ಅಹಿಂದದವರು ಬಿ.ಜೆ.ಪಿ ಹಿಂದಿಲ್ಲ ಎಲ್ಲಾರು ಸಿದ್ದರಾಮಯ್ಯನ ಹಿಂದಿದ್ದಾರೆ : ಜಿ ನಾರಾಯಣ್

0
5

ತಿಪಟೂರು :

       ತುಮಕೂರು ಜಿಲ್ಲೆಯಲ್ಲಿ ಕುರುಬ ಸಮಾಜ ಒಳಗೊಂಡಂತೆ ಸಣ್ಣ ಪುಟ್ಟ ಸಮುದಾಯಗಳಾದ ಗೋಲ್ಲ ಸಮಾಜ, ಮಡಿವಾಳ, ಉಪ್ಪಾರ, ಭೋವಿ, ಸಿಳ್ಳೆಕ್ಯಾತ, ದಲಿತ ಪರ ಸಂಘಟನೆಗಳು ಹಾಗೂ ಮಂತಾದ ಸಮಾಜಗಳು ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅಹಿಂದ ಪರವಿರುವ ಎಲ್ಲಾ ಸಂಘಟನೆಗಳು ನಮ್ಮ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದ ತುಮಕೂರು ಲೋಕಸಬಾ ಕ್ಷೇತ್ರದ ಅಬ್ಯರ್ಥಿ ಮಾಜಿ ಪ್ರಧಾನಿ ದೇವೆಗೌಡರನ್ನು ಬೆಂಬಲಿಸಬೇಕು ಎಂದು ಕಾಂಗ್ರೇಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ನಾರಾಯಣ್ ತಿಳಿಸಿದರು.

       ಇಂದು ಬೆಳಗ್ಗೆ ಹಾಸನ ರಸ್ತೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಕರೆದಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಅಹಿಂದ ವರ್ಗ ಬಿಜೆಪಿಯ ಅಸ್ತಿಯಲ್ಲ, ಯಾರು ಮೂರನೇ ವ್ಯಕ್ತಿ ಹೇಳಿದಂತೆ ನಮ್ಮ ಅಹಿಂದ ವರ್ಗದ ಬಂಧುಗಳು, ರೈತರು, ಬಡವರು, ದೇವೆಗೌಡರರನ್ನು ಬೆಂಬಲಿಸಿ ಅವರನ್ನು ಗೆಲ್ಲಿಸಿ ಹೊನ್ನವಳ್ಳಿ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸವು ಮಾಡಲಾಗುತ್ತದೆ. ನಮ್ಮ ಕಾಂಗ್ರೇಸ್ ಪಕ್ಷವು ದೇಶಕ್ಕೆ ವಿದ್ಯುತ್, ರಸ್ತೆ, ಶಾಲೆ, ಅನ್ನಭಾಗ್ಯದಂತಹ ಕೆಲಸಗಳನ್ನು ಮಾಡಿದ್ದು ಇನ್ನೂ ಹೆಚ್ಚಿನ ಕೆಲಸವನ್ನು ಮಾಡಲು ಸಹಕಾರಿಸಬೇಕು ಎಂದರು.

      ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು ಮಾತನಾಡಿ ಸೋಲುವ ಹತಾಶೆಯಲ್ಲಿ ಬಿಜೆಪಿಯ ನಾಯಕರು ಸುಳ್ಳು ಸುದ್ದಿಗಳನ್ನು ನೀಡುತ್ತಿದ್ದು, ಇವುಗಳನ್ನು ನಮ್ಮ ಸಮಾಜದ ಬಂಧುಗಳು ಕಿವಿಗೂಡದೆ, ನಮ್ಮ ತುಮಕೂರು ಜಿಲ್ಲೆಗೆ ದೇವೆಗೌಡರು ಅಭ್ಯರ್ಥಿಯಾಗಿ ಬಂದಿರುವುದೇ ನಮ್ಮ ಪುಣ್ಯವಾಗಿದ್ದು ಅವರನ್ನು ಗೆಲುವಿಗಿಂತ ಅದಿಕ ಮತದ ಅಂತರದ ಗೆಲವೇ ನಮ್ಮ ಹೋರಾಟವಾಗಿದೆ ಆದ್ದರಿಂದ ನಾವುಗಳು ಜ್ಯಾತ್ಯಾತೀತವಾಗಿ ಎಲ್ಲರೂ ತಮ್ಮ ಮತವನ್ನು ಜೆಡಿಎಸ್‍ಗೆ ನೀಡಬೇಕೆಂದು ಮನವಿ ಮಾಡಿದರು.

     ಪ್ರತಿಕಾಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಚಿದಾನಂದ್, ಯಾದವ ಸಂಘದ ಶಿವಪ್ಪ, ಕುರುಬ ಸಮಾಜದ ಶ್ರೀನಿವಾಸ್, ವಾಲ್ಮಕೀ ಸಮಾಜದ ತಾಲ್ಲೂಕು ಅಧ್ಯಕ್ಷ ಮಹೇಶ್, ಅಲ್ಪಸಂಖ್ಯಾತ ಸಮಾಜದ ಮೆಹಬೂಬ್, ಬಾಬಣ್ಣ, ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ಬೋವಿ ಸಮಾಜದ ಶಂಕರಪ್ಪ, ಹರೀಶ್ ಮತ್ತಿಹಳ್ಳಿ, ಪದ್ದಣ್ಣ ಹಾಗೂ ಮೊದಲಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here