ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ

ಕೊರಟಗೆರೆ:-

        ಬರಗಾಲದಿಂದ ಸತತ 10-15 ವರ್ಷಗಳಿಂದ ಕೊರಟಗೆರೆಕ್ಷೇತ್ರ ಬಳಲಿರುವ ಹಿನ್ನೆಲೆಯಲ್ಲಿರಾಜ್ಯದ ಸುಪ್ರಸಿದ್ದ ಕ್ಯಾಮೇನಹಳ್ಳಿ ದನಗಳ ಜಾತ್ರೆಗೆರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸುವ ಜಾನುವಾರುಗಳ ಸಂಖ್ಯೆಗಣನೀಯವಾಗಿಕುಂಠಿತವಾಗಿರುವುದು ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ ಕಳೆಗುಂದಿದೆ ಎಂದುತುಮಕೂರು ಸಂಸದ ಮುದ್ದಹನುಮೇಗೌಡ ವಿಷಾದ ವ್ಯಕ್ತಪಡಿಸಿದರು.

     ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಮೇನಹಳ್ಳಿಯ ಇತಿಹಾಸ ಪ್ರಸಿದ್ದ ಶ್ರೀಆಂಜನೇಯ ಸ್ವಾಮಿ ಧನಗಳ ಜಾತ್ರೆಗೆ ಶನಿವಾರ ಬೇಟಿ ನೀಡಿತಾಲ್ಲೂಕ್ ಆಡಳಿತದಿಂದ ಆಯೋಜನೆಗೊಳಿಸಲಾಗಿದ್ದ ಉತ್ತಮ ರಾಸುಗಳ ಆಯ್ಕೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, ಸತತ ಬರಗಾಲ ಛಾಯೆಗೆ ಸಿಲುಕಿ ರೈತ ನಲುಗಿ ಹೋಗಿದ್ದು, ಜಾನುವಾರುಗಳ ಪಾಲನೆ ಪೋಷಣೆ ಕುಂಠಿತವಾಗಿರುವುದರಿಂದ ದನಗಳ ಜಾತ್ರಾ ಮಹೋತ್ಸವ ಸಹ ಕಳೆಗುಂದಂತಾಗಿದೆ ಎಂದರು.

      ಸಂಕ್ರಾಂತಿಯ ಮಾರನೇಯ ದಿನದಿಂದ 20ದಿನಗಳ ಕಾಲ ನಡೆಯುವ ಕ್ಯಾಮೇನಹಳ್ಳಿ ಜಾತ್ರೆಯಲ್ಲಿ ವಿಶೇಷ ತಳಿಯ ಜಾನುವಾರುಗಳು ರಾಜ್ಯ ಮತ್ತು ಹೊರರಾಜ್ಯದಿಂದ ಬಂದಿವೆ. ರಾಜ್ಯದ ಡಿಸಿಎಂ ಸೂಚನೆಯ ಮೇಲೆ ಜಾತ್ರೆಗೆ ಬರುವಂತಹಎತ್ತಿನಗಾಡಿ, ಜಾನುವಾರು ಮತ್ತು ಅಂಗಡಿಗಳಿಗೆ ಸುಂಕವನ್ನು ಕಡಿತಗೊಳಿಸಿ ಉಚಿತ ಪ್ರವೇಶ ನೀಡಲಾಗಿದೆಎಂದು ಹೇಳಿದರು.

       ಸಾರ್ವಜನಿಕರ ಅಹವಾಲು ಆಲಿಸಿಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇಗೆ ದೂರವಾಣಿಕರೆ ಮಾಡಿ ಕೊರಟಗೆರೆ ಕ್ಷೇತ್ರದ ಸಿದ್ದರಬೇಟ್ಟ, ಬೈಚಾಪುರ, ಪಾತಗಾನಹಳ್ಳಿ ಮತ್ತು ಬೊಮ್ಮಲದೇವಿಪುರಗ್ರಾಪಂ ವ್ಯಾಪ್ತಿಯಲ್ಲಿಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದು ತಕ್ಷಣ ಸ್ಪಂದಿಸಿ ಆಯಾಗ್ರಾ .ಪಂ ಗಳ ಪಿಡಿಒ ಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿ ಶೀಘ್ರ ಪರಿಹರಿಸುವಂತೆ ಸೂಚಿಸಿದರು.

        ಕಳೆದ 6ವರ್ಷಗಳ ಹಿಂದೆ ಪ್ರವಾಸೋಧ್ಯಮಇಲಾಖೆಯಿಂದ 50ಲಕ್ಷ ವೆಚ್ಚದಲ್ಲಿ ನಿರ್ಮಾಣವಾದಯಾತ್ರಿ ನಿವಾಸ ಈವರೆಗೂ ಮುಜರಾಯಿ ಇಲಾಖೆಗೆ ಹಸ್ತಾಂತರಿಸದಿರುವುದರ ಬಗ್ಗೆ ಹಾಗೂ ಪ್ರಾರಂಭಗೊಳಿಸದೇ ಪಾಳು ಬೀಳಿಸಿರುವುದರ ಬಗ್ಗೆ ಅಸಮದಾನ ವ್ಯಕ್ತಪಡಿಸಿ ಪ್ರವಾಸೋದ್ಯಮ ಇಲಾಖೆ ಈವರೆಗೂ ನಿರ್ಲಕ್ಷ ವಹಿಸಿರುವುದರ ಬಗ್ಗೆ ಅಧಿಕಾರಿಗಳಿಂದ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಹಾಗೂ ಸಂಬಂದಪಟ್ಟ ಅಧಿಕಾರಿಗಳ ವಿರುದ್ದಕ್ರಮಜರುಗಿಸಲು ಮೇಲಧಿಕಾರಿಗಳ ಜೊತೆಚರ್ಚಿಸಲಾಗುವುದುಎಂದರು.

