ಅನುಭವ ಮಂಟಪ ಮಾದರಿ ಸಂಸತ್ತಿಗಾಗಿ ಕಾಂಗ್ರೆಸ್ ಬೆಂಬಲಿಸಿ

0
5

ಸಂತೇಬೆನ್ನೂರು

       12ನೇ ಶತಮಾನದ ಬಸವಣ್ಣನವರ ಸರ್ವ ಜನಾಂಗಳನ್ನು ಸೇರಿಸಿ ನಿರ್ಮಿಸಿದ್ದ ಅನುಭವ ಮಂಟಪದ ಮಾದರಿಯ ಸಂಸತ್ ಸ್ಥಾಪನೆಗಾಗಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‍ನ್ನು ಪಕ್ಷವನ್ನು ಬೆಂಬಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಕರೆ ನೀಡಿದರು.

       ಇಲ್ಲಿಯ ಜಾಮಿಯಾ ಶಾದಿಮೆಹಲ್‍ನಲ್ಲಿ ನಡೆದ ಸಭೆಯಲ್ಲಿ ಅಲ್ಪ ಸಂಖ್ಯಾತ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ದಾವಣಗೆರೆ ಲೋಕ ಸಭಾ ಕ್ಷೇತ್ರದಲ್ಲಿ ಮತದಾರನ ಪಾತ್ರ ಬಹಳ ಪ್ರಮುಖವಾಗಿದ್ದು ತಪ್ಪದೇ ಮತ ಚಲಾಯಿಸುವ ಮೂಲಕ ಕಾಂಗ್ರೆಸ್‍ನ ಹೆಚ್.ಬಿ.ಮಂಜಪ್ಪನವರನ್ನು ಅತ್ಯಧಿಕ ಮತಗಳಿಂದ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

        ಸ್ವಾತಂತ್ರ್ಯದ ನಂತರ ದೇಶವು ಆಹಾರಕ್ಕಾಗಿ ಬೇರೆ ದೇಶದವರನ್ನು ಅವಲಿಂಬಿಸಿ, ಅತಂತ್ರ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ನೆಹರು ಅವರು ಹಸಿರು ಕ್ರಾಂತಿ ಮತ್ತು ಕೈಗಾರಿಕಾ ಕ್ರಾಂತಿಯೊಂದಿಗೆ ದೇಶವನ್ನು ಸ್ವಾವಲಂಬನೆಗೆ ತಂದು ನಿಲ್ಲಿಸಿದ್ದರು. ನಂತರದಲ್ಲಿ ಇಂದಿರಾಜೀ, ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರು ದೇಶವದನ್ನು ದೇಶಪ್ರಗತಿಯತ್ತ ಕೊಂಡ್ಡೊಯದ್ದರು ಎಂದರು.

      ದಾವಣಗೆರೆ ಜಿಲ್ಲೆ ವಕ್ಪ್‍ಬೋರ್ಡ್ ಅಧ್ಯಕ್ಷ ಮಹಮ್ಮದ್ ಸಿರಾಜ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸುತ್ತಾ ಶಾದಿಭಾಗ್ಯ, ಶಾದಿಮಹಲ್ ಯೋಜನೆ ಅಲ್ಪಸಂಖ್ಯಾಂತರ ಶಿಕ್ಷಣ, ಸ್ವ-ಉದ್ಯೋಗಕ್ಕೆ ಪ್ರಾಮುಖ್ಯತೆ ಕೊಟ್ಟು ಆರ್ಥಿಕ ಸಹಾಯದೊಂದಿಗೆ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ನಾವು ಸಹ ಎಂಬ ಗುರುತಿನೊಂದಿಗೆ ಇರಲು ಅವಕಾಶ ಮಾಡಿಕೊಟ್ಟ ಸಮಾಜಿಕ ನ್ಯಾಯಬದ್ದತೆಗೆ ಅನುಕೂಲಮಾಡಿಕೊಟ್ಟ ಸರ್ಕಾರಕ್ಕೆ ನಮ್ಮ ಬೆಂಬಲ ನೀಡುವ ಅವಶ್ಯಕತೆ ಇದೆ ಎಂದರು.

        ಕಾರ್ಯಕ್ರಮದಲ್ಲಿ ಮುತುವಲ್ಲಿ ಕೆ.ಏಜಾಜ್ ಅಹ್ಮದ್, ಕರೆಕಟ್ಟೆ ಸಮೀವುಲ್ಲಾ ಸಾಬ್, ಹಾಜಿ ಇಲಿಯಾಜ್ ಸಾಬ್, ಹಾಜಿ ಮೀರ್ಜಾ ಇಸ್ಮಾಯಿಲ್, ಜಿಲ್ಲಾ ವಕ್ಪ್ ಉಪಾದ್ಯಕ್ಷರಾದ ಕೆ.ಸಿರಾಜ್ ಅಹ್ಮದ್, ಅಮ್ಜದ್ ಹಜರತ್, ಅಲ್ತಾಪ್, ಎಸ್.ಕೆ.ರಹಮತ್‍ವುಲ್ಲಾ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here