ಪಾವಗಡ : ಸ್ವಾಮೀಜಿ ಸೇವೆಗೆ ಸಚಿವರ ಶ್ಲಾಘನೆ

0
20

ತುಮಕೂರು

         ‘‘ಪಾವಗಡ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿಯವರು ಸಲ್ಲಿಸುತ್ತಿರುವ ಮಾನವೀಯ ಸೇವಾ ಕಾರ್ಯಗಳು ಮಹತ್ತರವಾದುದಾಗಿದೆ’’ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಮುಕ್ತಕಂಠದಿಂದ ಪ್ರಶಂಸಿಸಿದರು.

        ಪಾವಗಡ ಪಟ್ಟಣದ ಕಾಳಿದಾಸ ನಗರದ ನಿವಾಸಿಗಳಿಗೆ ದೀಪಾವಳಿ ಕೊಡುಗೆಯೆಂಬಂತೆ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮವು ಇನ್ಫೋಸಿಸ್ ಫೌಂಡೇಷನ್ ಸಹಯೋಗದೊಂದಿಗೆ ಸ್ಥಳೀಯ ನಾಗರಿಕರು ಮತ್ತು ಜನಪ್ರತಿನಿಧಿಗಳ ಒತ್ತಾಸೆಯಂತೆ ನಿರ್ಮಿಸಿರುವ ‘‘ಶುದ್ಧ ಕುಡಿಯುವ ನೀರಿನ ಘಟಕ’’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

         ‘‘ಸ್ವಾಮೀಜಿಯವರು ಪಾವಗಡ ತಾಲ್ಲೂಕಿನಲ್ಲಿ ನೊಂದ ಜನರ ಅನುಕೂಲಕ್ಕಾಗಿ ಕೈಗೊಳ್ಳುತ್ತಿರುವ ಎಲ್ಲ ರೀತಿಯ ಸೇವಾ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ಹಾಗೂ ಬೆಂಬಲ ಇದೆ’’ ಎಂದು ಸಚಿವರು ತಿಳಿಸಿದರು.

          ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡುತ್ತ, ‘‘ಪಾವಗಡ ತಾಲ್ಲೂಕಿನಲ್ಲಿ ಶ್ರೀ ಸ್ವಾಮಿ ಜಪಾನಂದಜಿಯವರು ಅನೇಕ ವಿ‘ದ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಯು ಅತ್ಯಂತ ಮಹತ್ತರವಾದುದಾಗಿದೆ’’ ಎನ್ನುತ್ತ ಸ್ವಾಮೀಜಿಯವರಿಗೆ ಕೃತಜ್ಞತೆ ಸಲ್ಲಿಸಿದರು.

         ಪಾವಗಡ ಪುರಸಭೆಯ ಅಧ್ಯಕ್ಷೆ ಸುಮಾ ಅನಿಲ್ ಮಾತನಾಡಿ, ಪಾವಗಡದಂತಹ ಬರಪೀಡಿತ ಪ್ರದೇಶದಲ್ಲಿ ಸ್ವಾಮೀಜಿಯವರ ಸೇವಾ ಕಾರ್ಯಗಳು ವರಪ್ರದವಾಗಿವೆ. ಸ್ವಾಮೀಜಿಯವರ ಸೇವೆಯು ಇನ್ನೂ ಮುಂದುವರೆಯಲಿ. ಇದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸ್ವಾಮಿ ಜಪಾನಂದಜಿ ಅವರು, ಸರ್ಕಾರದ ಯಾವುದೇ ಧನಸಹಾಯವಿಲ್ಲದೆ ತಾವು ಇಲ್ಲಿ ಇಂತಹ ಸೇವಾ ಕಾರ್ಯ ಕೈಗೊಂಡಿದ್ದು, ನೊಂದ ಜನರಿಗಾಗಿ ನಡೆಸುತ್ತಿರುವ ಇಂಥ ಸೇವಾ ಕಾರ್ಯಕ್ಕೆ ಎಲ್ಲ ಸಹೃದಯರು ಸಹಕಾರ ನೀಡಬೇಕು ಎಂದು ಕೋರಿದರು.

        ಸಮಾರಂ‘ದಲ್ಲಿ ಹಿರಿಯ ಮುಖಂಡ ಟಿ.ನರಸಿಂಹಯ್ಯ, ಪುರಸ‘ಾ ಸದಸ್ಯರು ಗಳಾದ ವಸಂತಕುಮಾರ್, ರಿಜ್ವಾನ್, ವೆಂಕಟೇಶ್, ನಾಗರಾಜು, ಮುಖ್ಯಾಧಿಕಾರಿ ಜಿ. ನವೀನ್‌ಚಂದ್ರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಮನು ಮಹೇಶ್ ಸ್ವಾಗತಿಸಿದರು. ಸುದೇಶ್ ಕುಮಾರ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here