ಟಿಪ್ಪುಮುಸ್ಲಿಂ ರಾಜನಾಗಿದ್ದರು ಹಿಂದೂಗಳಿಗೆ ಉನ್ನತ ಹುದ್ದೆಗಳನ್ನು ನೀಡಿದ್ದ:ಎಸ್ ರಾಮಪ್ಪ

ಹರಿಹರ:

         ಟಿಪ್ಪು ತಾನೊಬ್ಬ ಮುಸ್ಲಿಂ ರಾಜನಾಗಿದ್ದರು ಸಹ ತನ್ನ ಆಸ್ಥಾನದಲ್ಲಿ ಹಿಂದೂಗಳಿಗೆ ಉನ್ನತ ಹುದ್ದೆಗಳನ್ನು ನೀಡಿದ್ದ, ಅನೇಕ ಹಿಂದೂ ದೇವಾಲಗಳಿಗೆ ಕಾಣಿಕೆಯನ್ನು ಕೊಡುಗೆಯಾಗಿ ನೀಡಿವುದರ ಜೋತೆಗೆ ,ಒಮ್ಮೆ ಶೃಂಗೇರಿ ಮಠವನ್ನು ಮರಾಠರಿಂದ ರಕ್ಷಿಸಿದ ಧೀರ ಎಂದು ಶಾಸಕ ಎಸ್,ರಾಮಪ ಶ್ಲಾಘಿಸಿದರು.

        ನಗರದ ಗುರುಭವನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಚರಿಸಿದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತನ್ನ ಜೀವಿತಾವಧಿಯಲ್ಲಿ ಬ್ರಿಟಿಷರೊಂದಿಗೆ ನಾಲ್ಕು ಬಾರಿ ಯುದ್ಧ ಸಾರಿದ್ದ ವೀರ ಪುರುಷನಾಗಿದ್ದ ಮತ್ತು ಮೂರು ಬಾರಿ ಅವರೊಂದಿಗೆ ಯಶಸ್ವಿಯಾಗಿ ಯುದ್ಧ ನಡೆಸಿ ಬ್ರಿಟಿಷರಿಗೆ ಭಯ ಹುಟ್ಟಿಸಿದ ವ್ಯಕ್ತಿಯಾಗಿದ್ದ.ನಾಲ್ಕನೆಯ ಬಾರಿ ನಡೆದ ಯುದ್ಧದಲ್ಲಿ ಸೆರೆಯಾಗಿ ತನ್ನ ಕೊನೆಯುಸಿರೆಳೆದ.

       ಸುಲ್ತಾನ್ ಒಬ್ಬ ಹುಟ್ಟು ಹೋರಾಟಗಾರರಾಗಿದ್ದು, ತನ್ನ ಹದಿಮೂರನೇ ವಯಸ್ಸಿನಲ್ಲಿ ಬಾಲಕನಾಗಿದ್ದಾಗಲೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಧೀರ ವ್ಯಕ್ತಿಯಾಗಿದ್ದರು. ಈ ಹಿಂದೆ ಹರಿಹರದಲ್ಲಿ ಟಿಪ್ಪು ಜಯಂತಿಯನ್ನು ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈಗ ಕೆಲ ಕೋಮುವಾದಿ ವ್ಯಕ್ತಿಗಳಿಂದ ಸರಳವಾಗಿ ಆಚರಣೆ ಮಾಡುವಂತಹ ಸ್ಥಿತಿ ಬಂದಿದೆ,ಆದರೆ ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಅದ್ಧೂರಿಯಾಗಿ ಟಿಪ್ಪು ಜಯಂತಿ ಆಚರಿಸೋಣ ಎಂದು ಹೇಳಿದರು.

        ಈಗ ಕೇಂದ್ರದಲ್ಲಿ ಕೋಮುವಾದಿಗಳು ಅಧಿಕಾರ ನಡೆಸುತ್ತಿದ್ದು, ಬರೀ ಸುಳ್ಳು ಹೇಳಿ ಜನರನ್ನು ಮರಳು ಮಾಡಿ ಗೆದ್ದು ಬಂದು ಆಳ್ವಿಕೆ ನಡೆಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೆ ಮೋದಲು ಕಪ್ಪುಹಣ ವಾಪಸ್ ತಂದು ನಮ್ಮೆಲ್ಲರ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು.

        ಆದರೆ ಮೋದಿಯವರು ತಮ್ಮ ಆಳ್ವಿಕೆಯ ನಾಲ್ಕೂವರೆ ವರ್ಷ ಕಳೆದರೂ ಸಹ ಕೇವಲ ಲಕ್ಷಗಳಷ್ಟು ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡಲು ಸಾಧ್ಯವಾಗಿಲ್ಲ ಮತ್ತು ವಿದ್ಯಾವಂತ ನಿರುದ್ಯೋಗಿಗಳಿಗೆ ಪಕೋಡ ಮಾರಿ ಜೀವನ ಸಾಗಿಸಲು ಸಲಹೆ ನೀಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ನಯವಾಗಿಯೇ ತರಾಟೆಗೆ ತೆಗೆದುಕೊಂಡರು.

        ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಂಪಿ ಕನ್ನಡ ವಿವಿಯ ಡಾಕ್ಟರ್ ಅರುಣ್ ಅವರು ಮಾತನಾಡಿ ಟಿಪ್ಪು ಸುಲ್ತಾನ್ ಅವರನ್ನು ಬರೀ ಒಬ್ಬ ಮುಸ್ಲಿಂ ನಾಯಕ ಎನ್ನುವ ಚೌಕಟ್ಟಿನಲ್ಲಿ ನೋಡಬಾರದು, ಆತನನ್ನು ಬ್ರಿಟಿಷರು ತಮ್ಮ ಆಡಳಿತ ಅವಧಿಯಲ್ಲಿ ಈತನಿಂದ ನಮಗೆ ಬಹುದೊಡ್ಡ ಆತಂಕವಿದೆ ಎಂದು ಭಾವಿಸಿದ್ದ ಮೊದಲನೆಯ ರಾಜ ಟಿಪ್ಪು ವಾಗಿದ್ದನು.

      ಟಿಪ್ಪು ತನ್ನ ಆಡಳಿತದ ಅವಧಿಯಲ್ಲಿ ಧಾರ್ಮಿಕವಾಗಿ 154 ಹಿಂದೂ ದೇವಾಲಯಗಳಿಗೆ ಬೆಳ್ಳಿ ತಟ್ಟೆ, ಪೂಜಾ ಸಾಮಗ್ರಿ ಹಾಗೂ ಜಮೀನುಗಳನ್ನು ಉಂಬಳಿಯಾಗಿ ನೀಡಿದ್ದ.ಆತನ ಆಡಳಿತದ ಅರಮನೆಯಲ್ಲಿ ನಿರ್ಣಾಯಕವಾದ ಸ್ಥಳಗಳಲ್ಲಿ ಹಿಂದೂಗಳಿಗೆ ಹೆಚ್ಚಿನ ಅವಕಾಶವನ್ನು ನೀಡಿದ್ದನು.

        ಆತನ ಆಡಳಿತದ ಸಂದರ್ಭದಲ್ಲಿ ದಲಿತರಲ್ಲಿ ಚಾಲ್ತಿಯಲ್ಲಿದ್ದ ಜೀತ ಪದ್ಧತಿಯನ್ನು ರದ್ದುಪಡಿಸಿ ಜೀತ ಮಾಡುತ್ತಿದ್ದ ದಲಿತರಿಗೆ ತನ್ನ ಕೆರೆಗಳಲ್ಲಿ ನೀರು ಗಂಟೆಗಳನ್ನಾಗಿ ನೇಮಕ ಮಾಡಿದ್ದ.ರೈತರ ಅನುಕೂಲಕ್ಕಾಗಿ ಆಗಿನ ಕಾಲದಲ್ಲಿಯೆ ಸುಮಾರು 16 ಸಾವಿರ ಬಾವಿಗಳನ್ನು,24ಕಡೆ ಅಣೆಕಟ್ಟು, ಚಿಕ್ಕ ಚಿಕ್ಕ ಬ್ಯಾರೇಜ್ ಮಾದರಿಯಲ್ಲಿ ಒಡ್ಡುಗಳನ್ನು ನಿರ್ಮಾಣ ಮಾಡಿದ್ದ.30 ಲಕ್ಷಯ ಎಕರೆ ಪ್ರದೇಶದಲ್ಲಿ 8 ಲಕ್ಷ ಎಕರೆಯಷ್ಟು ಪ್ರದೇಶದಲ್ಲಿ ನೀರಾವರಿಯ ವ್ಯವಸ್ಥೆ ಗೊಳಿಸಿದ್ದನು.

          ಟಿಪ್ಪುವಿನ ಜೀವನ ಚರಿತ್ರೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದವರು ಯಾರೂ ಸಹ ಆತನನ್ನು ವಿರೋಧಿಸಲು ಸಾಧ್ಯವಿಲ್ಲ ಆತನ ಬಗ್ಗೆ ಸಂಪೂರ್ಣವಾಗಿ ತಿಳಿಯದ ಕೆಲವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

          ಈ ವೇಳೆ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಜಯಮ್ಮ ಬಸವನಗೌಡ, ತಹಸೀಲ್ದಾರ್ ಆರ್. ವೆಂಕಟಮ್ಮ ,ನಗರಸಭೆ ಸದಸ್ಯರುಗಳಾದ ಬಿ.ಕೆ. ಸಯ್ಯದ್ ರೆಹಮಾನ್,ಎಜಾಜ್ ಅಹ್ಮದ್,ಕೆ.ಮರಿದೇವ,ವಸಂತ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್. ಬಿ .ಹನುಮಂತಪ್ಪ ,ಮುಖಂಡರುಗಳಾದ ಎಸ್ ಬಾಬುಲಾಲ್, ಸನಾವುಲ್ಲಾ, ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ತಾಲ್ಲೂಕು ನಿರ್ವಹಣಾಧಿಕಾರಿ ಕೆ.ನೀಲಗಿರಿಯಪ್ಪ, ಬಿಇಒ ಡಿ.ನರಸಿಂಹಪ್ಪ,ಸಿಪಿಐ ಐ.ಎಸ್ .ಗುರುನಾಥ್ ಮತ್ತು ಅನೇಕ ಮುಸ್ಲಿಂ ಬಾಂಧವರು ಗಳು ಮತ್ತು ಶಾಲಾ ಮಕ್ಕಳುಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap