ಬಸವಣ್ಣನ್ನ ಸಮಾದಿಗೆ ಪೊಜೆ ಹಾಗೂ ಆರಾಧನೆ ಕಾರ್ಯಕ್ರಮ

0
14

ಚೇಳೂರು 

         ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಭಗವಂತನಿಗೆ ಅರ್ಪಿತವಾಗುವಂತೆ ಮಾಡಿದರೆ ಅದು ಸದ ನಮ್ಮಗಳ ರಕ್ಷಣೆ ಮಾಡುತ್ತಾದೆ ಎಂದು ತೆವಡೆಹಳ್ಳಿಯ ಗೋಸಲ ಮಠದ ಶ್ರೀಗೋಸಲಚನ್ನಬಸವೇಶ್ವರಶಿವಚಾರ್ಯಸ್ವಾಮಿಗಳು ಹೇಳಿದರು.

          ಇವರು ಚೇಳೂರಿನ ಶ್ರೀದೃಷ್ಠಶ್ವೇರಸ್ವಾಮಿ ದೇವಾಲಯದ ಅವರಣದಲ್ಲಿ ಮೃತ ಬಸವಣ್ಣನ್ನ ಸಮಾದಿಗೆ ಪೊಜೆ ಹಾಗೂ ಆರಾಧನೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತ ಇತಂಹ ಮೂಕ ಪ್ರಾಣಿಯು ಮೃತ ಪಟ್ಟಾಗ ಅದರ ಆರಾಧನೆ ಮಾಡುತ್ತಿರುವುದು ಅರ್ಥ ಪೂರ್ಣವಾದ ಸಂದೇಶವಾಗಿದೆ.

        ಗೋವುನಲ್ಲಿ 360 ಕೋಟಿ ದೇವನು ದೇವತೆಗಳು ವಾಸ ಮಾಡಿರುತ್ತಾರೆ. ಗೋವುನ್ನು ಮಾತೆಯ ಸ್ವರೂಪದಲಿ ಪೂಜಿಸುವ ಹಿಂದೂಗಳು ನಾವು. ಈ ಗೋ ಮಾತೆಯ ಮೂತ್ರವು ಹಲವು ರೋಗಕ್ಕೆ ರಾಮಬಾಣವಾಗಿದೆ ಜೊತೆಗೆ ಹಲವು ಕಾರ್ಯಗಳ ಪವಿತ್ರತೆಗೆ ಗೋ ಮೂತ್ರವನ್ನು ನಾವುಗಳು ಬಳಸುತ್ತಾವೆ. ಇತಂಹ ಪವಿತ್ರವಾದ ಗೋ ದೇಹ ಮೃತ ಪಟ್ಟಾಗ ಅದರ ಸಂಸ್ಕಾರವನ್ನು ವಿಧಿವಿಧಾನವಾಗಿ ಮಾಡಿ ದಾಸೋಹ ಮಾಡಿಸುವುದು ಒಂದು ಪುಣ್ಯದ ಕೆಲಸವಾಗಿದೆ ಹಾಗೂ ಇತಂಹ ಆರಾಧನೆಯ ಕಾರ್ಯ ಈ ಸಮಾಜಕ್ಕೆ ಉತ್ತಮವಾದ ಮಾದರಿಯಾಗಿದೆ ಎಂದರು.

        ಈ ಕಾರ್ಯಕ್ರಮದಲಿ ಜಿಪಂ ಸದಸ್ಯೆ ಕೆ.ಆರ್.ಭಾರತಿಹಿತೇಶ್,ಗ್ರಾಪಂ ಅದ್ಯಕ್ಷೆ ಗಂಗಮ್ಮಬಸವರಾಜು,ಗೋಶಾಲೆಯ ಜಿ . ಎಸ್ . ಪ್ರಸನ್ನಕುಮಾರ್,ಸಿ.ಎಂ.ಹಿತೇಶ್,ಸಿ.ಎನ್.ಬಸವರಾಜು,ಎಸ್.ಎಸ್.ರಾಜಶೇಖರಯ್ಯ,ಶಿವಕುಮಾರ್,ಗುರುಲಿಂಗಯ್ಯ.ಜಗನ್ನಾಥ್.ಹರೀಶ್,ಹಾಗೂ ಇತರರು ಬಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here