       ಡ್‍ಆರ್ಮಿ ಅಧಿಕಾರಿಗಳಿಗೆ ತರಾಟೆ;- ಸ್ಥಳಿಯ ಕೆಲವು ಕಾಂಗ್ರೆಸ್ ಮುಖಂಡರುಗಳು ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೆ ಸ್ಥಾನ ಹೊಂದಿರುವಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿದೇವಾಲಯಕ್ಕೆ ಹೊಂದಿಕೊಂಡಂತೆಕಡು ಬಡವರಿಗೆ ಅನುಕೂಕಲವಾಗುವ ರೀತಿಯಲ್ಲಿ ಕಡಿಮೆ ಮೊತ್ತದಲ್ಲಿಕಲ್ಯಾಣ ಮಂಟಪ ದೊರೆಯುತ್ತಿತ್ತು ಇತ್ತೀಚೆಗೆ ಕಳೆದ 2-3 ವರ್ಷಗಳಿಂದ ರಿಪೇರಿ ಹೆಸರಿನಲ್ಲಿ ಬಾಗಿಲು ಮುಚ್ಚಲಾಗಿದ್ದು, ಅಭಿವೃದ್ದಿಯ ಕೆಲಸ ಕೈಗೊಳ್ಳದೇ ಪಾಳುಬಿದ್ದಿದೆಎಂದು ಸಂಸದರಿಗೆ ಗಮನ ಸೆಳೆದಿದ್ದಲ್ಲದೆ ಬರುವ ಭಕ್ತಾದಿಗಳಿಗೆ ಶೌಚಾಲಯದ ವ್ಯವಸ್ಥೆಇಲ್ಲದೆ ಭಕ್ತಾಧಿಗಳು ಪರಿತಪ್ಪಿಸುವಂತಾಗಿದೆ ಈ ಹಿಂದೆ 12 ಲಕ್ಷರೂ ಮೌಲ್ಯದಲ್ಲಿ ನಿರ್ಮಿತಿಕೇಂದ್ರದಿಂದ ಪೂರ್ಣಗೊಂಡ ಶೌಚಾಲಯಈವರೆಗೂ ಪ್ರಾರಂಭವಾಗದಕಾರಣ ಕಳೆದ 4-5 ವರ್ಷಗಳಿಂದಲೂ ಪಾಳು ಬಿದ್ದಿದೆ ಎಂಬ ಆರೋಪಕ್ಕೆಖುದ್ದು ಸಂಸದರೆ ಭೇಟಿ ನೀಡಿದೂರವಾಣಿ ಮೂಲಕ ಸಂಬಂದಪಟ್ಟ ಅಧಿಕಾರಿಗಳು ಹಾಗೂ ಮಧುಗಿರಿ ಉಪವಿಭಾಗಾಧಿಕಾರಿಗಳಿಗೆ ದೂರವಾಣಿಕರೆ ಮಾಡಿ ಸಂಬಂದ ಪಟ್ಟವರ ವಿರುದ್ದ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.

        ಈ ಸಂದರ್ಬದಲ್ಲಿತಾಪಂಉಪಾಧ್ಯಕ್ಷೆ ನರಸಮ್ಮ, ಸದಸ್ಯರಾದ ಟಿ.ಸಿ.ರಾಮಯ್ಯ, ಈರಣ್ಣ, ನಾಜೀಮಾ, ಜ್ಯೋತಿಸ್ವಾಮಿ, ಶ್ಯಾಮಲರಾಮಸ್ವಾಮಿ, ವೆಂಕಟಪ್ಪ, ಸುಮರಾಜು, ಬ್ಲಾಕ್‍ಕಾಂಗ್ರೇಸ್‍ಅದ್ಯಕ್ಷಅಶ್ವತ್ಥನಾರಾಯಣ, ಗ್ರಾಪಂಅಧ್ಯಕ್ಷರಾದರವಿಕುಮಾರ್, ಸದಸ್ಯರಾದಜಯರಾಂ, ಉಮೇಶ್, ಶಶಿಕುಮಾರ್, ಮುಖಂಡರಾದಕವಿತನರಸಪ್ಪ, ಉಮಾರಾಧ್ಯ, ಮೈಲಾರಪ್ಪ, ನರಸಿಂಹಮೂರ್ತಿ ಸೇರಿದಂತೆಇತರರುಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap