‘ವಿದ್ಯಾವಂತರು ಕೃಷಿ ಕ್ಷೇತ್ರಕ್ಕೆ ಬಂದಾಗ ಮಾತ್ರ ಕೃಷಿ ಅಭಿವೃದ್ದಿ ಹೊಂದ ಬಲ್ಲದು’

0
16

ಕೊಟ್ಟೂರು 

          ವಿದ್ಯಾವಂತರು ನೌಕರಿಯನ್ನೇ ಬಯಸದೆ ಕೃಷಿ ಕ್ಷೇತ್ರಕ್ಕೆ ಬಂದಾಗ ಮಾತ್ರ ಕೃಷಿ ಸರ್ವತೋಮುಖ ಅಭಿವೃದ್ದಿಯಾಗಲು ಸಾಧ್ಯ ಎಂದು ಪ್ರಗತಿಪರ ಕೃಷಿಕ ಹುಲಿಕೇರೆ ಸಜ್ಜನ್ ಹೇಳಿದರು.

          ಪಟ್ಟಣ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಹಾಗೂ ಕೃಷಿ ಇಲಾಖೆ ಎಂಜಿಎನ್‍ಆರ್‍ಇಜಿಎ ಯೋಜನೆ ಅಡಿ ಎರೆಹುಳ ತೊಟ್ಟಿ ನಿರ್ಮಾಣ ತಯಾರಿಸುವ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

          ನಮ್ಮ ತಾಲೂಕು ನೂರು ವರ್ಷದಲ್ಲಿ 70 ವರ್ಷ ಬರಗಾಲ, 30 ವರ್ಷದಲ್ಲಿ ಮಾತ್ರ ಅಲ್ಪ ಮಳೆ ಬಂದಿದೆ. ಇಂತಹ ಕಠಿಣ ಸ್ಥಿತಿಯಲ್ಲೂ ರೈತರು ಎದೆಗುಂದದೆ ಕಾಡಿನ ಬೆಳೆ ಬೆಳೆಯುವ ಕಡೆ ಗಮನಹರಿಸಿದರೆ ಬರಗಾಲವನ್ನು ಸಮರ್ಥವಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು.

          ರಾಸಾಯನಿಕ ಗೊಬ್ಬರವನ್ನು ಸತತವಾಗಿ ಬಳಕೆ ಮಾಡಿದ್ದರಿಂದ ಭೂಮಿಯ ಸತ್ವ ಕಡಿಮೆಯಾಗಿದೆ. ಪುನ: ಭೂಮಿಯ ಫಲವತ್ತಾಗಿ ಬೆಳೆಯಬೇಕೆಂದರೆ ಸಾವಯವ ಗೊಬ್ಬರವನ್ನು ಬಳಸಬೇಕು ಎಂದರು.

         ಕ್ಯೂಬ ದೇಶದ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೂ ತನ್ನ ದೇಶದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸುವುದನ್ನು ನಿಲ್ಲಿಸಿ, ಸಾವಾಯವ ಗೊಬ್ಬರವನ್ನು ಕೃಷಿಗೆ ಬಳಸಿ ಇಡೀ ವಿಶ್ವವೇ ಆ ದೇಶದತ್ತ ತಿರುಗಿ ನೋಡುವಂತೆ ಮಾಡಿದ, ಆದರೆ ನಮ್ಮ ದೇಶವೇಕೆ ಈ ವಿಷಯದಲ್ಲಿ ಹಿಂದುಳಿದೆ ಎಂದು ಪ್ರಶ್ನಿಸಿದರು.

           ನಮಗೆ ಉಸಿರು ಬೇಕಾದರೆ ಹಸಿರು ಬೇಕು. ಹಸಿರೇ ನಾಶವಾದರೆ ರೈತರ ಬದುಕೇ ನಾಶ ಎಂಬ ಎಚ್ಚರಿಕೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.ಸುರಭಿ ಸಂಸ್ಥೆ ಸಂಪನ್ಮೂಲ ವ್ಯಕ್ತಿ ವಾಸುದೇವಮೂರ್ತಿ, ಐದಾರು ದಶಕದಲ್ಲಿ ಕೃಷಿ ಏನ್ನೇಲ್ಲಾ ಬದಲಾಗಿದೆ. ಎಷ್ಟು ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ. ಇದನ್ನೆ ಹೇಗೆ ಪರಿಹರಿಸಿಕೊಳ್ಳಬೇಕೆಂದರಲ್ಲದೆ. ಎರೆ ಹುಳ ಸಾಕಾಣಿಕೆ ಮತ್ತು ಅದರ ಉಪಯೋಗ ಕುರಿತು ತರಬೇತಿ ನೀಡಿದರು.

          ವೇದಿಕೆಯಲ್ಲಿ ಕೃಷಿ ಅಧಿಕಾರಿ ಶ್ರವಣಕುಮಾರ್, ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ ಭರಮಪ್ಪ, ಚಪ್ಪರದಹಳ್ಳಿ ಕೊಟ್ರೇಶ, ಬಂಡ್ರಿ ಸಿದ್ದರಾಮಪ್ಪ ಮುಂತಾದವರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here