ಮುಸ್ಲಿಂ ಮುಖಂಡರಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ

0
3

ಹರಪನಹಳ್ಳಿ

       ಮುಸ್ಲಿಂ ಮುಖಂಡರಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಸಿದರು.ಪಟ್ಟಣದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರದಲ್ಲಿ ಅಂಜುಮನ್-ಏ-ಇಸ್ಲಾಹುಲ್ ಮುಸ್ಲಿ ಮೀನ್ ಸಂಸ್ಥೆಯ ಅಧ್ಯಕ್ಷ ಡಿ.ಮುಜೀಬುರ್ ರಹಮಾನಸಾಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡಿ ಮಾತನಾಡಿ, ಅಂಬೇಡ್ಕರ್ ಅವರ ಜ್ಞಾನ ಸಂಪತ್ತನ್ನು ಮೆಚ್ಚಿ ವಿಶ್ವದ ಅನೇಕ ದೇಶಗಳು ಇಂದು ಕೊಂಡಾಡುತ್ತಿವೆ.

       ಅವರು ನೀಡಿದ ಸಂವಿಧಾನ ದೇಶಕ್ಕೆ ಸುಭದ್ರವಾದ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸುವಲ್ಲಿ ಯಶಸ್ವಿಯಾಗಿದೆ. ಮತದಾನದ ಹಕ್ಕು ದೇಶದಲ್ಲಿ ಎಲ್ಲ ಪ್ರಜೆಗಳ ಹಕ್ಕು ಎಂದು ಸಾರಿ ಮತದಾನ ಜನರ ಅಸ್ತ್ರ ಎಂದು ಸಾಬೀತು ಪಡಿಸಿದ್ದಾರೆ ಎಂದರು.ಪುರಸಭೆ ಮಾಜಿ ಸದಸ್ಯ ಡಿ.ಜಾವೂರ್, ವಕೀಲ ಹಾಗೂ ಮಾಜಿ ಪುರಸಭೆ ಸದಸ್ಯ ಸಿ.ಪೀರ್ ಅಹಮ್ಮದ್, ಮುಖಂಡರಾದ ಎಂ.ಬಿ.ಮರ್ದಾನಾಲಿ, ಜಮೀರ್‍ಬೇಗ್, ಇಪ್ತಿಯಾರ್ ಅಹ್ಮದ್, ರಜ್ವೆ ಹಾಗೂ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here