ಶಿರಾ ತಾ.ಮಾರನಗೆರೆ ಅಂಗನವಾಡಿ ಕಾರ್ಯಕರ್ತೆಗೆ ರಾಷ್ಟ್ರ ಪ್ರಶಸ್ತಿ

0
7

ಶಿರಾ:

       ತಾಲ್ಲೂಕಿನ ಗೌಡಗೆರೆ ಹೋಬಳಿಯ ಅಂಗನವಾಡಿ ಕಾರ್ಯರ್ತೆಯೊಬ್ಬರು ಪ್ರಮಾಣಿಕ ಕರ್ತವ್ಯ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಆಕೆಯ ಪರಿಶ್ರಮವನ್ನು ಗುರ್ತಿಸಿರುವ ಕೇಂದ್ರ ಸರಕಾರ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

        ತಾಲ್ಲೂಕಿನ ಮಾರನಗೆರೆಯ ಕೆ.ಮಹದೇವಮ್ಮ ಎಂಬಾಕೆ ರಾಷ್ಟ್ರ ಪ್ರಶಸ್ತಿಯ ಪುರಸ್ಕಾರಕ್ಕೆ ಭಾಜನರಾದವರಾಗಿದ್ದು ಪ್ರಸ್ತುತ ರಾಜ್ಯ ಸರ್ಕಾರವು ತುಮಕೂರು, ದಾವಣಗೆರೆ, ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಯಿಂದ ತಲಾ ಒಬ್ಬರ ಹೆಸರನ್ನು ಪ್ರಸ್ತಾವನೆಗೆಂದು ಕಳಿಸಿದ್ದು ಈ ನಾಲ್ವರ ಪೈಕಿ ಶಿರಾದ ಕೆ.ಮಹದೇವಮ್ಮ ಕೂಡಾ ಒಬ್ಬರಾಗಿದ್ದಾರೆ.

          ನಿನ್ನೆ ದೆಹಲಿಯಲ್ಲಿ ನಡೆದ ಪುರಸ್ಕಾರ ಸಮಾರಂಭದಲ್ಲಿ ಮಹದೇವಮ್ಮನಿಗೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾಗಾಂಧಿ 50,000 ರೂಗಳ ನಗದು ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here