು ಅಗತ್ಯ ದಾಖಲೆಗಳಾದ ರೇಶನ್ ಕಾರ್ಡ ಜೆರಾಕ್ಸ್, ಕುಟುಂಬದ ಒಬ್ಬ ಸದಸ್ಯರ ಪಾಸ್ ಪೋರ್ಟ್ ಸೈಜ್ ಪೋಟೋ ನೀಡಿ ಆರೋಗ್ಯ ಕಾರ್ಡ್ ಪಡೆದು ಕೊಳ್ಳಿ ಎಂದರು.

       ಅಲ್-ತೌಹೀದ್ ಎಜುಕೇಶನಲ್ & ವೆಲ್ಫೇರ್ ಟ್ರಸ್ಟ್‍ನ ಅದ್ಯಕ್ಷ ಡಿ.ರಹಮತುಲ್ಲಾ, ಯೆನೆಪೋಯ ಆಸ್ವತ್ರೆಯ ಮಹಮದ್ ಆಲಿ, ಆಮೀರ್ ಭಾಷ, ಮುಕ್ತಿಯಾರ್, ಡಿ.ಸಲಾಂ, ಸುರೇಶ, ಅಬ್ದುಲ್ ಶುಕ್ರು ಸಾಹೇಬ್, ಹೈದಾರ್, ಯೂಸುಪ್, ವಾಹೀದ್, ಒಓ.ಅಯಾತ್, ಭಾಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು,

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap